ಡಾ| ಮೀನಾಕ್ಷಿ ಎ. ಶೆಟ್ಟಿ,ಪ್ರೊಫೆಸರ್,ಮೆಡಿಸಿನ್ ವಿಭಾಗ | Jul 23, 2012
ಉಷ್ಣ ವಲಯ ಮತ್ತು ಸಮಶೀತೋಷ್ಣ ವಲಯದ ರಾಷ್ಟ್ರಗಳಲ್ಲಿ ಬಹಳ ಸಾವು-ನೋವುಗಳಿಗೆ ಹಾದಿ ಮಾಡಿಕೊಡುತ್ತಿರುವ ವಿಷದ ಹಾವಿನ ಕಡಿತವನ್ನು ನಿರ್ಲಕ್ಷಿಸಿದರೆ, ಅದು ಗಂಡಾಂತರಕಾರಿಯಾಗಬಲ್ಲುದು. ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಈ ಸ್ಥಿತಿಯ ನಿಭಾವಣೆ ಮತ್ತು ಚಿಕಿತ್ಸೆ ಸವಾಲೇ ಸರಿ.
ಭಾರತದಲ್ಲಿರುವ ವಿಷಯುಕ್ತ ಹಾವುಗಳು ಸ್ಥೂಲವಾಗಿ ಮೂರು ವರ್ಗಗಳಿಗೆ ಸೇರಿದವು. ಅವು ನಾಗರ ಹಾವು, ಮಂಡಲ ಹಾವು ಮತ್ತು ಕನ್ನಡಿ ಹಾವುಗಳು ಇವುಗಳಲ್ಲಿ ಮಂಡಲ ಹಾವು ಅತ್ಯಂತ ವಿಷಕಾರಿ.
ವಿಷಯುಕ್ತ ಹಾವುಗಳ ದೈಹಿಕ ಸ್ವರೂಪ ಸಾಮಾನ್ಯವಾಗಿ ಈ ಕೆಳಗಿನಂತಿರುತ್ತದೆ.
1. ಅವು ಅಂಡಾಕಾರದ ತಲೆ ಹೊಂದಿರುತ್ತವೆ ಮತ್ತು ಮೈಯ ಚರ್ಮದ ಹೆರುಪೆಗಳು ಅಗಲವಾಗಿರುತ್ತವೆ.
2. ತ್ರಿಕೋನಾಕಾರದ ತಲೆ ಮತ್ತು ಸಣ್ಣ ಸಣ್ಣ ಚರ್ಮದ ಹೆರುಪೆಗಳನ್ನು ಹೊಂದಿರುತ್ತವೆ.
3. ಶ್ವಾಸಕೋಶದ ಬಳಿ, ಚರ್ಮದ ಪೊರೆ ವಿಶಾಲವಾಗಿದ್ದು, ಹೊಟ್ಟೆಯ ತನಕವೂ ಹಬ್ಬಿರುತ್ತದೆ.
4. ಬಾಲದ ತಳಭಾಗದಲ್ಲಿ ಮೈಯ ಮೇಲಿರುವಂತೆ ಚರ್ಮದ ಹೆರುಪೆಗಳಿರುತ್ತವೆ.
5. ಬಾಲ ಗಿಡ್ಡವಾಗಿದ್ದು, ಹಠಾತ್ ಸಪುರಗೊಂಡಿರುತ¤ದೆ.
6. ಮೂರನೆಯ ಮೇಲುªಟಿಯ ಪೊರೆ
7. ನಾಲ್ಕನೆಯ ಕೆಳದುಟಿಯ ಪೊರೆ
8. ಕುತ್ತಿಗೆಯಲ್ಲಿ ಹೆಡೆಯ ಭಾಗ ಇರುತ್ತದೆ.
9. ಕೋರೆ ಹಲ್ಲುಗಳಿರುತ್ತವೆ, ಇವು ವಿಶೇಷವಾಗಿ ವಿನ್ಯಾಸಗೊಂಡಿರುತ್ತವೆ.
10. ದೇಹದ ಮಧ್ಯ ಭಾಗದಲ್ಲಿ ಉದ್ದಕ್ಕೂ ಷಡುºಜಾಕೃತಿಯ ಬೆನ್ನು ಹುರಿಯ ಪೊರೆ ಇರುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಹಾವಿನ ಕಡಿತಕ್ಕೆ ತುತ್ತಾದವರು, ಹೆಚ್ಚಾಗಿ ಹಳ್ಳಿ ವೈದ್ಯರ ಔಷಧಕ್ಕೆಂದೇ ತೆರಳುತ್ತಾರೆ. ಕುತೂಹಲಕರ ಸಂಗತಿ ಎಂದರೆ ಈ ಔಷ ಹೆಚ್ಚಾಗಿ ಫಲಕಾರಿಯಾಗಿರುತ್ತದೆ!
ಇದಕ್ಕೆ ಕಾರಣ ಏನು ಗೊತ್ತೆ? ನೂರಕ್ಕೆ 50ಕ್ಕೂ ಮಿಕ್ಕಿ ಹಾವು ಕಡಿತದ ಪ್ರಕರಣಗಳಲ್ಲಿ, ಕಡಿತಕ್ಕೊಳಗಾದ ವ್ಯಕ್ತಿಗೆ ವಿಷ ತಗುಲಿರುವುದೇ ಇಲ್ಲ. ಕೆಲವರಲ್ಲಿ ಗಾಯವೇ ಆಳವಾಗಿರುವುದಿಲ್ಲವಾದರೆ, ಇನ್ನು ಕೆಲವರಿಗೆ ಕಡಿದಿರುವ ಹಾವು ವಿಷಯುಕ್ತ ಹಾವೇ ಆಗಿರುವುದಿಲ್ಲ!
ಹಾವುಗಳು ಉತ್ಪತ್ತಿ ಮಾಡುವ ವಿಷ ಈ ಜಗತ್ತಿನ ಪ್ರಾಣಿ-ಸಸ್ಯಜನ್ಯ ವಿಷಗಳಲ್ಲೆ ಅತ್ಯಂತ ಪ್ರಭಾವಿಯಾಗಿರುವುದು ಮಾತ್ರವಲ್ಲ ಅತ್ಯಂತ ಸಂಕೀರ್ಣ ಸ್ವರೂಪದ್ದೂ ಆಗಿರುತ್ತದೆ. ಹಾವಿನ ವಿಷದ ತೀವ್ರತೆಯು ಅದರ ಜಾತಿಗನುಗುಣವಾಗಿ ಭಿನ್ನವಾಗಿರುತ್ತದೆ. ಹಾವು ಹಳೆಯದಾದಷ್ಟೂ ವಿಷದ ತೀವ್ರತೆ ಹೆಚ್ಚು. ಕಡಿತಕ್ಕೊಳಗಾದ ವ್ಯಕ್ತಿಯ ಮೂತ್ರಪಿಂಡಗಳ ಮೂಲಕ ವಿಷವು ದೇಹದ ವಿವಿಧ ಭಾಗಗಳಿಗೆ ಹರಡಿ, ಹಾನಿ ಮಾಡುತ್ತದೆ.
ಲಕ್ಷಣಗಳು
ವಿಷಯುಕ್ತ ಹಾವಿನ ಕಡಿತಕ್ಕೊಳಗಾಗಿರುವ ರೋಗಿ ವೈದ್ಯರ ಬಳಿಗೆ ಬರುವಾಗ ಈ ಕೆಳಗಿನ ಲಕ್ಷಣಗಳನ್ನು ಹೊಂದಿರುತ್ತಾನೆ.
1. ಭಯ, ಆತಂಕ ಮತ್ತು ತಲೆ ಸುತ್ತುವ ಸ್ಥಿತಿ.
2. ದೇಹದೊಳಗಿನ ಶ್ಲೇಷ್ಮ ಪದರ ಒಡೆದಿರುವುದರಿಂದಾಗಿ ಜಠರದಲ್ಲಿ ಕಿರಿಕಿರಿ ಉಂಟಾಗಿ, ಕಿಬ್ಬೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳಬಹುದು.
3. ಕಡಿತದ ಜಾಗದಲ್ಲಿ ನೋವು ತಕ್ಷಣ ಕಾಣಿಸಿಕೊಳ್ಳಬಹುದು, ಅಥವಾ ವಿಳಂಬವಾಗಿ ಕೂಡ ಕಾಣಿಸಿಕೊಳ್ಳಬಹುದು. ಈ ನೋವು 24ರಿಂದ 72 ತಾಸುಗಳ ಕಾಲ ಉಳಿಯುತ್ತದೆ.
4. ಕಡಿತದ ಸ್ಥಳದಲ್ಲಿ ಬಾವು ಸಾಮಾನ್ಯವಾಗಿ ವಿಷಯುಕ್ತ ಹಾವಿನ ಕಡಿತದ ಪ್ರಮುಖ ಲಕ್ಷಣವಾಗಿರುತ್ತದೆ. ಇದಕ್ಕೆ ಕಾರಣ, ಕಡಿತದ ಸ್ಥಳದಲ್ಲಿ ವಿಷದ ಪರಿಣಾಮ. ಕಡಿತಕ್ಕೊಳಗಾಗಿ 30 ನಿಮಿಷಗಳಲ್ಲೆ ಕಾಣಿಸಿಕೊಳ್ಳುವ ಈ ಬಾವು, ಹೊತ್ತು ಕಳೆದಂತೆ ಹೆಚ್ಚುತ್ತಾ ಹೋಗಿ, 48ರಿಂದ 72 ಗಂಟೆಗಳಲ್ಲಿ ಗಂಭೀರ ಸ್ವರೂಪ ತಳೆಯಬಹುದು. ಹಾಗಾಗಿ, ಬಾವು ಕಾಣಿಸಿಕೊಳ್ಳಲಾರಂಭಿಸಿದ್ದನ್ನು ಕಂಡ ತಕ್ಷಣ ವಿಷಕಾರಿ ಸಾವಿನ ಕಡಿತಕ್ಕೆ ಚಿಕಿತ್ಸೆಗಳನ್ನು ಆರಂಭಿಸಬೇಕಾದುದು ಅಗತ್ಯ. ನಿರ್ಲಕ್ಷಿಸಿದರೆ, ಆ ಭಾಗ ಹುಣ್ಣಾಗಬಹುದು ಅಥವಾ ಕೊಳೆಯಲೂ ಬಹುದು.
5. ರೋಗಿಯ ಮೂತ್ರಪಿಂಡ ಹಾನಿಗೊಳಗಾಗಿ, ಮೂತ್ರಪಿಂಡ ವೈಫಲ್ಯ ಕಾಣಿಸಿಕೊಳ್ಳಬಹುದು.
6. ರೋಗಿಯ ನರಮಂಡಲದ ಮೇಲೆ ವಿಷ ಪ್ರಭಾವ ಬೀರಬಹುದು. ನರ ಮಂಡಲದ ಮೇಲೆ ವಿಷ ಪ್ರಭಾವ ಬೀರಲಾರಂಭಿಸಿರುವುದರ ಆರಂಭಿಕ ಸೂಚನೆ ಎಂದರೆ ಕಣ್ಣು ರೆಪ್ಪೆಗಳು ಭಾರವಾಗುವುದು, ತಲೆ ತಿರುಗುವ ಲಕ್ಷಣಗಳು ಕಾಣಿಸುವುದು ಮತು¤ ಬಾಯಿಯ ಸ್ನಾಯುಗಳು ಲಕ್ವಕ್ಕೊಳಗಾಗುವುದು ಹಾಗೂ ಉಸಿರಾಟ ಕಷ್ಟವಾಗುವುದು. ರೋಗಿಯ ಶ್ವಾಸಕೋಶದ ಸ್ನಾಯುಗಳೂ ಕ್ರಮೇಣ ಲಕ್ವಕ್ಕೊಳಗಾಗುತ್ತವೆ. ರಕ್ತನಾಳಗಳಲ್ಲಿ ಆಮ್ಲಜನಕದ ಕೊರತೆೆಯಿಂದಾಗಿ ಚರ್ಮ, ಶ್ಲೇಷ್ಮ ಗ್ರಂಥಿಗಳು ನೀಲಿಗಟ್ಟುತ್ತವೆ, ಕೈಕಾಲುಗಳು ಸೆಟೆದುಕೊಳ್ಳುವುದು ಕಾಣಿಸಿಕೊಂಡು, ರೋಗಿ ಮೂರ್ಛಾ ಸ್ಥಿತಿಗೆ ತಲುಪುತ್ತಾನೆ. ಇದು ಕೊನೆಗೆ ಸಾವಿನಲ್ಲಿ ಅಂತ್ಯಗೊಳ್ಳುತ್ತದೆ. ರೋಗಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತಾದರೆ, ಈ ಅಪಾಯದಿಂದ ಪಾರಾಗಬಹುದು.
7. ವಿಷದ ವಿರುದ್ಧ ಅಲರ್ಜಿಕ್ ಪ್ರಕ್ರಿಯೆ ಆರಂಭವಾಗಿ, ಪಿತ್ತಜನಕಾಂಗ, ಚರ್ಮದ ಮೇಲ್ಭಾಗಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಹುದು. ರಕ್ತನಾಳಗಳಲ್ಲಿ ನೀರು ತುಂಬಿ, ಕೈ-ಕಾಲುಗಳಲ್ಲಿ ಬಾವು ಕಾಣಿಸಿಕೊಳ್ಳಬಹುದು.
ಚಿಕಿತ್ಸೆ
ವಿಷಯುಕ್ತ ಹಾವುಗಳ ಕಡಿತದ ಪ್ರಕರಣಗಳಲ್ಲಿ ವಿಷ ಹರ ಔಷಧಿ ನೀಡಿಕೆಯೊಂದೇ ಜೀವ ಉಳಿಸಬಲ್ಲ ಹಾದಿ. ಅದಕ್ಕಾಗಿ ರೋಗಿಯನ್ನು ಸಮೀಪದ ಸುಸಜ್ಜಿತ ಆಸ್ಪತ್ರೆಗೆ ಕರೆದೊಯ್ಯಬೇಕು. ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಹಾವಿನ ವಿಷಹರ ಔಷಧಿ ಲಭ್ಯ.
ಪ್ರತಿಬಂಧಕ ಕ್ರಮಗಳು
ಹಾವಿನ ಕಡಿತಕ್ಕೆ ಅತ್ಯಂತ ಸಾಮಾನ್ಯವಾದ ಕಾರಣ ಎಂದರೆ ಕತ್ತಲೆಯಲ್ಲಿ ಬೆಳಕಿನ ಸಹಾಯ ಇಲ್ಲದೆ, ಖಾಲಿ ಕಾಲಿನಲ್ಲಿ ನಡೆದಾಡುವುದು. ಹೆಚ್ಚಾಗಿ ಹಾವಿನ ಕಡಿತದ ಪ್ರಕರಣಗಳು ಕಾಣಸಿಗುವುದು ಸಂಜೆಯ ವೇಳೆ. ಹಾಗಾಗಿ, ಮಳೆಗಾಲದಲ್ಲಿ, ತಗ್ಗು ಪ್ರದೇಶಗಳಲ್ಲಿ ರಾತ್ರಿಯ ವೇಳೆ ನಡೆದಾಡುವಾಗ, ಅತಿ ಎಚ್ಚರಿಕೆ ಅಗತ್ಯ. ದೊಡ್ಡ ಬಂಡೆ ಕಲ್ಲುಗಳ ಅಡಿ ಭಾಗದಲ್ಲಿ ಅಥವಾ ದೊಡ್ಡ ಮರಗಳ ಬೊಡ್ಡೆಯ ಬುಡದಲ್ಲಿ ಚಟುವಟಿಕೆಗಳನ್ನು ನಡೆಸುವಾಗ ಎಚ್ಚರಿಕೆ ಅಗತ್ಯ. ಸತ್ತ ಹಾಗೆ ಬಿದ್ದಿರುವ ಹಾವುಗಳನ್ನು ಕೂಡ ಮುಟ್ಟಲು ಹೋಗಬಾರದು. ಮುಟ್ಟ ಬೇಕಿದ್ದರೆ, ಉದ್ದವಾದ ಕೋಲುಗಳನ್ನು ಬಳಸಿಯೇ ಮುಟ್ಟಬೇಕು. ಅರೆ ಸತ್ತ ಹಾವುಗಳ ಕಡಿತದಿಂದ ಕೂಡ ತೀವ್ರ ವಿಷ ಏರುವ ಸಾಧ್ಯತೆೆ ಇರುತ್ತದೆ. ಯಾವುದೇ ಹಾವನ್ನು ಸ್ಪಷ್ಟವಾಗಿ ಗೊತ್ತಿಲ್ಲದೆ ವಿಷಕಾರಿ ಅಲ್ಲ ಎಂದು ನಿರ್ಧರಿಸಿಕೊಳ್ಳಬಾರದು. ಈ ನಿಟ್ಟಿನಲ್ಲಿ ಸ್ಪಷ್ಟ ಜ್ಞಾನ ಇರುವವರು ವೈದ್ಯರ ಸಲಹೆ ಪಡೆಯುವುದು ಅಗತ್ಯ.
ಪ್ರಥಮ ಚಿಕಿತ್ಸೆ
1. ಹಾವಿನ ಕಡಿತಕ್ಕೊಳಗಾದ ಸ್ಥಳವನ್ನು ಶುಚಿಗೊಳಿಸಿ. ಆ ಭಾಗದಲ್ಲಿ ಇನ್ನಷ್ಟು ಗಾಯ ಮಾಡಲು ಹೊರಡಬೇಡಿ.
2. ಗಾಯವಾಗಿರುವ ಭಾಗಕ್ಕೆ ಆರಾಮ ನೀಡಿ. ರೋಗಿಗೂ ಪೂರ್ಣ ಆರಾಮ ನೀಡಿ. ಹಾವು ಕಡಿತದ ಬಳಿಕ ಓಡಾಟ, ನಡೆದಾಟಗಳಲ್ಲಿ ತೆೊಡಗಿದರೆ, ವಿಷವೇರುವ ವೇಗ ಹೆಚ್ಚುತ್ತದೆ.
3. ಗಾಯಕ್ಕಿಂತ ಸ್ವಲ್ಪ ಮೇಲ್ಭಾಗದಲ್ಲಿ ಬಟ್ಟೆ ಅಥವಾ ಅಗಲವಾದ ಹಗ್ಗದಿಂದ ಒಂದು ಕಟ್ಟು ಹಾಕಿ. ಈ ಕಟ್ಟು ಅಗಲ ವಾಗಿದ್ದಷ್ಟೂ ಒಳ್ಳೆಯದು ಮತ್ತು ತೀರಾ ಬಿಗಿಯಾಗಿರಬಾರದು. ಈ ಕಟ್ಟಿನ ನಡುವೆ ಬೆರಳುತೂರಿಸಲು ಸಾಧ್ಯ ವಾಗುವಷ್ಟು ಕಟ್ಟು ಸಡಿಲವಾಗಿರಬೇಕು.
4. ಶುಚಿಯಾಗಿಲ್ಲದ ಗಿಡಮೂಲಿಕೆ ರಸ-ಔಷಧಿಗಳನ್ನು ಗಾಯದ ಜಾಗದಲ್ಲಿ ಹಾಕಬೇಡಿ.
5. ರೋಗಿಯನ್ನು ಸಾಧ್ಯವಾದಷ್ಟು ಶೀಘ್ರ ಸುಸಜ್ಜಿತವಾದ ಆಸ್ಪತೆೆÅಯೊಂದಕ್ಕೆ ಕರೆದೊಯ್ಯಿರಿ. ವಿಷದ ಹಾವಿನ ಕಡಿತದ ಪ್ರಕರಣಗಳಲ್ಲಿಯಂತೂ ಪ್ರತೀ ನಿಮಿಷ ಕೂಡ ಅತ್ಯಮೂಲ್ಯ. ಹಾಗಾಗಿ ವಿಳಂಬ ಖಂಡಿತಾ ಸಲ್ಲದು.ಧಿ