Monday, May 20, 2013
Last Updated: 1:45:18 AM IST
  • ನಾನೆಲ್ಲಿರುವೆ:
  • ಮುಖಪುಟ ಹೊರನಾಡು ಕನ್ನಡಿಗ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬಂಟರ ಸಂಘ ಪುಣೆ ಉತ್ತರ-ಪಶ್ಚಿಮ ಪ್ರಾದೇಶಿಕ ಸಮಿತಿ
    • ವಾರ್ಷಿಕ ಸ್ನೇಹ ಸಮ್ಮಿಲನ
      • Udayavani | Jul 15, 2012

        ಪುಣೆ : ಪುಣೆ ಬಂಟರ ಸಂಘದ ಉತ್ತರ -ಪಶ್ಚಿಮ ಪ್ರಾದೇಶಿಕ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ ಜು.21ರಂದು ಶನಿವಾರ ಸಂಜೆ 3.30 ಗಂಟೆಗೆ ಕೋಥ್ರೋಡ್‌ ಪರಿಸರದ ಯಶವಂತ್‌ರಾವ್‌ ಚವಾಣ್‌ ನಾಟ್ಯಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ.

        ಪುಣೆ ಬಂಟರ ಸಂಘದ ಅಧ್ಯಕ್ಷ ಸದಾನಂದ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಸ್ನೇಹ ಸಮ್ಮಿಲನದಲ್ಲಿ ಮೂಡಬಿದ್ರೆ ಆಳ್ವಾಸ್‌ ಎಜ್ಯುಕೇಶನ್‌ ಸೆಂಟರ್‌ ರೂವಾರಿ ಡಾ| ಮೋಹನ್‌ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ.

        ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಇದರ ಮಾತೃಭೂಮಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಕಾರ್ಯಾಧ್ಯಕ್ಷ ಕೆ.ಡಿ.ಶೆಟ್ಟಿ ಉಪಸ್ಥಿತರಿರುತ್ತಾರೆ. ಈ ಸಂದರ್ಭದಲ್ಲಿ ಪುಣೆಯ ಹೆಸರಾಂತ ಉದ್ಯಮಿ ಕರುಣಾಕರ ಶೆಟ್ಟಿ ಮಟ್ಟಾರ್‌ ಮತ್ತು ಪುಣೆ ತುಳುಕೂಟದ ಅಧ್ಯಕ್ಷ ಮಿಯಾರು ರಾಜ್‌ಕುಮಾರ್‌ ಎಂ. ಶೆಟ್ಟಿ ಅವರ ಸಮ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

        ಸಂಘದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿದ್ದು, ಮನೋರಂಜನೆಯಂಗವಾಗಿ ವೈಷ್ಣವಿ ಕಲಾವಿದರು ಮಂಜೇಶ್ವರ ಇದರ ತುಳುನಾಡ ರತ್ನ ದಿನೇಶ್‌ ಅತ್ತಾವರ ನಿರ್ದೇಶಿಸಿದ, ಸುವರ್ಣವಾಹಿನಿಯ ಪ್ರೀತಿಯಿಂದ ಧಾರಾವಾಹಿ ಖ್ಯಾತಿಯ ಶೋಭಾ ರೈ ಅಭಿನಯಿಸುವ ತುಳುನಾಟಕ 'ನೆನಪು ದೀಲೆ'ಪ್ರದರ್ಶನಗೊಳ್ಳಲಿದೆ.

        ಸಮಾಜ ಬಾಂಧವರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್‌.ಎಸ್‌.ಸಿ. ಮತ್ತು ಎಚ್‌ಎಸ್‌ಸಿ ಪರೀಕ್ಷೆಗಳಲ್ಲಿ ಶೇ.80 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಮುಂಚಿತವಾಗಿ ಮೊಬೈಲ್‌ ನಂ. 9822063454,9970965777,9850024774 ಮೂಲಕ ಸಂಪರ್ಕಿಸಿ ನೀಡಲು ತಿಳಿಸಲಾಗಿದೆ.

        ಸ್ನೇಹ ಸಮ್ಮಿಲನದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು ಮತ್ತು ಸಮಿತಿ ಸದಸ್ಯರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picನಮ್ಮ ಸಹಕಾರಿ ಸಂಸ್ಥೆ ಠೇವಣಿ ವಿಭಾಗದಲ್ಲಿ ಶೇ. 27.61 ರಷ್ಟು ಹೆಚ್ಚಳವಾಗಿದ್ದು, ಅಂತೆಯೇ ಸಾಲ ಮುಂಗಡ ವಿಭಾಗದಲ್ಲೂ ಶೇ. 27.59 ರಷ್ಟು ಹೆಚ್ಚಳ ಕಂಡಿದೆ...
      • ಈ ವಿಭಾಗದಲ್ಲಿಯೂ ಇದೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus