ಮುಂಬೈ: ಅನಾರೋಗ್ಯ ನಿಮಿತ್ತ ಇಲ್ಲಿನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿರುವ ನಟ ರಾಜೇಶ್ ಖನ್ನಾ ಅವರು ಗುಣಮುಖರಾಗಿದ್ದಾರೆ. ಆದಾಗ್ಯೂ ಇನ್ನು ಕೆಲವು ದಿನಗಳ ಕಾಲ ಅವರು ಆಸ್ಪತ್ರೆಯಲ್ಲೇ ಉಳಿಯಲಿದ್ದಾರೆ.ತೀವ್ರ ಬಳಲಿಕೆ ಮತ್ತು ಕಡಿಮೆ ರಕ್ತದೊತ್ತಡದಿಂದ ಅಸ್ವಸ್ಥಗೊಂಡಿದ್ದ ಖನ್ನಾ ಅವರನ್ನು ಶನಿವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಅವರ ಆರೋಗ್ಯವಾಗಿದ್ದಾರೆ ಎಂದು ಪತ್ನಿ ಡಿಂಪಲ್ ಕಪಾಡಿಯಾ ಭಾನುವಾರ ಹೇಳಿದರು. ಈ ಮೊದಲು ಕೂಡ ಇದೇ ಆಸ್ಪತ್ರೆಗೆ ದಾಖಲಾಗಿದ್ದ ಖನ್ನಾ ಅವರು ಜುಲೈ 8 ರಂದು ಮನೆಗೆ ತೆರಳಿದ್ದರು.