ಬೆಳ್ತಂಗಡಿ: ಮಡಂತ್ಯಾರು ಸಮೀಪದ ಪಾರೆಂಕಿಯಲ್ಲಿ ಕಾಡಿನಿಂದ ದಾರಿತಪ್ಪಿ ಬಂದ ಚಿರತೆ ಬಾವಿಗೆ ಬಿದ್ದಿತು.ಬೆಳ್ತಂಗಡಿ ಅರಣ್ಯ ಇಲಾಖೆಯವರ ಸಹಯೋಗದಲ್ಲಿ ಇದನ್ನು ಮೇಲೆತ್ತಿ 24 ತಾಸಿನ ಬಳಿಕ ಚಿರತೆಗೆ ಜಲವಾಸದಿಂದ ಮೋಕ್ಷ ಸಿಕ್ಕಿತು. ಚಿರತೆಯನ್ನು ಪಿಲಿಕುಳ ನಿಸರ್ಗಧಾಮಕ್ಕೆ ಕೊಂಡೊಯ್ಯಲಾಗಿದೆ. ಈ ಸಂದರ್ಭ ಕುತೂಹಲಿಗಳು ಸೇರಿದ್ದರು. ಶನಿವಾರ ರಾತ್ರಿವರೆಗೆ ಕಾರ್ಯಾಚರಣೆ ನಡೆದಿದೆ.