Udayavani | Jul 15, 2012
ಬೆಂಗಳೂರು : ಜೀವನದಲ್ಲಿ ಏರಿಳಿತ ತೊಂದರೆ ಬರುವುದು ಸಹಜ. ಎಲ್ಲವನ್ನೂ ಧೈರ್ಯವಾಗಿ ತೆಗೆದುಕೊಂಡು ಮುನ್ನುಗ್ಗಿ ಛಲದಿಂದ ಸಮಸ್ಯೆಗಳನ್ನು ಎದುರಿಸಿದಾಗ ಮಾತ್ರ ಪಕ್ಷದಲ್ಲಿ ನಾಯಕನಾಗಿ ಬೆಳೆಯಬಹುದು ಎಂದು ಶಾಸಕ ಎಂ.ಕೃಷ್ಣಪ್ಪಹೇಳಿದರು.
ಭಾನುವಾರ ಗೋವಿಂದರಾಜ ನಗರ ಕ್ಷೇತ್ರದ ಕಾವೇರಿಪುರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಜನರ ಮಧ್ಯದಲ್ಲಿ ಕೆಲಸ ನಿರ್ವಹಿಸಿ ಸಾಮಾನ್ಯ ಜನರ ಸಮಸ್ಯೆಗಳ ಅರಿತುಕೊಳ್ಳುವ ಗುಣ ನಿಮ್ಮಲಿದ್ದಾಗ ಸಮಾಜದಲ್ಲಿ ಉತ್ತಮ ನಾಯಕನಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಸಲಹೆ ಮಾಡಿದರು.
ಪಾಲಿಕೆ ಮಾಜಿ ಸದಸ್ಯರಾದ ಜಿ.ಕೃಷ್ಣಪ್ಪ, ಬ್ಲಾಕ್ ಅಧ್ಯಕ್ಷ ಜಿ.ರಾಮಚಂದ್ರು, ಲಕ್ಷ್ಮಣ್, ಮುಖಂಡರಾದ ಎಂ.ರಾಮಪ್ಪ, ಲಿಂಗಣ್ಣ, ವಿಜ¿…ಕುಮಾರ್, ಕಡೆ ಮನೆ ಸಂಪತ್ ಇತರರು ಹಾಜರಿದ್ದರು. ಯುವ ಮುಖಂಡರಾದ ಆರ್.ದೀಪು ಹಾಗೂ ಹೇಮಂತ್ ನೇತೃತ್ವದಲ್ಲಿ ಹಲವಾರು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.
ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕೋಸ್ಕರ ನಿಷ್ಠೆಯಿಂದ ದುಡಿದು ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಬೇಕು.
-ಪ್ರಿಯಕೃಷ್ಣ , ಶಾಸಕ