ಹೊಸದಿಲ್ಲಿ: ರಾಷ್ಟ್ರಪತಿ ಹುದ್ದೆ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರು ಕೇಂದ್ರದ ಯುಪಿಎ ಸರಕಾರವನ್ನು ತೊರೆದ ಬಳಿಕ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಸರಕಾರದಲ್ಲಿ ತೃತೀಯ ಸ್ಥಾನವನ್ನು ನೀಡಿರುವುದಕ್ಕೆ ಎನ್‌ಸಿಪಿ ಅಸಮಾಧಾನಗೊಂಡಿದೆ. ಈ ವಿಷಯವನ್ನು ಬಳಸಿಕೊಂಡು ಯುಪಿಎಯಲ್ಲಿ ಬಿರುಕು ಮೂಡಿಸಲು ಬಿಜೆಪಿ ಮತ್ತು ಶಿವಸೇನೆ ಪ್ರಯತ್ನಿಸಿವೆ.ಮೈತ್ರಿಕೂಟದ ಧರ್ಮವನ್ನು ಪಾಲಿಸಲು ಕಾಂಗ್ರೆಸ್ ವಿಫಲಗೊಂಡಿದೆ. ಆದ್ದರಿಂದ ಯುಪಿಎ ಪಾಲುದಾರರು ಅಸಂತುಷ್ಟಗೊಂಡಿದ್ದಾರೆ. ರಾಷ್ಟ್ರಪತಿ ಚುನಾವಣೆ ಬಳಿಕ ಯುಪಿಎ ಛಿದ್ರಗೊಳ್ಳಲಿದೆ ಮತ್ತು ಮಧ್ಯಾಂತರ ಚುನಾವಣೆ ಸಮೀಪಿಸುತ್ತಿದೆ ಎಂದು ಬಿಜೆಪಿ ನಾಯಕ ಮುಖ್ತರ್ ಅಬ್ಟಾಸ್ ನಖೀÌ ಹೇಳಿದ್ದಾರೆ.ಯಾವುದೇ ತತ್ತಾ$Ìದರ್ಶಗಳನ್ನು ಇರಿಸಿಕೊಳ್ಳದೆ ಯುಪಿಎಯನ್ನು ರಚಿಸಲಾಗಿದೆ. ಸರಕಾರ ರಚಿಸುವುದೊಂದೇ ಅದರ ಗುರಿಯಾಗಿತ್ತು ಎಂದು ಅವರು ಟೀಕಿಸಿದ್ದಾರೆ.ಪ್ರಣವ್ ಮುಖರ್ಜಿ ಅವರಂತೆ ಕೃಷಿ ಸಚಿವ ಪವಾರ್ ಕೂಡ ಓರ್ವ ಹಿರಿಯ ಮತ್ತು ಅನುಭವಿ ನಾಯಕರಾಗಿದ್ದಾರೆ ಎಂದು ರಾಜ್ಯಸಭೆಯಲ್ಲಿ ಶಿವಸೇನೆ ಪಕ್ಷದ ನಾಯಕರಾಗಿರುವ ಸಂಜಯ್ ರಾವುತ್ ಹೇಳಿದ್ದಾರೆ.ಸರಕಾರದಲ್ಲಿ ನಂ. 2 ಯಾರಾಗಬೇಕು ಎನ್ನುವುದು ಯುಪಿಎದ ಆಂತರಿಕ ವಿಷಯವಾಗಿದೆ. ಆದರೆ ಪ್ರಣವ್ ಮುಖರ್ಜಿ ಅವರಂತೆ ಕೃಷಿ ಸಚಿವ ಪವಾರ್ ಕೂಡ ಓರ್ವ ಹಿರಿಯ ಮತ್ತು ಅನುಭವಿ ನಾಯಕರಾಗಿದ್ದಾರೆ ಎಂದವರು ತಿಳಿಸಿದ್ದಾರೆ.ಬಿಜೆಪಿ ಮತ್ತು ಶಿವಸೇನೆ ಎರಡೂ ವಿರೋಧಿ ಎನ್‌ಡಿಎದ ಭಾಗವಾಗಿದ್ದು, ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಗಳಿಗೆ ಮುನ್ನ ಅವುಗಳ ಹೇಳಿಕೆಗಳು ಪ್ರಾಮುಖ್ಯ ಪಡೆಯುತ್ತವೆ.ಪವಾರ್ ಅವರಿಗೆ ಸರಕಾರದಲ್ಲಿ 3ನೇ ಸ್ಥಾನ ನೀಡಿರುವುದರಿಂದ ಅಸಂತುಷ್ಟಗೊಂಡಿರುವ ಎನ್‌ಸಿಪಿ ನಾಯಕರು ಸೋಮವಾರ ಇಲ್ಲಿ ಸಭೆ ನಡೆಸುವ ನಿರೀಕ್ಷೆಯಿದೆ.