ಮುಂಬಯಿ : 2011-12 ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಬೋರಿವಲಿ ಮೇರಿ ಇಮಾಕುಲೇಟ್ ಹೈಸ್ಕೂಲಿನ ವಿದ್ಯಾರ್ಥಿನಿ ನಿಶಿತಾ ಶಂಕರ ಸುವರ್ಣ ಅವರು 93.45 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದು, ಬೋರಿವಲಿ ಶಾಸಕ ವಿನೋದ್ ಗೋಸಾಲ್‌ಕರ್, ಐಸಿ ಕಾಲೋನಿಯ ನಗರ ಸೇವಕ ಅಭಿಷೇಕ್ ಗೋಸಾಲ್‌ಕರ್ ಅವರು ನಿಶಿತಾ ಅವರ ಮನೆಗೆ ತೆರಳಿ ಹೂಗುತ್ಛ, ಸಿಹಿತಿಂಡಿ, ಪಾರಿತೋಷಕವನ್ನು ನೀಡಿ ಸಮ್ಮಾನಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ವಿನೋದ್ ಗೋಸಾಲ್‌ಕರ್, ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟು ದಯಾನಂದ ಕುಮಾರ್, ಸಮಾಜ ಸೇವಕ ಶಿವರಾಮ್ ಅಮೀನ್, ನಿಶಿತಾ ಅವರ ತಂದೆ ಶಂಕರ್ ಸುವರ್ಣ ಅವರು ಉಪಸ್ಥಿತರಿದ್ದರು.