ಕೋಲ್ಕತಾ : ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕಳೆದ ಎರಡು ವರ್ಷಗಳಿಂದ ಕಠಿನ ತರಬೇತಿಯಲ್ಲಿ ಪಾಲ್ಗೊಂಡಿದ್ದ ಭಾರತೀಯ ಬಿಲ್ಗಾರರು ಒಲಿಂಪಿಕ್ಸ್‌ನಲ್ಲಿ ಉತ್ಕೃಷ್ಟ ನಿರ್ವಹಣೆ ನೀಡುವ ಗುರಿಯೊಂದಿಗೆ ರವಿವಾರ ಲಂಡನ್‌ಗೆ ತೆರಳಿದರು. ಶಿಬಿರದ ಅಂತಿಮ ದಿನವಾದ ಶನಿವಾರ ತಂಡದ ಸದಸ್ಯರಿಗೆ ಶುಭವಾಗಲಿ ಎಂದು ಹಾರೈಸಲಾಯಿತು.ಆರು ಸದಸ್ಯರ ರಿಕರ್ವ್ ತಂಡದ ಸದಸ್ಯರು ಕಳೆದ ಎರಡು ವರ್ಷಗಳಿಂದ ಇಲ್ಲಿ ಕಠಿನ ತರಬೇತಿಯಲ್ಲಿ ಭಾಗವಹಿಸಿದ್ದಾರೆ ಮತ್ತು ಇದೀಗ ಈ ತಿಂಗಳಾಂತ್ಯದಲ್ಲಿ ನಡೆಯುವ (ಒಲಿಂಪಿಕ್ಸ್) ಅಂತಿಮ ಪರೀಕ್ಷೆಗಾಗಿ ಅವರೆಲ್ಲ ಲಂಡನ್‌ಗೆ ತೆರಳಿದ್ದಾರೆ ಎಂದು ಭಾರತೀಯ ಆರ್ಚರಿ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಪರೇಶ್ ಮುಖರ್ಜಿ ಹೇಳಿದ್ದಾರೆ.ಬಿಲ್ಗಾರರ ಸಿದ್ಧತೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತ್ತೀಚೆಗಿನ ಫಲಿತಾಂಶವನ್ನು ಗಮನಿಸಿದರೆ ಬಿಲ್ಗಾರರು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಪ್ರಬಲವಾದ ಸ್ಪರ್ಧಿಗಳಾಗಿದ್ದಾರೆ. ಪದಕ ಗೆಲ್ಲುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಕೋಚ್ ಲಿಂಬಾ ರಾಮ್ ಕೂಡ ಹೇಳಿದ್ದಾರೆ.ಪುರುಷರ ಮತ್ತು ಮಹಿಳೆಯರ ತಂಡ ಉತ್ತಮ ಫಾರ್ಮ್ನಲ್ಲಿದೆ ಎಂದವರು ತಿಳಿಸಿದರು. ಕಳೆದ ಕೆಲವು ಸಮಯಗಳಿಂದ ಅವರು ಸ್ಥಿರವಾದ ನಿರ್ವಹಣೆ ನೀಡುತ್ತಿದ್ದಾರೆ. ಒಂದು ವೇಳೆ ಅವರು ಈ ನಿರ್ವಹಣೆಯನ್ನು ಉಳಿಸಿಕೊಂಡರೆ ಈ ಬಾರಿ ಕೆಲವು ಪದಕ ಗೆಲ್ಲುವುದು ಖಚಿತ ಎಂದು ಲಿಂಬಾ ರಾಮ್ ತಿಳಿಸಿದರು.ದೀಪಿಕಾ ಪ್ರಮುಖ ಆಕರ್ಷಣೆತಂಡದ ಅತ್ಯಂತ ಕಿರಿಯ ಸದಸ್ಯೆ ದೀಪಿಕಾ ಕುಮಾರಿ ಪ್ರಮುಖ ಆಕರ್ಷಣೆ ಆಗಿದ್ದಾರೆ. ವಿಶ್ವದ ನಂಬರ್ ವನ್ ಖ್ಯಾತಿಯ ದೀಪಿಕಾ ಅವರು ಭಾರತಕ್ಕೆ ಪದಕ ತಂದುಕೊಡುವ ಸಾಧ್ಯತೆ ಬಲವಾಗಿದೆ. ನಾನು ಯಾವುದೇ ಒತ್ತಡದಲ್ಲಿಲ್ಲ. ದೇಶಕ್ಕಾಗಿ ಪದಕ ಗೆಲ್ಲುವುದರ ಬಗ್ಗೆ ಗಮನ ಹರಿಸಿದ್ದೇನೆ ಎಂದು 18ರ ಹರೆಯದ ದೀಪಿಕಾ ಹೇಳಿದ್ದಾರೆ. ಸ್ಪರ್ಧೆಯಲ್ಲಿ ಗಾಳಿಯ ಪಾತ್ರ ಪ್ರಮುಖವಾಗಲಿದೆ ಎಂದು ರಾಂಚಿಯ ವನಿತೆ ಅಭಿಪ್ರಾಯಪಟ್ಟರು.ಆರ್ಚರಿ ಸ್ಪರ್ಧೆಯ ತಾಣವಾದ ಲಾರ್ಡ್ಸ್‌ನಲ್ಲಿ ನಮಗೆ ಅಭ್ಯಾಸ ನಡೆಸುವ ಅವಕಾಶ ಸಿಗಲಿಕ್ಕಿಲ್ಲ. ಸ್ಪರ್ಧೆಯ ಹಿಂದಿನ ದಿನ ಮಾತ್ರ ನಮಗೆ ಅವಕಾಶ ಸಿಗಲಿದೆ. ಇದು ಅಧಿಕೃತ ಅಭ್ಯಾಸದ ಅವಧಿ ಆಗಿರುತ್ತದೆ ಎಂದು ಕೋಚ್ ಲಿಂಬಾ ರಾಮ್ ತಿಳಿಸಿದರು.ಆರು ಸದಸ್ಯರ ತಂಡಲಂಡನ್ ಒಲಿಂಪಿಕ್ಸ್‌ನ ಆರ್ಚರಿ ವಿಭಾಗದಲ್ಲಿ ಭಾರತ ಆರು ಮಂದಿ ಸ್ಪರ್ಧಿಸುತ್ತಿದ್ದಾರೆ. ಭಾರತೀಯ ತಂಡ ನಾಲ್ಕು ವಿಭಾಗಳಲ್ಲಿ ಸ್ಪರ್ಧಿಸಲಿದೆ. ತರುಣದೀಪ್ ರೈ, ಜಯಂತ ತಾಲೂಕಾªರ್ ಮತ್ತು ರಾಹುಲ್ ಬ್ಯಾನರ್ಜಿ, ದೀಪಿಕಾ ಕುಮಾರಿ, ಲೈಶ್ರಾಮ್ ಬೊಂಬಾಲ್ಯ ದೇವಿ ಮತ್ತು ಚೆಕ್ರೊವೊಲು ಸುÌರೊ ತಂಡದಲ್ಲಿರುವ ಸದಸ್ಯರಾಗಿದ್ದಾರೆ.ಹಾಲಿ ವಿಶ್ವದ ನಂಬರ್ ವನ್ ಆಗಿರುವ ದೀಪಿಕಾ ಪದಕ ಗೆಲ್ಲುವ ಭರವಸೆಯ ಬಿಲ್ಗಾರ್ತಿ ಆಗಿದ್ದಾರೆ. 2010ರ ಕಾಮನ್‌ವೆಲ್ತ್ ಗೇಮ್ಸ್‌ನ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಚಿನ್ನ ಗೆದ್ದಿರುವ ದೀಪಿಕಾ ತಂಡ ಸ್ಪರ್ಧೆಯಲ್ಲೂ ದೋಲಾ ಬ್ಯಾನರ್ಜಿ, ಬೊಂಬಾಲ್ಯ ದೇವಿ ಜತೆ ಸೇರಿ ಚಿನ್ನ ಜಯಿಸಿದ್ದರು. 2012ರ ಮೇನಲ್ಲಿ ಟರ್ಕಿಯ ಅಂಟಾಲ್ಯದಲ್ಲಿ ನಡೆದ ವಿಶ್ವಕಪ್ ವೈಯಕ್ತಿಕ ರಿಕರ್ವ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅವರು ಆಬಳಿಕ ವನಿತೆಯರ ವಿಶ್ವದ ನಂಬರ್ ವನ್ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು.