Sunday, May 19, 2013
Last Updated: 8:02:01 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಇಷ್ಟಸಿದ್ಧಿ ಪ್ರಾಪ್ತಿಗೆ ದಶಪುಷ್ಪ ಸೇವನೆ
    • ಇಷ್ಟಸಿದ್ಧಿ ಪ್ರಾಪ್ತಿಗೆ ದಶಪುಷ್ಪ ಸೇವನೆ.

      • ಡಾ. ಗಣೇಶ ಕುಮಾರ್‌ ಕೊಳಂಜಿತ್ತೋಡಿ | Jul 27, 2012

        ಆಷಾಢದ ಕೊನೆಯರ್ಧ ಶ್ರಾವಣದ ಮೊದಲರ್ಧ ಸೇರಿದರೆ ತುಳುವರ ಆಟಿ, ಮಲಯಾಳಿಗಳ ಕರ್ಕಾಟಕ ಮಾಸ ! ಎಡೆಬಿಡದೆ ಸುರಿವ ಮಳೆ; ಹಾಗೆಂದು ಬಿಸಿಲೂ ಕಡಿಮೆಯದಲ್ಲ , ಆನೆಯ ಬೆನ್ನು  ಬಿರುಕು ಬಿಡಲು ಸಾಕು ! ಆದ್ದರಿಂದಲೇ, ಇದು ವಿಶ್ರಾಂತಿ, ತನುಮನ ಉಪಚಾರ, ಆರೈಕೆಯನ್ನು ಬಯಸುವ ಮಾಸ. ಕರ್ಕಾಟಕದಲ್ಲಿ  ಆಗತಾನೇ ಬಿತ್ತನೆ ಕೃಷಿ ಮುಗಿದಿದ್ದು , ಬೆಳೆದ ಬೆಳೆ ಹಾಗೂ ಕಾಯಿಪಲ್ಲೆಗಳು ಕೈಗೆ ಬಂದಿರುವುದಿಲ್ಲ. ಆದರೆ, ತಾನೇ ತಾನಾಗಿ ಒದಗಿ ಬರುವ ಹಸಿರು ಚಿಗುರುಗಳಿಗೆ ಬರವಿಲ್ಲ. ಆದ್ದರಿಂದ, ಅವುಗಳದೇ ಬಳಕೆ. ಬಗೆದು ನೋಡಿದರೆ ಇವುಗಳು ಖಂಡಿತ ಕಳೆಯಲ್ಲ ; ಇಳೆಯು ಬದುಕ ಬರವ ಕಳೆಯಲು ಕೊಟ್ಟ  ಕೊಡುಗೆ !

        ಕೆಸು, ತಗತ್ತೆ, ತಿಮರೆ, ಹರಿವೆ, ಎಲೆವರಿಗೆ, ನುಗ್ಗೇಸೊಪ್ಪು , ಕುಂಬಳ ಸೊಪ್ಪು , ಅರಶಿಣ, ಪುದೀನಾ ಮೊದಲಾದ ಅಪಾರ ಸತ್ವದೂಟೆಯನ್ನೇ ಹೊತ್ತಿರುವ ಹಸಿರು ಎಲೆಗಳಿಂದ ಪತ್ರೊಡೆ, ಪಲ್ಯ, ತಂಬುಳಿ, ಚಟ್ನಿ ರಸಂಗಳ ತಯಾರಿಕೆ ಈ ಮಾಸದ ವಿಶೇಷ. ಏಕತಾನತೆಯನ್ನು ಮರೆಯಲು ವೈವಿಧ್ಯಮಯವಾದ ಆರೋಗ್ಯಪರ ಆರೋಗಣೆಗಳು! ಕೇರಳದ ಕೆಲವೆಡೆ ಕರ್ಕಾಟಕವು ರಾಮಾಯಣ ಮಾಸ. ಪಾರಾಯಣ ಮತ್ತು  ಶ್ರೀರಾಮ ತಾರಕದ ಜಪ. ಜತೆಗೆ ದಶಪುಷ್ಪಗಳ ಉಪಾಸನೆ ! ಅವು ಕೇವಲ ಹತ್ತು ಬಗೆ ಹಸಿರಲ್ಲ ; ದಶ ವಿಧ ದೇವತೆಗಳ ಪ್ರತೀಕ. ಕರ್ಕಾಟಕದ ಮೊದಲ ದಿನದಿಂದಲೇ ಪ್ರತಿ ಮುಂಜಾನೆ ಶುಚಿಶುದ್ಧವಾಗಿ ತಾಜಾ ಸಂಗ್ರಹಿಸಿ ತುಪ್ಪದ ದೀಪದ ಜತೆಯಲ್ಲಿ  ಕೊಡಿಬಾಳೆಲೆಯಲ್ಲಿಟ್ಟು  ದೇವರ ಮನೆಯ ಹೊಸ್ತಿಲಿಗೆ ಅರ್ಚಿಸಿ ಪ್ರಸಾದವಾಗಿ ಪಡೆದು ಮುಡಿಯುತ್ತಾರೆ; ಕಷಾಯ- ಹಾಲು ಕಷಾಯದ ಗಂಜಿ ತಯಾರಿಸಿ ಸೇವಿಸುತ್ತಾರೆ. ಸಂಜೆ ತಿರುವಾದಿರ ನೃತ್ಯಗೀತದಿಂದ ಸ್ತುತಿಸಿ ಕೀರ್ತಿಸುತ್ತಾರೆ. ಆಕಳ ತುಪ್ಪ ,  ತೆಂಗಿನೆಣ್ಣೆ , ಎಳ್ಳೆಣ್ಣೆಯಲ್ಲಿ  ಪಾಕಗೊಳಿಸಿ ಶರೀರ ಸರ್ವಾಂಗ ಮಜ್ಜನದಿಂದ ಸಂಭ್ರಮಿಸುತ್ತಾರೆ. ದಶಪುಷ್ಪದಲ್ಲಿ  "ಹೂವು'  ಮುಖ್ಯವಲ್ಲ, ಹೂವಿನ ಜೊತೆಗಿರುವ ಮೂಲಿಕೆಗಳಿಗೇ ಮಹಣ್ತೀ . ಕಾವ್ಯಾತ್ಮಕವಾಗಿ ದಶಪುಷ್ಪಗಳೆಂದೇ ಗುರುತಿಸಲ್ಪಟ್ಟಿವೆಯಾದರೂ ನಿಜವಾಗಿ ಅಲ್ಲಿರುವುದು ಹಸಿರು ಚಿಗುರುಗಳೇ.
        ಸ್ವತ್ಛ , ತಾಜಾವಾಗಿರುವ ದಶಪುಷ್ಪಗಳನ್ನು (ಹತ್ತು  ಮೂಲಿಕೆಗಳು ಸಮಾಂಶದಲ್ಲಿ ) ಜಜ್ಜಿ  ಅರೆದು ತೆಗೆದ ರಸ, ಅದರ ಎರಡು ಪಾಲು ಕುಟ್ಟಣದ   (ನುಚ್ಚಕ್ಕಿ  ಅಥವಾ ಕೆಂಪು ಬೆಳ್ತಿಗೆ) ಅಕ್ಕಿ, ಆ ಅಕ್ಕಿಯ ಆರುಪಾಲು ನೀರು ಹಾಕಿ ಚೆನ್ನಾಗಿ ಬೇಯಿಸಿ ಗಂಜಿ ತಯಾರಿಸುವುದು. ತುಪ್ಪದಲ್ಲಿ  ಹದವಾಗಿ ಹುರಿದ ಈರುಳ್ಳಿ , ಜೀರಿಗೆ ಬೆರೆಸಿ - ರುಚಿಗೆ ತಕ್ಕಷ್ಟು  ಉಪ್ಪು , ಜೀರ್ಣಶಕ್ತಿಗೆ ತಕ್ಕಂತೆ ಆಕಳ ತುಪ್ಪ  ಸೇರಿಸಿ ಬಿಸಿಯಾಗಿಯೇ ಭುಂಜಿಸುವುದು. ಕೆಲವೆಡೆ ದಶಪುಷ್ಪ  ಮದ್ದಿನಗಂಜಿಗೆ ತೆಂಗಿನಕಾಯಿ ಹಾಲು ಸೇರಿಸುವ ಸಂಪ್ರದಾಯವಿದೆ. ತೆಂಗಿನಕಾಯಿ ಹಾಲು ಬೆರೆಸಿದ ಮೇಲೆ ಒಂದು ಕುದಿಗಿಂತ ಹೆಚ್ಚು ಕುದಿಸುವುದಿಲ್ಲ. ಈ  ದಶಪುಷ್ಪಗಳಲ್ಲಿ  ಒಂದೊಂದು ಗಿಡವೂ ಬಹುಗುಣ ಬಹುಕಲ್ಪ ಸಂಪನ್ನ  ಶಕ್ತಮೂಲಿಕೆಗಳು; ಅನುಗ್ರಹದಾಯೀ ಸಸ್ಯ, ಸ್ವಯಂ ದಶವಿಧ ದೇವತೆಗಳ ಪ್ರತೀಕವೆಂಬ ನಂಬುಗೆಯಿದೆ.

        ಗರಿಕೆ

        ಆದಿತ್ಯಮತ್ತು ಗಣಪತಿಗೆ ಪ್ರಿಯವಾದುದು. ಇದರ ರಸವು ಧೀ, ಧೃತಿ, ಸ್ಪೃತಿ, ಮೇಧಾ ವರ್ಧಕ. ವಿಷಹರವೂ ಹೌದು, ದೋಷಹರವೂ ಹೌದು.  ಜೇನುತುಪ್ಪ , ಎಳನೀರು ಜತೆ ಸೇವನಾರ್ಹ. ಕಶೇರುಕಗಳಲ್ಲಿನ ನೋವು - ಬಾವು, ಮಸ್ತಿಷ್ಕದ ನ್ಯೂನಾತಿರಿಕ್ತತೆಗಳಲ್ಲಿ  ಗರಿಕೆ ರಸ ಅಥವಾ ದೂರ್ವಾದಿ ತೈಲದ ಬಳಕೆಯಿದೆ. ಗರಿಕೆಯು ಜನ್ಮಜನ್ಮಾಂತರದ ಪಾಪ ನಿವಾರಕವೆಂಬ ವಿಶ್ವಾಸವು ಜನಸಮುದಾಯದಲ್ಲಿದೆ.

        ಕೃಷ್ಣಕ್ರಾಂತಿ

        ಶ್ರೀಕೃಷ್ಣ  ಜನ್ಮಾಷ್ಟಮಿ ಪೂಜೆಯ ಅಘÂìಪಾದ್ಯದಲ್ಲಿ  ಈ ಸಸ್ಯ ಅನಿವಾರ್ಯ . ತುಲಸೀ ಮತ್ತು ಕೃಷ್ಣಕ್ರಾಂತಿಯ  ರಸವನ್ನು ಮೂರು ಚಮಚೆಯಷ್ಟು  ಸೇವಿಸುತ್ತಿದ್ದರೆ ಶೀತಜ್ವರ, ರಕ್ತದುಷ್ಟಿ, ಶಿರಶೂಲೆ ಮುಂತಾದವು ಪರಿಹಾರವಾಗುವುದೆಂಬ ಪ್ರತೀತಿಯಿದೆ. ಬುದ್ಧಿ ಮೇಧಾವರ್ಧಕವೆಂದು ಪ್ರತೀತಿ. ಶುಂಠಿ, ಕಾಳುಮೆಣಸು, ಹಿಂಗು, ಜೀರಿಗೆ ಜತೆ ಕುದಿಸಿ ಸಾರು ಮಾಡಿದರೆ ಭೋಜನಕ್ಕೆ ಹಿತವಾಗಿರುತ್ತದೆ. ಕೃಷ್ಣಕ್ರಾಂತಿಯ ಅರ್ಚನೆಯಿಂದ ವಿಷ್ಣುಪಾದ ಪ್ರಾಪ್ತಿಯೆನ್ನಲಾಗಿದೆ.

        ಲಕ್ಷ್ಮಣಾ

        ಸ್ತ್ರೀಯರು ಸ್ನಾನ ಮಾಡುವಾಗ ತಲೆಗೂದಲಿಗೆ ಇದರ ರಸ, ಲೋಳೇ ಬಳಸುತ್ತಿದ್ದರಿಂದ  ಇದಕ್ಕೆ ತಿರುತಾಳೀ ಎಂಬ ಮಲಯಾಳಿ ಹೆಸರಿದೆ. ಇದರ ರಸ ಸೇವನೆಯು ಗರ್ಭಾಶಯ ಶುದ್ಧಿಗೆ, ಸಂತತಿಪ್ರಾಪ್ತಿಗೆ ಉತ್ತಮ. ಲಕ್ಷ್ಮಣಾರಿಷ್ಟ ಆಯುರ್ವೇದದ ಪ್ರಸಿದ್ಧ  ಔಷಧಿ. ಶ್ರೀದೇವಿಭಗವತಿಗೆ ಪ್ರಿಯವಾದ ಪತ್ರವಿದು. ಆರಾಧನೆಯಿಂದ ಲಕ್ಷ್ಮೀಯ ಅನುಗ್ರಹ ಸಾಧ್ಯ.


        ಸಹದೇವೀ

        ಇದನ್ನು ಮಲೆಯಾಳದಲ್ಲಿ  ಪೂರ್ವಾಂಕುರುನ್ನಿಲ್ಲ ಎನ್ನುತ್ತಾರೆ.  ಇದರ ರಸ ಸೇವನೆಯಿಂದ ಜ್ವರ - ಕಫ‌- ದಮ್ಮು  ಇತ್ಯಾದಿಗಳು ಶಮನಗೊಳ್ಳುತ್ತವೆ. ಹತ್ತಿಬಟ್ಟೆಗೆ ರಸವೆರೆದು ಬತ್ತಿಹೊಸೆದು ಹರಳೆಣ್ಣೆಯಲ್ಲಿ  ಉರಿಸಿ ಆ ದೀಪಕ್ಕೆ ಬಟ್ಟಲು ಅಡ್ಡವಿರಿಸಿ ಕಾಡಿಗೆ/ ಅಂಜನ ತಯಾರಿಸುತ್ತಿದ್ದರೆನ್ನಲಾಗಿದೆ. ಈ ಪತ್ರ ಬ್ರಹ್ಮದೇವರಿಗೆ ತುಂಬ ಪ್ರಿಯ. ಇದರ ಬಳಕೆಯಿಂದ ದಾರಿದ್ರé ದುಃಖ ಪರಿಹಾರವಾಗುವುದೆಂಬ ನಂಬುಗೆಯಿದೆ.

        ಮುಕುಬೆ

        ಈ ಗಿಡವು ಗಿಡ್ಡನೆಯ ತೆಂಗಿನಗಿಡದಂತಿದೆ. ನೆಲತೆಂಗು, ತೆಂಗಿನಿಂಡಿಗೆ ಎಂದು ಇದರ ಆನ್ಯ ಹೆಸರುಗಳು. ಇದರ ರಸವು ಮೊಸರು, ಮಜ್ಜಿಗೆ ಜತೆ ಸೇವನಾರ್ಹ. ರಕ್ತಾತಿಸಾರ, ವೃಣ, ರಕ್ತಾರ್ತವ, ಮೂಲವ್ಯಾಧಿ, ಹಲವು ವ್ಯಾಧಿಗಳಿಗೆ ಇದು ಪಾರಿಹಾರ್ಯ.  ಪಾರ್ವತೀದೇವಿಯ ಪ್ರಿಯ ಪುಷ್ಪವಿದು. ಉಪಾಸನೆಯಿಂದ ದಾಂಪತ್ಯ ಸುಖ, ಕುಟುಂಬ ಕ್ಷೇಮ ಪ್ರಾಪ್ತಿಯಾಗುತ್ತದೆಂಬ ವಿಶ್ವಾಸವಿದೆ.

        ಗರ್ಗ/ ಭೃಂಗರಾಜ

        ಭೃಂಗರಾಜಾಸವ ಎಂದು ಪ್ರಸಿದ್ಧವಾದ ಇದು ಯಕೃತ್‌ ಉತ್ತೇಜಕ, ಕಫ‌ನಿವಾರಕ. ಭೃಂಗರಾಜ ತೈಲವು ಕೇಶರಂಜಕ ಹಾಗೂ ಕೇಶವರ್ಧಕವಾಗಿ ಪ್ರಚಲಿತ. ಪರಮಶಿವನ ಪ್ರಿಯ ಪ್ರತೀಕವಾಗಿ ಪೂಜೆಗೊಳ್ಳುತ್ತಿದ್ದು  ಪಂಚಮಹಾಪಾತಕ ನಿವೃತ್ತಿಯಾಗುವುದೆಂಬ ವಿಶ್ವಾಸವಿದೆ.

        ಮುಸಲೀಕಂದ

        ನೆಲಪ್ಪನ ಎಂದು ಮಲಯಾಳಿಯಲ್ಲಿ ಇದರ ಹೆಸರು. ಇದು ಮಾತ್ರ ಗಡ್ಡೆಯ ರೂಪದಲ್ಲಿ ಬಳಕೆಯಾಗುತ್ತದೆ. ಇದರ ರಸವು ಧರಿತ್ರಿಯಂತೆ ಧಾರಣಶಕ್ತಿಪ್ರದ ಎಂದು ಪ್ರತೀತಿ. ಧಾತುಪುಷ್ಟಿಕರವೂ ಹೌದು. ಭೂಮಿದೇವಿಗೆ ಇದು ತುಂಬ ಪ್ರಿಯ. ಅರ್ಚನೆಯಿಂದ ವಿವೇಕೋದಯ.

        ಹಿಟ್ಟುಳುಕ

        ಗಿಡ ಪೂರ್ತಿ ಹರಡಿರುವ ಬಿಳಿ ಹೂವು ಹಿಟ್ಟು  ಚೆಲ್ಲಿದಂತೆ ಕಾಣಿಸುತ್ತದೆ. ಚೆರುವುಳ ಎಂದು ಮಲೆಯಾಳದಲ್ಲಿ ಕರೆಯುತ್ತಾರೆ. ವಿಷ ನಿವಾರಕ. ಕಫ‌ ನಿಯಂತ್ರಕವೂ ಹೌದು. ಗರ್ಭಸಂರಕ್ಷಕವಾಗಿಯೂ ಬಳಕೆಯಾಗುತ್ತದೆ. ಪಲ್ಯ ತಯಾರಿಸಿದರೆ ಊಟದ ರುಚಿ ಅಧಿಕ. ಯಮಧರ್ಮರಾಜನಿಗೆ ಪ್ರಿಯವಾದುದು. ಆಯುಃಪ್ರಾಪ್ತಿಗೆ ಅನುಕೂಲ.

        ಇಲಿಕಿವಿ/ಆಖುಪರ್ಣಿ

        ಇದರ ರಸ ಸೇವನೆಯಿಂದ ಸೋಂಕುರೋಗ ದೂರವಾಗುತ್ತದೆ. ಕಾಮಚಕ್ರೇಶ್ವರನಿಗೆ ಪ್ರಿಯವಾದ ಪುಷ್ಪವಿದು. ಇದರ ಆರಾಧನೆಯಿಂದ ಸೌಂದರ್ಯವೃದ್ಧಿ.

        ಇಂದ್ರವಲ್ಲಿ

        ಉಳಿಞ ವಲ್ಲೀ ಇದರ ಮಲಯಾಳೀ ಹೆಸರು. ಇದರ ಬೀಜ ಉದ್ದಿನಕಾಳಿನಂತೆ ಕಪ್ಪು. ಅದರಲ್ಲಿ  ಬಿಳಿ ಆಟೀನು ಎಲೆಯಾಕಾರದ ಅಥವಾ ಹೃದಯದಾಕಾರದ ಚಿತ್ರವಿದೆ. ಉತ್ತರಕರ್ನಾಟಕದ ಜನಪದರಲ್ಲಿ  ಬೆಕ್ಕಿನ ಬಳ್ಳಿ  ಎಂಬ ಹೆಸರು ಚಾಲ್ತಿಯಲ್ಲಿದೆ. ಇದರ ರಸ ಸೇವನೆಯಿಂದ ಶ್ರಮಜನ್ಯ ಶೂಲೆ ಮತ್ತು  ದೇಹ ದೌರ್ಬಲ್ಯ ಶಮನವಾಗುತ್ತದೆ. ಇದರ ರಸಸೇವನೆಯಿಂದ ತೈಲದ ತಯಾರಿ ಮತ್ತು ಬಳಕೆಯು ಕೇಶವು ಸೊಂಪಾಗಿ ಬೆಳೆಯಲು ಸಹಕಾರಿ, ನೋವು - ಬಾವುಗಳು ಶಮನ, ನರನಾಡೀ ಸುದೃಢವಾಗುತ್ತದೆ. ದೇವೇಂದ್ರನ ಪ್ರಿಯ ಪುಷ್ಪ. ಇದರ ಆರಾಧನೆಯಿಂದ ಇಷ್ಟಸಿದ್ಧಿ ಪ್ರಾಪ್ತಿ ಎಂದು ನಂಬಿಕೆಯಿದೆ. ಆದಿವಾಸೀ, ಗಿರಿವರ್ಗದ ಸ್ತ್ರೀಯರು ಇದರಿಂದ ತುರುಬು ಬಿಗಿಯುತ್ತಿದ್ದು  ಸ್ನಾನಾನುಲೇಪವಾಗಿ ಬಳಸುತ್ತಿದ್ದರಂತೆ.
        ಕರ್ಕಾಟಕ ಮಾಸದಲ್ಲಿ  ದಾರಿದ್ರé - ಅಸೌಖ್ಯದ ಭಯ. ಆದ್ದರಿಂದ ಮಾಸಾರಂಭದಿಂದಲೇ ಮನೆ ಮತ್ತು ಮೈಮನಗಳನ್ನು  ಶುಚಿಶುದ್ಧವಾಗಿರಿಸಿ ದಶವಿಧ ಪುಷ್ಪಗಳನ್ನು ಉಪಾಸಿಸುವುದು ಸ್ತ್ರೀಪುರುಷರಿಬ್ಬರಿಗೂ ಮಂಗಳಪ್ರದವೆನ್ನಲಾಗಿದೆ. ಮುಂಜಾನೆಯ ಅರ್ಚನೆಯ ನಂತರ ಪ್ರಸಾದದ ತೆರನಾಗಿ ಅವರವರ ದೇಹಪ್ರಕೃತಿಗೆ ಸರಿಹೊಂದಿಕೊಳ್ಳುವಂತೆ ಹಿತ- ಮಿತ -ಋತ ಸ್ವರೂಪದ ಕಷಾಯ ಅಥವಾ ಹಾಲುಕಷಾಯವನ್ನು ಹಾಕಿ ಮದ್ದಿನಗಂಜಿ ತಯಾರಿಸಿ ಭುಂಜಿಸುವುದು ಸಂಪ್ರದಾಯವಾಗಿದೆ. ದಶಪುಷ್ಪಗಳ ಆರಾಧನೆ, ಸೇವನೆಯೆಂದರೆ ಪ್ರಕೃತಿಯನ್ನು ಆರಾಧಿಸುತ್ತದೆ. ಕರ್ಕಾಟಕ ಮಾಸದಲ್ಲಿ ಪ್ರಕೃತಿ ಪ್ರತಿಕೂಲವಿರುವುದರಿಂದ ಅದನ್ನು ನಮಗೆ ಅನುಕೂಲಗೊಳಿಸಲು ಆರಂಭವಾದ ಸಂಪ್ರದಾಯವಿದು. ಇದನ್ನು ಅನುಸರಿಸಿದರೆ ಮೈಮನಸ್ಸು ಸುದೃಢ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      image
      • Copyright @ 2009 Udayavani.All rights reserved.
      • Designed & Hosted By 4cplus