Wednesday, June 19, 2013
Last Updated: 10:12:20 AM IST
  • ನಾನೆಲ್ಲಿರುವೆ:
  • ಮುಖಪುಟ ಮನೋರಂಜನೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • "ಜರಾಸಂಧ'ನ ಬಳಿಕ "ಶಕುನಿ'
    • ಪ್ರಣೀತಾ ವೃತ್ತಿಜೀವನದಲ್ಲಿ ಹೊಸ ಶಕೆ ಆರಂಭಿಸಲಿದೆ.

      • Udayavani | Jul 23, 2012

        ಜರಾಸಂಧ ಮತ್ತು ಶಕುನಿ ನಡುವೆ ಏನು ಸಂಬಂಧ? ಇಲ್ಲವೇ ಇವರಿಬ್ಬರಲ್ಲಿ ಸಮಾನತೆ ಏನು ಎಂದು ಕೇಳಿದರೆ, ತಕ್ಷಣ ಇಬ್ಬರೂ ಮಹಾಭಾರತದಲ್ಲಿ ಬರುವ ವ್ಯಕ್ತಿಗಳು ಎಂದು ಸುಲಭವಾಗಿ ಯಾರಾದರೂ ಹೇಳಬಹುದು. ಪುರಾಣ ಬಲ್ಲವರು ಅವರಿಬ್ಬರ ನಡುವೆ ಸಂಬಂಧವನ್ನೂ ಹೇಳಬಹುದು. ಕಿರುತೆರೆಯಲ್ಲಿ ಬರುವ ಜೀನ್ಸ್‌ ಕಾರ್ಯಕ್ರಮ ನಡೆಸುವ ತಾರೆ, ಅವರಿಬ್ಬರ ನಡುವಿನ ಸಂಬಂಧ ಕೇಳಿ ಸ್ಪರ್ಧಿಗಳು ಗೆದ್ದ ಎಲ್ಲ ಹಣ ಪುನಃ ಪಡೆಯಬಹುದು. ಆದರೆ, ತಾರೆ ಪ್ರಣೀತಾ ಪಾಲಿಗೆ ಇವರಿಬ್ಬರ ನಡುವೆ ಬೇರೆಯೇ ಬಂಧ.

        ತಾರೆ ಪ್ರಣೀತಾ ಗೊತ್ತಲ್ಲ? ಪೊರ್ಕಿ ಖ್ಯಾತಿಯ ನಟಿ. ಅಪಾರ್ಥ ಬೇಡ. ಆಕೆ ಅಭಿನಯಿಸಿದ ಮೊದಲ ಚಿತ್ರದ ಹೆಸರದು. ಅದು ತೆರೆಕಾಣುವವರೆಗೆ ಬೇರೆ ಚಿತ್ರದಲ್ಲಿ ಅಭಿನಯಿಸಬಾರದೆನ್ನುವ ಷರತ್ತಿನ ಕಾರಣ ಹಲವು ಅವಕಾಶಗಳನ್ನು ಕಳೆದುಕೊಂಡ ಪ್ರಣೀತಾ ಇದೀಗ ದಕ್ಷಿಣಭಾರತದÇÉೆಲ್ಲ ಸುದ್ದಿ ಮಾಡಿದ್ದು  ಶಕುನಿ  ತಮಿಳು, ತೆಲುಗು ಚಿತ್ರದ ಮೂಲಕ. ಇತ್ತೀಚೆಗೆ ತೆರೆಕಂಡ ಈ ಚಿತ್ರ ತಮಿಳಲ್ಲಿ ಸಾವಿರಕ್ಕೂ ಹೆಚ್ಚು, ತೆಲುಗಲ್ಲಿ ನಾನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿವೆ.

        ಶಶಾಂಕ ನಿರ್ದೇಶನದ ಜರಾಸಂಧ ಚಿತ್ರೀಕರಣದ ವೇಳೆ, ಅಂತಜಾìಲ ತಾಣಗಳಲ್ಲಿ ಅದರ ಸ್ಥಿರಚಿತ್ರಗಳನ್ನು  ನೋಡಿದ ತಮಿಳಿನ ಶಕುನಿ ಚಿತ್ರದ ನಿರ್ದೇಶಕರು ಆಕೆಯನ್ನು ತಮ್ಮ ಚಿತ್ರದ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಕಾರ್ತಿ, ಸಂತಾನಂ ಮತ್ತು ಪ್ರಣೀತಾ ಪಾತ್ರಗಳನನ್ನು ಕಮಲ್‌, ರಜನಿ, ಶ್ರೀದೇವಿ ಎಂದೇ ಅಲ್ಲಿ ಪ್ರಚಾರ ಮಾಡಲಾಗಿದೆ! ಶಂಕರ್‌ ದಯಾಳ್‌ ಆ ಚಿತ್ರದ ನಿರ್ದೇಶಕರು. ಇದು ಅಪ್ಪಟ ಮನರಂಜನೆಯ ಚಿತ್ರ.

        ಶಕುನಿ - ಪ್ರಣೀತಾ ವೃತ್ತಿಜೀವನದಲ್ಲಿ ಹೊಸ ಶಕೆ ಆರಂಭಿಸಲಿದೆ. ತೆಲುಗಲ್ಲಿ ತನಿಷ್‌ ಜೊತೆ ಎಂ ಪಿಲ್ಲೋ ಎಂ ಪಿಲ್ಲಡೊ, ಸಿದ್ಧಾರ್ಥ ಜೊತೆ ಬಾವಾ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದರೂ ಅದೇನೂ ಆಕೆಗೆ ಹೆಚ್ಚು ಅವಕಾಶ ತಂದಿತ್ತಿಲ್ಲ. ಇವೆರಡೂ 2010ರಲ್ಲಿ ತೆರೆಕಂಡವು. ಅರುಳ್‌ನಿಧಿ ಜೋಡಿಯಾಗಿ ಅಭಿನಯಿಸಿದ ಉದಯನ್‌ 2011ರಲ್ಲಿ ತೆರೆಕಂಡಿತು. ಈ ತಮಿಳು ಚಿತ್ರ ಸಾಕಷ್ಟು  ಗಮನ ಸೆಳೆಯುವುದರಲ್ಲಿ ಯಶಸ್ವಿಯಾಯಿತು.

        ಕನ್ನಡದಲ್ಲಿ ಆಕೆ ಅಭಿನಯಿಸಿದ ಜರಾಸಂಧ, ಈ ವರ್ಷ ತೆರೆಕಂಡು ಸಾಕಷ್ಟು ಸುದ್ದಿ ಮಾಡಿದ ಭೀಮಾ ತೀರದಲ್ಲಿ ಚಿತ್ರಗಳಲ್ಲಿ ಆಕೆ ಅಭಿನಯಿಸಿಪುರಾಣ ಬಲ್ಲವರು ಅವರಿಬ್ಬರ ನಡುವೆ ಸಂಬಂಧವನ್ನೂ ಹೇಳಬಹುದು. ಕಿರುತೆರೆಯಲ್ಲಿ ಬರುವ ಜೀನ್ಸ್‌ ಕಾರ್ಯಕ್ರಮ ನಡೆಸುವ ತಾರೆ. ಎರಡರಲ್ಲೂ ವಿಜಯ್‌ ನಾಯಕ. ಸೌಂದರ್ಯ ಜಗದೀಶ್‌ ನಿರ್ಮಿಸುತ್ತಿರುವ ಸ್ನೇಹಿತರು ಚಿತ್ರದಲ್ಲಿ ಆಕೆ ನಾಯಕಿಯಾಗಿ ಅಭಿನಯಿಸಿದ್ದು ಆ ಚಿತ್ರ ತೆರೆ ಕಾಣಬೇಕಷ್ಟೆ. ಚಿತ್ರಸಾಹಿತಿ ರಾಮ್‌ನಾರಾಯಣ್‌ ನಿರ್ದೇಶನದ ಚೊಚ್ಚಲ ಚಿತ್ರವಿದು.

        ಶಕುನಿ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ತೆರೆಕಾಣುವುದರಿಂದ ಪ್ರಣೀತಾ ಪಾಲಿಗೆ ಇದು ಅತಿ ದೊಡ್ಡ ಚಿತ್ರ. ಶಕುನಿ  ಚಿತ್ರದ ಚಿತ್ರೀಕರಣದ ವೇಳೆ ನನಗೆ ತಮಿಳು ಅಷ್ಟೇನೂ ಬರುತ್ತಿರಲಿಲ್ಲ, ಈಗ ಸ್ವಲ್ಪ, ಸ್ವಲ್ಪ ಮಾತನಾಡಬಲ್ಲೆ' ಎನ್ನುವ  ಪೊರ್ಕಿ ಹುಡುಗಿಗೆ ಸುದೀಪ್‌ ಜೊತೆ ಅಭಿನಯಿಸುವ ಅವಕಾಶ ಬಚ್ಚನ್‌ ಚಿತ್ರದಲ್ಲಿ ಸಿಕ್ಕಿದೆ ಎನ್ನುತ್ತಿದೆ ಅವರ ಕುರಿತ ವಿವರ ನೀಡುವ ವಿಕಿ! ಆ ಚಿತ್ರವನ್ನು ಶಶಾಂಕ್‌ ಅವರೇ ನಿರ್ದೇಶಿಸುತ್ತಿದ್ದಾರೆ. ಮೊದಲು ಆಯ್ಕೆಯಾಗಿದ್ದ ದೀಪಾ ಸನ್ನಿಧಿ ಅವರಿಗೆ ಆ ಪಾತ್ರ ಹೊಂದಾಣಿಕೆ ಆಗುವುದಿಲ್ಲ ಎನ್ನುವ ಕಾರಣ ಅವರ ಬದಲು ಬೇರೊಬ್ಬರು ಆ ಜಾಗಕ್ಕೆ ಬರಬೇಕಿತ್ತು. ಬಹುಶಃ ಪ್ರಣೀತಾಗೆ ಆ ಅವಕಾಶ.

        ಶಕುನಿ ಪ್ರಣೀತಾ ಪಾಲಿಗೆ ಅದೃಷ್ಟ ತರುತ್ತಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus