ಜೈಪುರ್: ಮೂರು ತಿಂಗಳ ಹಿಂದೆ, ಪಾಕಿಸ್ಥಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅಜೆ¾àರ್ ದರ್ಗಾಕ್ಕೆ ಭೇಟಿ ನೀಡಿದ್ದರು. ಆ ವೇಳೆ ತಾನು ದರ್ಗಾಕ್ಕೆ ಹತ್ತು ಲಕ್ಷ ಅಮೆರಿಕನ್ ಡಾಲರ್ ದೇಣಿಗೆ ನೀಡುವುದಾಗಿ ಅವರು ಘೋಷಿಸಿದ್ದರು. ಆದರೆ ಆ ದೇಣಿಗೆ ಇನ್ನೂ ಕೈಸೇರಿಲ್ಲ ಎಂದು ದರ್ಗಾ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.ಎ. 8ರಂದು ಜರ್ದಾರಿ ಮತ್ತು ಅಧಿಕಾರಿಗಳ ತಂಡ ದರ್ಗಾಕ್ಕೆ ಭೇಟಿ ನೀಡಿದ್ದ ವೇಳೆ ಅದರ ಅಭಿವೃದ್ಧಿ ಕಾರ್ಯಗಳಿಗೆಂದು ಹತ್ತು ಲಕ್ಷ ಅಮೆರಿಕನ್ ಡಾಲರ್ ದೇಣಿಗೆ ನೀಡುವುದಾಗಿ ಘೋಷಿಸಿದ್ದರು.'ಕಳೆದ ತಿಂಗಳು ಪಾಕ್ ಅಧಿಕಾರಿಗಳು ನಮ್ಮನ್ನು ಪಾಕಿಸ್ಥಾನಕ್ಕೆ ಆಹ್ವಾನಿಸಿದ್ದರು. ಅಲ್ಲಿ ದರ್ಗಾದ ಅಭಿವೃದ್ಧಿ ಯೋಜನೆಗಳ ಕುರಿತು ನಮ್ಮೊಡನೆ ವಿಸ್ತೃತವಾಗಿ ಚರ್ಚಿಸಿದ್ದಾರಾದರೂ ದೇಣಿಗೆ ಇನ್ನೂ ನಮ್ಮ ಕೈಸೇರಿಲ್ಲ. ನಾವಾಗಿ ದೇಣಿಗೆ ಕೊಡಿ ಎಂದು ಕೇಳಿಲ್ಲ. ಆದರೆ ಜರ್ದಾರಿ ತಾವಾಗಿ ಘೋಷಿಸಿದ ದೇಣಿಗೆಯನ್ನು ಅನುಮಾನಿಸದೆ ನೀಡಬೇಕಾದ್ದು ಧರ್ಮ' ಎಂದು ದರ್ಗಾದ ಅಂಜುಮಾನ್ ಸಮಿತಿಯ ಮೂಲಗಳು ತಿಳಿಸಿವೆ.