Monday, May 20, 2013
Last Updated: 6:21:55 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬಾಸ್ಟನ್‌ನಲ್ಲಿ ನಾವಿಕ ಸಮ್ಮೇಳನ
      • Udayavani | Jul 15, 2012

        ಬೆಂಗಳೂರು: ಮುಂದಿನ ವರ್ಷ ಅಮೆರಿಕದ ಬೊಸ್ಟನ್‌ನಲ್ಲಿ ನಡೆಯಲಿರುವ ನಾವಿಕ ಸಮ್ಮೇಳನಕ್ಕೆ ನೂತನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಅಮೆರಿಕ ಕನ್ನಡಿಗರು ಆಹ್ವಾನಿಸಿದ್ದಾರೆ.

        ಬೆಂಗಳೂರಿಗೆ ಆಗಮಿಸಿರುವ ನಾವಿಕ ಸಂಘಟನೆಯ ಮುಖಂಡರಾಗಿರುವ ಡಾ.ಶರಣ ಬಸವರಾಜೂರ್‌ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದರು.

        ನಾವಿಕದ ಮು ಡಾ.ಶರಣಬಸವ ರಾಜೂರ್‌ ಮಾತನಾಡಿ, ಬೊಸ್ಟನ್‌ನಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಿನಿ ಕರ್ನಾಟಕವನ್ನೇ ಸೃಷ್ಟಿಮಾಡಲಾಗುತ್ತದೆ. ಒಂದೇ ಸೂರಿನಡಿ ವಿದೇಶಿಗರಿಗೆ ಕನ್ನಡದ ಸಂಸ್ಕೃತಿಯನ್ನು ತೋರಿಸಲಾಗುವುದು. ಹೀಗಾಗಿ, ಈಗಿನಿಂದಲೇ ಸಿದ್ಧತೆಯನ್ನು ಆರಂಭಿಸಲಾಗಿದೆ. ಭಾಷೆ, ಕಲೆಯ ಬೆಳವಣಿಗೆ, ಸಾಂಸ್ಕೃತಿಕ ವಿನಿಮಯದಲ್ಲಿ ವಿಚಾರ ಗೋಷ್ಠಿಗಳು ನಡೆಯಲಿವೆ ಎಂದರು.

        'ನಾವು ವಿಶ್ವ ಕನ್ನಡಿಗರು' (ನಾವಿಕ) ಸಂಘಟನೆಯು ಅಮೆರಿಕ ಸೇರಿದಂತೆ ವಿಶ್ವದ ವಿವಿಧೆಡೆ ಕನ್ನಡ ನುಡಿ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯನಿರ್ವಹಿಸುತ್ತಿದೆ.ನಾವಿಕ ಸಂಘಟನೆಯ ಕೃಪಾ ರಾಜೂರ್‌, ಬಸವರಾಜ ಮುದೆನೂರು ಉಪಸ್ಥಿತರಿದ್ದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus