Thursday, May 23, 2013
Last Updated: 6:02:24 AM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬ್ರಿಟನ್‌ ಪ್ರವೇಶಿಸಿದ ಸಂಶಯಿತ ಉಗ್ರರು
      • Udayavani | Jul 15, 2012

        ಲಂಡನ್‌ : ಗೃಹ ಸಚಿವಾಲಯ ಪಟ್ಟಿ ಮಾಡಿರುವ ಸಂಶಯಿತ ಉಗ್ರರು ಅಗತ್ಯ ಭದ್ರತಾ ಪರಿಶೀಲನೆ ಉಲ್ಲಂಘಿಸಿ ಲಂಡನ್‌ ಒಲಿಂಪಿಕ್ಸ್‌ಗೆ ಮೊದಲೇ ಬ್ರಿಟನ್‌ಗೆ ಆಗಮಿಸಿದ್ದಾರೆ ಎಂದು ಇಲ್ಲಿನ ಹೀತ್ರೊ ವಿಮಾನನಿಲ್ದಾಣದ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

        ವಿಮಾನನಿಲ್ದಾಣದಲ್ಲಿ ತಪಾಸಣೆಗಾಗಿ ದೀರ್ಘ‌ ಸಾಲು ಇರುವ ಬಗ್ಗೆ ದೂರುಗಳು ಬಂದ ಕಾರಣ ಸರತಿ ಸಾಲು ಕಡಿಮೆ ಮಾಡಲು ಅನನುಭವಿ ವ್ಯಕ್ತಿಗಳನ್ನು ತಪಾಸಣೆಗಾಗಿ ನೇಮಕ ಮಾಡಲಾಗಿದೆ. ಇಂತಹ ಸಿಬಂದಿಗಳು ಸಂಶಯಿತ ಪ್ರಯಾಣಿಕರನ್ನು ಭೀತಿವಾದಿ ತಡೆ ಅಧಿಕಾರಿಗಳಿಗೆ ಒಪ್ಪಿಸಬೇಕಿತ್ತು. ಇದರ ಬದಲು ನೇರವಾಗಿ ಒಳಗೆ ಬಿಡುತ್ತಿದ್ದರು. ಮೂವರು ಸಂಶಯಿತ ಉಗ್ರರಿಗೆ ಒಳಗೆ ಹೋಗಲು ಅನುಮತಿ ನೀಡಿರುವುದನ್ನು ನಾನು ಗಮನಿಸಿದ್ದೇನೆ ಎಂದು ಹಿರಿಯ ಗಡಿ ಭದ್ರತಾ ಅಧಿಕಾರಿ ಹೇಳಿರುವ ಮಾತನ್ನು 'ದಿ ಗಾರ್ಡಿಯನ್‌‌' ಪತ್ರಿಕೆ ಬರೆದಿದೆ. ಈ ಮೂವರು ಉಗ್ರರ ಹೆಸರು ಗೃಹ ಸಚಿವಾಲಯದ ಸಂಶಯಿತ ಇಂಡೆಕ್ಸ್‌ ಸಿಸ್ಟಮ್‌ನಲ್ಲಿ ದಾಖಲಾಗಿವೆ.

        ಈ ತಿಂಗಳ ಆರಂಭದಲ್ಲಿ ಒಂದೇ ದಿನ ಐವರು ಸಂಶಯಿತ ವ್ಯಕ್ತಿಗಳು ಕಾಣೆಯಾಗಿದ್ದಾರೆ. ಇವರೆಲ್ಲ ಹೊಸ ಮುಖಗಳು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಎಲ್ಲಿಂದ ಬಂದಿದ್ದಾರೆ ಅವರ ಹಿನ್ನೆಲೆ ಏನು ಎಂಬುದು ತಿಳಿದಿಲ್ಲ ಎಂದು ಅವರು ಹೇಳಿದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus