Thursday, June 20, 2013
Last Updated: 4:57:05 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • 20ರಿಂದ ರಾಜ್ಯಮಟ್ಟದ ಟೇಬಲ್‌ ಟೆನಿಸ್‌ ಪಂದ್ಯಾವಳಿ
    • ರಾಜ್ಯ ಮಟ್ಟದ ಟೇಬಲ್‌ ಟೆನಿಸ್‌ ಪಂದ್ಯಾವಳಿ ಟ್ರೋಫಿಗಳನ್ನು ರವಿವಾರ ಅನಾವರಣಗೊಳಿಸಲಾಯಿತು.

      • Udayavani | Jul 15, 2012

        ಬೆಳಗಾವಿ : ಟೇಬಲ್‌ ಟೆನಿಸ್‌ ಅಕಾಡೆಮಿ ವತಿಯಿಂದ ರಾಜ್ಯ ಮಟ್ಟದ ಟೇಬಲ್‌ ಟೆನಿಸ್‌ ಪಂದ್ಯಾವಳಿಯನ್ನು ಜು. 20 ರಿಂದ 23ರವರೆಗೆ ಬೆಳಗಾವಿ ಕ್ಲಬ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನಾ ಕಾರ್ಯದರ್ಶಿ ಸಂಗಮ್‌ ಬೈಲೂರ ತಿಳಿಸಿದ್ದಾರೆ.

        ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕರ್ನಾಟಕ ಟೇಬಲ್‌ ಟೆನಿಸ್‌ ಅಸೋಸಿಯೇಶನ್‌ ಹಾಗೂ ಬೆಳಗಾವಿ ಟೇಬಲ್‌ ಟೆನಿಸ್‌ ಅಸೋಸಿಯೇಶನ್‌ ಸಹಯೋಗದಲ್ಲಿ ಪಂದ್ಯಾವಳಿ ಸಂಘಟಿಸಲಾಗಿದೆ ಎಂದರು.

        ರಾಜ್ಯದ ವಿವಿಧೆಡೆ ಸುಮಾರು 500 ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸುವರು. ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರರೂ ಸೇರಿದ್ದಾರೆ ಎಂದು ತಿಳಿಸಿದರು.

        ನಾಲ್ಕು ದಿನಗಳ ಈ ಪಂದ್ಯಾವಳಿ ಪುರುಷರು ಮತ್ತು ಮಹಿಳೆಯರ ಸಿಂಗಲ್ಸ್‌, ಯುವಕ ಮತ್ತು ಯುವತಿಯರ ಸಿಂಗಲ್ಸ್‌, ಕಿರಿಯ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್‌, ಸಬ್‌ ಜೂನಿಯರ್‌ ಬಾಲಕ-ಬಾಲಕಿಯರ ಸಿಂಗಲ್ಸ್‌, ಕೆಡೆಟ್‌ ಬಾಲಕ-ಬಾಲಕಿಯರ ಸಿಂಗಲ್ಸ್‌, ಮಿನಿ ಕೆಡೆಟ್‌ ಬಾಲಕ-ಬಾಲಕಿಯರ ಸಿಂಗಲ್ಸ್‌ ಹಾಗೂ ನಾನ್‌ ಮೆಡಲಿಸ್ಟ್‌ ಸಿಂಗಲ್ಸ್‌ ಹೀಗೆ ಹಲವು ವಿಭಾಗಗಳಲ್ಲಿ ಆಯೋಜಿಸಲಾಗಿದೆ.

        ಸ್ಟ್ಯಾಗ್‌ ಇಂಟರ್‌ನ್ಯಾಶನಲ್‌ನ ಐದು ಟೇಬಲ್‌ಗ‌ಳಲ್ಲಿ ಪಂದ್ಯ ಸಂಘಟಿಸಿ ಆಡಲಾಗುತ್ತಿದೆ ಎಂದರು.

        ಮುಖ್ಯರೆಫ್ರಿ ಜಾರ್ಜ್‌ ಎಸ್‌. ಹೆನ್ರಿ ಪಂದ್ಯಾವಳಿಗೆ ಚಾಲನೆ ನೀಡ‌ಲಿದ್ದಾರೆ. ತಾಂತ್ರಿಕ ಕಮಿಟಿ ಅಧ್ಯಕ್ಷ ಟಿ.ಜಿ. ಉಪಾಧ್ಯೆ, ಕೆಟಿಟಿಎ ಪ್ರತಿನಿಧಿ ಬೋನಾ ಥಾಮಸ್‌ ಜಾನ್‌, ಜಿಲ್ಲಾ ಟೇಬಲ್‌ ಟೆನಿಸ್‌ ಅಸೋಸಿಯೇಶನ್‌ ಕಾರ್ಯದರ್ಶಿ ವಿಪುಲ್‌ ಚೌಗುಲೆ, ಸದಸ್ಯರಾದ ಕೆ.ಆರ್‌. ಮಂಜುನಾಥ, ಮಿಲಿಂದ ಪಾಠಣಕರ, ಸಂಜಯ ಬಿರಾಂಜೆ, ಇಂದೂಧರ ಸಖಾರೆ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಇಂಗ್ಲಂಡ್‌ ತಂಡವು ದಕ್ಷಿಣ ಆಫ್ರಿಕಾವನ್ನು ಏಳು ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಕೂಟದ ಫೈನಲ್‌ ಹಂತಕ್ಕೇರಿತು...
      image image
      • Copyright @ 2009 Udayavani.All rights reserved.
      • Designed & Hosted By 4cplus