Friday, May 24, 2013
Last Updated: 5:45:33 AM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವೈದ್ಯರ ಸಂಬಳ ತಾರತಮ್ಯ ಶೀಘ್ರ ನಿವಾರಣೆ
    • ರಾಮದಾಸ್‌
      • Udayavani | Jul 15, 2012

        ಹುಬ್ಬಳ್ಳಿ: ಸೀನಿಯರ್‌ ರೆಸಿಡೆಂಟ್‌ ಡಾಕ್ಟರ್‌ಗೆ ಎಐಸಿಟಿಯಿಂದ ಹಾಗೂ ಕೆಲವರಿಗೆ ರಾಜ್ಯ ಸರಕಾರದಿಂದ ಸಂಬಳ ಬರುತ್ತಿದೆ. ಈ ಕುರಿತು ವೈದ್ಯರಲ್ಲಿರುವ ತಾರತಮ್ಯವನ್ನು ಮಾಸಾಂತ್ಯದಲ್ಲಿ ಬಗೆಹರಿಸಲಾಗುವುದುಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್‌.ಎ. ರಾಮದಾಸ್‌ ತಿಳಿಸಿದರು.

        ಕಿಮ್ಸ್‌ ಆಸ್ಪತ್ರೆಯಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಮೋಫಿಲಿಯಾದಿಂದ ಸಮಸ್ಯೆ ಅನುಭವಿಸುವ ರೋಗಿಗಳಿಗೆ ಚಿಕಿತ್ಸೆ ಒದಗಿಸಲು 2 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಹಾಗೂ ದಾವಣಗೆರೆಯಲ್ಲಿ 4 ಹಾಸಿಗೆ ಆಸ್ಪತ್ರೆ ಸ್ಥಾಪಿಸಲಾಗುವುದು. ಕುಸುಮ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ಕೊಡಲು ಪ್ರತ್ಯೇಕ ಹಾಸಿಗೆ ಸ್ಥಾಪಿಸಲಾಗುವುದು. ಕಿಡ್ನಿ ರೋಗಿಗಳ ಸಮಸ್ಯೆ ಕುರಿತು ಹೆಚ್ಚಿನ ಗಮನ ಹರಿಸಲಾಗುವುದು ಎಂದು ತಿಳಿಸಿದರು.

        ಬೆಂಗಳೂರು ಬಿಟ್ಟರೆ ಹುಬ್ಬಳ್ಳಿಯಲ್ಲಿ ಟ್ರಾಮಾ ಕೇರ್‌ ಸೆಂಟರ್‌ ಆರಂಭಿಸಲಾಗಿದೆ. ಇದನ್ನು ಏಮ್ಸ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಸರಕಾರ ಸಮ್ಮತಿ ವ್ಯಕ್ತಪಡಿಸಿದೆ. ಜೆನರಿಕ್‌ ಮಳಿಗೆ ಜೀವ ಉಳಿಸಲು ಅಗತ್ಯವುಳ್ಳ ಔಷಧ ಉತ್ಪನ್ನಗಳನ್ನೂ ಕಡಿಮೆ ದರದಲ್ಲಿ ಪೂರೈಸುವ ಸಲುವಾಗಿ ದೇಶದ 4 ಪ್ರಮುಖ ಕಂಪನಿಗಳೊಂದಿಗೆ ಒಪ್ಪಂದ ನಡೆದಿದೆ. ಜೆನರಿಕ್‌ ಇದು ಖಾಸಗಿ ಏಜೆನ್ಸಿ ಅಲ್ಲ. ಇಲ್ಲಿ ನೇರವಾಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಖರೀದಿಸಿ ರೋಗಿಗಳಿಗೆ ಎಂಆರ್‌ಪಿಗಿಂತ ಶೇ. 50ರಿಂದ 75ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು. ಕೇವಲ ಕಿಮ್ಸ್‌ ರೋಗಿಗಳಲ್ಲದೆ ಖಾಸಗಿ ಆಸ್ಪತ್ರೆಯ ರೋಗಿಗಳು ಜೆನರಿಕ್‌ ಮಳಿಗೆಯಲ್ಲಿ ಔಷಧಿ ಪಡೆಯಬಹುದು ಎಂದು ತಿಳಿಸಿದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus