Sunday, May 19, 2013
Last Updated: 9:55:43 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬ್ರಿಟನ್‌ಗೆ ಸೋತ ಭಾರತ
      • Udayavani | Jul 15, 2012

        ಸ್ಯಾಂಟಡರ್‌ : ಆರಂಭದಲ್ಲೇ ಪಡೆದ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ವಿಫ‌ಲವಾದ ಭಾರತ ತಂಡ ಆಹ್ವಾನಿತ ತ್ರಿಕೋನ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಬ್ರಿಟನ್‌ ತಂಡಕ್ಕೆ 1-3 ಗೋಲುಗಳಿಂದ ಶರಣಾಗಿದೆ.

        ಲಂಡನ್‌ ಒಲಿಂಪಿಕ್ಸ್‌ಗೆ ಪೂರ್ವಸಿದ್ಧತೆ ಅಂಗವಾಗಿ ನಡೆಯುತ್ತಿರುವ ಕೊನೆಯ ಸರಣಿ ಇದಾಗಿದೆ. ಪಂದ್ಯಕ್ಕೂ ಮುನ್ನ ಸುರಿದ ಮಳೆ ಉಭಯ ತಂಡಗಳಿಗೆ ಅಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿತು. ಮಳೆಯಿಂದಾಗಿ ಲಂಡನ್‌ನ ವಾತಾವರಣದಂತೆ ಕಂಡು ಬಂದಿತು.

        ಭಾರತದ ಪರ ಶಿವೇಂದ್ರ ಸಿಂಗ್‌ (3ನೇ ನಿಮಿಷ) ಏಕೈಕ ಗೋಲು ಬಾರಿಸಿದರೆ, ಬ್ರಿಟನ್‌ ಪರ ಜೇಮ್ಸ್‌ ಟಿಂಡಲ್‌ (17ನೇ ನಿಮಿಷ), ಆಶೆÉ ಜಾಕ್ಸನ್‌ (45ನೇ ನಿಮಿಷ) ಮತ್ತು ಹ್ಯಾರಿ ಮಾರ್ಟಿನ್‌ (62ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರು.

        ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ಉತ್ತಮವಾಗಿಯೇ ಆರಂಭ ಕಂಡಿತು. ಪಂದ್ಯದ ಮೂರನೇ ನಿಮಿಷದಲ್ಲಿಯೇ ತುಷಾರ್‌ ಖಾಂಡೇಕರ್‌ ಕ್ರಾಸ್‌ ಮೂಲಕ ಬಾರಿಸಿದ ಚೆಂಡನ್ನು ಶಿವೇಂದ್ರ ಸಿಂಗ್‌ ಗೋಲಾಗಿ ಪರಿವರ್ತಿಸಿದರು.

        ಎರಡು ನಿಮಿಷಗಳಲ್ಲಿಯೇ ಇಂಗ್ಲೆಂಡ್‌ ತಂಡ ದಾಳಿ ನಡೆಸಿತಾದರೂ ನಾಯಕ ಭರತ್‌ ಛೆಟ್ರಿ ಅದ್ಭುತವಾಗಿ ತಡೆಗೋಡೆ ನಿರ್ಮಿಸಿದರು. ಆದರೆ 17ನೇ ನಿಮಿಷದಲ್ಲಿ ಜೇಮ್ಸ್‌ ಟಿಂಡಲ್‌ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದರು. ಇದರೊಂದಿಗೆ ಮೊದಲ ಅವಧಿಯ ಆಟದಲ್ಲಿ ಉಭಯ ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದವು.

        ಎರಡನೇ ಅವಧಿಯ ಆಟದಲ್ಲಿ ದಾಳಿ ಚುರುಕುಗೊಳಿಸಿದ ಭಾರತಕ್ಕೆ ಮೊದಲ ನಿಮಿಷದಲ್ಲೇ ನಿರಾಸೆ ಕಾದಿತ್ತು. ಬ್ರಿಟನ್‌ ಗೋಲ್‌ಕೀಪರ್‌ ಜೇಮ್ಸ್‌ ಫ‌ಯರ್‌ ಖಾಂಡೇಕರ್‌ ಗೋಲು ಬಳಿಯಿಂದ ಬಾರಿಸಿದ ಚೆಂಡನ್ನು ಚಾಣಕ್ಷ್ಯವಾಗಿ ತಡೆಗಟ್ಟಿದರು.

        ಪಂದ್ಯದ 45ನೇ ನಿಮಿಷದಲ್ಲಿ ಆಶೆÉ ಜಾಕ್ಸನ್‌ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರು. ನಂತರ 62ನೇ ನಿಮಿಷದಲ್ಲಿ ಹ್ಯಾರಿ ಮಾರ್ಟಿನ್‌ ಗೋಲು ಬಾರಿಸಿ ಮುನ್ನಡೆ ಅಂತರವನ್ನು ಹೆಚ್ಚಿಸಿದ್ದೂ ಅಲ್ಲದೇ ತಂಡದ ಗೆಲುವು ಖಚಿತಪಡಿಸಿದರು.

        ಸರಣಿಯ ಮುಂದಿನ ಪಂದ್ಯ ಸೋಮವಾರ ಬ್ರಿಟನ್‌ ಮತ್ತು ಸ್ಪೇನ್‌ ನಡುವೆ ನಡೆಯಲಿದೆ. ಭಾರತ ಜುಲೈ 18ರಂದು ಸ್ಪೇನ್‌ ತಂಡವನ್ನು ಎದುರಿಸಲಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲಾ ಪೊಲೀಸ್‌ ಸಶಸ್ತ್ರ ಮೀಸಲು ಪಡೆಯ ಸಿಬಂದಿ ಶಂಕರ ಪೂಜಾರಿಯವರು ರಾಜ್ಯವನ್ನು ಪ್ರತಿನಿಧಿಸಿ 4 ಪದಕಗಳನ್ನು ಪಡೆದಿದ್ದಾರೆ..
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus