Saturday, May 18, 2013
Last Updated: 12:22:59 PM IST
  • ನಾನೆಲ್ಲಿರುವೆ:
  • ಮುಖಪುಟ ಮನೋರಂಜನೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಶ್ವೇತ ಸುಂದರಿಯ ಸೈಬರಾಯಣ
    • ಒಂದಷ್ಟು ಅವಕಾಶಗಳೊಂದಿಗೆ ಆಗಾಗ ಮಾಧ್ಯಮಕ್ಕೆ ಎದುರಾಗುತ್ತಿರುವವರು ಶ್ವೇತಾ ಶ್ರೀವಾತ್ಸವ್‌.

      • Udayavani | Jul 27, 2012

        ಕಾಲ ಬದಲಾಗುತ್ತೆ. ಕೈ ತುಂಬಾ ಅವಕಾಶ ಇದ್ದವರು ಅವಕಾಶಕ್ಕಾಗಿ ಎದುರು ನೋಡುವಂತಾಗುತ್ತದೆ. ಅಲ್ಲೊಂದು ಇಲ್ಲೊಂದು ಅವಕಾಶ ಇದ್ದವರಿಗೆ ಕೈ ತುಂಬಾ ಕೆಲಸ ಸಿಗುತ್ತದೆ. ಇದು ಸಿನಿಮಾರಂಗ. ಬದಲಾವಣೆಗೆ ಒಗ್ಗಿಕೊಳ್ಳುತ್ತಾ, ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವ ಬಣ್ಣದ ಲೋಕ. ಇಂತಹ ಬದಲಾವಣೆಯಲ್ಲಿ ಅನೇಕರು ಮಿಂಚುತ್ತಾರೆ, ಕೈ ತುಂಬಾ ಕೆಲಸ ಪಡೆಯುತ್ತಾರೆ. ಹಾಗೆ ಸದ್ಯ ಒಂದಷ್ಟು ಅವಕಾಶಗಳೊಂದಿಗೆ ಆಗಾಗ ಮಾಧ್ಯಮಕ್ಕೆ ಎದುರಾಗುತ್ತಿರುವವರು ಶ್ವೇತಾ ಶ್ರೀವಾತ್ಸವ್‌.

        ಒಳ್ಳೆಯ ಪಾತ್ರಗಳಲ್ಲೇ ನಟಿಸಬೇಕು, ನಟಿಸಿದ ಮೇಲೆ ಜನ ಅದನ್ನು ಗುರುತಿಸಬೇಕು ಎಂಬ ಸ್ಪಷ್ಟತೆಯೊಂದಿಗೆ ಸಿನಿಮಾ ಒಪ್ಪಿಕೊಳ್ಳುತ್ತಿರುವ ಶ್ವೇತಾ ಈಗ "ಸೈಬರ್‌ ಯುಗದೊಳ್‌ ನವಯುವ ಮಧುರ ಪ್ರೇಮಕಾವ್ಯಂ' ಹಾಗೂ "ಸಿಂಪಲ್ಲಾಗಿ ಒಂದು ಲವ್‌ಸ್ಟೋರಿ' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಪ್ರಕಾರ, ಆ ಎರಡೂ ಚಿತ್ರಗಳು ಭಿನ್ನ. ಒಂದರಲ್ಲಿ ವಾಚಾಳಿಯಾದರೆ ಇನ್ನೊಂದರಲ್ಲಿ ಲವ್‌ಬರ್ಡ್‌.

        ಅಂದಹಾಗೆ, ಈ ಶ್ವೇತಾಗೆ ತಾನು ಮಾಡುವ ಸಿನಿಮಾದಲ್ಲಿ ಏನಾದರೊಂದು ವಿಷಯಬೇಕು, ಬರೀ ಮನರಂಜನೆಗಷ್ಟೇ ಪ್ರಾಮುಖ್ಯತೆ ಇರಬಾರದು. ಜೊತೆಗೆ ಚಿತ್ರ ಸಮಾಜಕ್ಕೆ ಸಣ್ಣ ವಿಷಯವನ್ನಾದರೂ ನೀಡಬೇಕು ಎಂಬ ಆಸೆ ಇವರದಂತೆ. ಈಗ ಅವರು ಒಪ್ಪಿಕೊಂಡಿರುವ ಎರಡು ಚಿತ್ರಗಳಲ್ಲೂ ಒಳ್ಳೆಯ ಅಂಶಗಳಿವೆಯಂತೆ. ಈ ಶ್ವೇತಾ, ಗಾಂಧಿನಗರಕ್ಕೇನು ಹೊಸಬರಲ್ಲ. ಈಗಾಗಲೇ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. "ಆ ದಿನಗಳು' ಚಿತ್ರದಲ್ಲೂ ನಟಿಸಿದ್ದಾರೆ. ಆದರೆ ನಾಯಕಿಯಾಗಿಲ್ಲ. ಒಂದಲ್ಲ ಒಂದು ದಿನ ಹೀರೋಯಿನ್‌ ಪಟ್ಟ ಸಿಗಬಹುದೆಂಬ ವಿಶ್ವಾಸದೊಂದಿಗೆ ಕಾಯುತ್ತಾ ಬಂದ ಶ್ವೇತಾಗೆ ಈಗ ಒಳ್ಳೆಯ ಕಾಲ ಬಂದಿದೆ. ಒಂದಷ್ಟು ಅವಕಾಶಗಳು ಆಕೆಯನ್ನು ಹುಡುಕಿಕೊಂಡು ಬರುತ್ತವೆ. "ನನಗೆ ಸಿನಿಮಾ ಮಾಡುವುದು ಮುಖ್ಯವಲ್ಲ. ಮಾಡಿದ ಸಿನಿಮಾಗಳು, ಪಾತ್ರಗಳು ಹೇಗಿವೆ ಅನ್ನೋದಷ್ಟೇ ಮುಖ್ಯ. ಈಗ ನಾನು ಮಾಡುತ್ತಿರುವ ಎರಡು ಚಿತ್ರದ ಪಾತ್ರಗಳು ನನಗೆ ತುಂಬಾ ಇಷ್ಟವಾದುವು. ಇಲ್ಲಿ ಮನರಂಜನೆ ಜೊತೆಗೆ ಒಂದು ಸಂದೇಶ ಕೂಡಾ ಇದೆ' ಎಂಬುದು ಶ್ವೇತಾ ಮಾತು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus