Friday, May 24, 2013
Last Updated: 9:44:39 PM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹೊರ್ಮುಜ್‌ ಜಲಸಂಧಿ ಬಂದ್‌: ಇರಾನ್‌ ಎಚ್ಚರಿಕೆ
      • Udayavani | Jul 15, 2012

        ಟೆಹರಾನ್‌ : ತನ್ನ ಭದ್ರತೆಗೆ ಅಪಾಯವುಂಟಾದಲ್ಲಿ ಹೊರ್ಮುಜ್‌ ಜಲಸಂಧಿ ಮೂಲಕ 'ಒಂದು ಹನಿ ತೈಲ' ಕೂಡ ಸಾಗುವುದಕ್ಕೆ ತಾನು ಅವಕಾಶ ನೀಡೆನೆಂದು ಇರಾನ್‌ ಹೇಳಿದೆ.

        ಟೆಹರಾನ್‌ನ ಅಣ್ವಸ್ತ್ರ ಚಟುವಟಿಕೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿದಿದೆಯೆಂದು ಅಂತಾರಾಷ್ಟ್ರೀಯ ಕಳವಳ ವ್ಯಕ್ತವಾಗಿರುವಂತೆಯೇ ದೇಶದ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಅಲಿ ಫ‌ದವಿ ಅವರಿಂದ ಈ ಎಚ್ಚರಿಕೆ ಬಂದಿದೆ. ಟೆಹರಾನ್‌ ವಿರುದ್ಧ ಬೆದರಿಕೆಗಳು ಮುಂದುವರಿದಲ್ಲಿ ಅದು ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸಲಿದೆ. ''ಅಮೆರಿಕ ಅಂತಾರಾಷ್ಟ್ರೀಯ ಕಾನೂನು ಹಾಗೂ ಇರಾನ್‌ನ ಎಚ್ಚರಿಕೆಗೆ ಬೆಲೆ ಕೊಡದಿದ್ದಲ್ಲಿ ಅದು ತೀರಾ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗಬಹುದು'' ಎಂದವರು ಹೇಳಿದರು.

        ''ಇರಾನ್‌-ಇರಾಕ್‌ ಯುದ್ಧದ ಬಳಿಕ ಇರಾನ್‌ನ ನೌಕಾಪಡೆ ಹೊರ್ಮುಜ್‌ ಜಲಸಂಧಿಯನ್ನು ಸಂಪೂರ್ಣ ನಿಯಂತ್ರಿಸುವ ಮತ್ತು ಒಂದೇ ಒಂದು ಹನಿ ತೈಲ ಹಾದುಹೋಗದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಯಾವುದೇ ಚಲನವಲನವನ್ನು ತಡೆಯಲು ಇರಾನ್‌ನ ವಿಶೇಷ ನೌಕಾ ಪಡೆ ಸಿಬಂದಿ ಹಿಂದೂ ಮಹಾಸಾಗರ ಮತ್ತು ಅದರ ಪೂರ್ವ ಮತ್ತು ಪಶ್ಚಿಮದಲ್ಲಿ ಇರಾನ್‌ನ ಎಲ್ಲ ನೌಕೆಗಳಲ್ಲಿ ಉಪಸ್ಥಿತರಿದ್ದಾರೆ ಎಂದವರು ನುಡಿದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus