ವಿಜಯ್ ಭರಮಸಾಗರ | Jul 27, 2012
ಹಾಲುಗಲ್ಲದ ಹುಡುಗಿ. ಒಳ್ಳೇ ಹೈಟು. ಸಖತ್ ಪರ್ಸನಾಲಿಟಿ. ಎಂಥವರನ್ನೂ ಆಕರ್ಷಿಸುವ ಕಣ್ಣೋಟ. ಮೋಡಿ ಮಾಡುವ ಸಿಂಪಲ್ ಸ್ಮೈಲ್ . ನೋಡಿದೊಡನೆ ಒಮ್ಮೆಲೆ ಕ್ಲೀನ್ ಬೋಲ್ಡ್ ಆಗಿಬಿಡುವಂತಹ ಮಸ್ತ್ ಮಸ್ತ್ ಬ್ಯೂಟಿ. ಈ ಚೆಂದದ ಗೊಂಬೆಯ ಹೆಸರು ಸೌಂದರ್ಯ. ನಟಿ ಜಯಮಾಲಾ ಮಗಳು ಈಕೆ. ನೋಟ, ಹಾವ,ಭಾವ ಮಾತು ಮತ್ತು ನಗು ಎಲ್ಲವೂ ಥೇಟ್ ಅಮ್ಮನ ಹಾಗೆ. ಎಲ್ಲಾ ನವ ನಟಿಯರಂತೆ ಸೌಂದರ್ಯ ಕೂಡ ಬೆಟ್ಟದಷ್ಟು ಕನಸು ಹೊತ್ತು ಈ ಕಲರ್‌ಫುಲ್ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಸಿನಿಮಾ ಎಂಬ ಮಾಯಾಲೋಕದಲ್ಲಿ ಗಟ್ಟಿನೆಲೆ ಕಾಣುತ್ತೇನೆಂಬ ಭರವಸೆ ಈಕೆಯದು. "ಗಾಡ್‌ಮದರ್' ಹೇಳಿಕೊಟ್ಟ ನಟನೆ ಪಾಠ, ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸಿದ್ದಕ್ಕೆ ಸೌಂದರ್ಯಗೆ ಸಿಕ್ಕಿದ್ದು ಒಳ್ಳೇ "ಗಾಡ್‌ಫಾದರ್'. ಆ ಮೊದಲ "ಗಾಡ್‌ಫಾದರ್' ಹಾಗೂ ತನ್ನ ಅನುಭವದ ಬಗ್ಗೆ ಸೌಂದರ್ಯ ಮನಬಿಚ್ಚಿ ಮಾತಾಡಿದ್ದಾರೆ.
ಚಿತ್ರರಂಗಕ್ಕೆ ಬರುವ ಐಡಿಯಾ ಇತ್ತಾ?
ಯಾವತ್ತೂ ಆ ಬಗ್ಗೆ ಯೋಚಿಸಿರಲಿಲ್ಲ. ತುಂಬಾ ಕಷ್ಟ ಆಗಬಹುದು ಅಂದುಕೊಂಡಿದ್ದೆ. ಮೆಲ್ಲನೆ ಮನಸ್ಸು ಚಿತ್ರ ರಂಗದತ್ತ ವಾಲತೊಡಗಿತು. ಹಾರ್ಡ್‌ವರ್ಕ್ ಮಾಡಿದರೆ ಕಷ್ಟವೇನಲ್ಲ ಅನಿಸಿತು. ಏನಾದ್ರೂ ಸರಿ, ಚಿತ್ರರಂಗಕ್ಕೆ ಕಾಲಿಟ್ಟೇ ಬಿಡೋಣ ಅಂತ ನಿರ್ಧಾರ ಮಾಡಿದೆ.
ನಿಮ್ಮ ಈ ನಿರ್ಧಾರ ಕೇಳಿ ಅಮ್ಮ ಹೇಳಿದ್ದೇನು?
ಚಿಕ್ಕಂದಿನಲ್ಲಿ ಸಿನಿಮಾ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಕ್ಯಾಮೆರಾ ಅಂದ್ರೇನೇ ಆಗ್ತಾ ಇರಲಿಲ್ಲ. ನಾನು ಆ್ಯಕ್ಟ್ ಮಾಡ್ತೀನಮ್ಮಾ ಅಂದಾಗ, ಅವರು ಜೋಕ್ ಮಾಡ್ತೀಯಾ ಅಂತಿದ್ರು. ದಿನ ಕಳೆದಂತೆ ನನ್ನ ಮಾತುಗಳು ಅಮ್ಮನಿಗೆ ಸೀರಿಯಸ್ ಅಂತ ಅನಿಸುತ್ತಿದ್ದಂತೆಯೇ, ಬೇಡ, ಸಿನಿಮಾ ಫೀಲುx ತುಂಬಾ ಕಷ್ಟ. ಮೊದಲು ಚೆನ್ನಾಗಿ ಓದು. ಆಮೇಲೆ ನೋಡೋಣ ಅಂದಿದ್ರು. ಅವರ ಮಾತು ನಾನು ಉಳಿಸಿಕೊಂಡೆ. ನನ್ನ ಮಾತು ಅವರು ಉಳಿಸಿ ಕೊಂಡ್ರು.
ನಟನೆ ಶಾಲೆಯಿಂದ ಹೆಲ್ಪ್ ಆಯ್ತಾ?
ಯೆಸ್... ಹಂಡ್ರೆಡ್ ಪರ್ಸೆಂಟ್ ಹೆಲ್ಪ್ ಆಗಿದೆ. ಮೊದಲು ಭಯ ಹೋಯ್ತು. ಟೆಕ್ನಿಕಲಿ ಏನೆಂಬುದು ಗೊತ್ತಾಯ್ತು. ಪಾತ್ರಕ್ಕೆ ಹೇಗೆ ಜೀವ ತುಂಬಬೇಕು ಅನ್ನೋದನ್ನೂ ಆ ಶಾಲೆಯಿಂದ ಕಲಿತುಕೊಂಡೆ. ಅದರಿಂದ ತುಂಬಾನೇ ಹೆಲ್ಪ್ ಆಗಿದ್ದಂತೂ ನಿಜ.
ಸೆಂಟಿಮೆಂಟ್ಟೋ, ಡಾನ್ಸೋ, ಗ್ಲಾಮರೊ ಅಥವಾ ಕಾಮಿಡಿನೋ... ನಿಮಗೆ ಯಾವ ಕೆಟಗರಿ ಇಷ್ಟ?
ನಾನೊಬ್ಬ ನಟಿಯಾಗಬೇಕೆಂದು ಇಲ್ಲಿಗೆ ಬಂದವಳು. ಎಲ್ಲಾ ಕೆಟಗರಿಯೂ ಇಷ್ಟ. ಮುಖ್ಯವಾಗಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳೋದು. ಉಳಿದಂತೆ ಸೆಂಟಿಮೆಂಟ್, ಕಾಮಿಡಿಯೂ ಇಷ್ಟ. ನಾನು ಬೆಲ್ಲಿ ಡಾನ್ಸ್ ಕೋರ್ಸ್ ಮಾಡಿದ್ದೇನೆ. ಜತೆಯಲ್ಲಿ ಸಾಲ್ಸಾ ಡಾನ್ಸೂ ಗೊತ್ತು.
ರೋಲ್ ಮಾಡೆಲ್ ಯಾರು? ಈಗಲೂ ಕಾಜೋಲ್ ಇಷ್ಟನಾ?
ನನ್ನಮ್ಮನೇ ನನಗೆ ರೋಲ್‌ಮಾಡೆಲ್. ಯಾವತ್ತಿಗೂ ಕಾಜೋಲ್ ತುಂಬಾನೇ ಇಷ್ಟ.
ಉಪೇಂದ್ರ ಏನಾದ್ರು ಹೇಳ್ಕೊಟ್ರಾ?
ಶೂಟಿಂಗ್ ವೇಳೆ ತುಂಬಾ ಜನ ಇರ್ತಾ ಇದ್ರು. ಆಗ ನನಗೆ ಒಂದಷ್ಟು ಗಲಿಬಿಲಿ ಆಗುತ್ತಿತ್ತು. ಭಯಗೊಂಡು ಐದು ನಿಮಿಷ ಸೆಟ್‌ರೂಮ್‌ಗೆ ಹೋಗುತ್ತಿದ್ದೆ. ಅಂಥಾ ಟೈಮ್‌ನಲ್ಲಿ ಉಪ್ಪಿ ಸರ್, "ಎಲ್ಲರ ಮುಂದೇನೆ ನಿಂತು ಅಭ್ಯಾಸ ಮಾಡಿ ಏನೂ ಆಗೋದಿಲ್ಲ'. ಅಂತ ಧೈರ್ಯ ಕೊಡ್ತಾ ಇದ್ರು. ಅವರ ಮಾತುಗಳು ನನ್ನಲ್ಲಿ ಮತ್ತಷ್ಟು ಉತ್ಸಾಹ ತುಂಬುತ್ತಿದ್ದವು. ಇನ್ನು, ನಿಮಗೆ ಸುಂದರ ಕಣ್ಣುಗಳಿವೆ. ಅವುಗಳನ್ನ ಸರಿಯಾಗಿ ಬಳಸಿಕೊಳ್ಳಿ ಅನೋ° ಟಿಪ್ಸ್ ಕೊಟ್ಟಿದ್ದಾರೆ. ಡೈಲಾಗ್ ಡಿಲವರಿ ಹೇಗೆ ಮಾಡಬೇಕು. ಕ್ಯಾಮೆರಾ ಮುಂದೆ ಯಾವ ರೀತಿ ನಿಲ್ಲಬೇಕೆಂಬ ಕುರಿತು ಹೇಳಿಕೊಟ್ಟಿದ್ದು ಮರೆಯದ ಅನುಭವ.
ಇದು ಗ್ಲಾಮರ್ ಫೀಲ್ಡ್ ಏನನ್ಸುತ್ತೆ?
ನನಗೆ ಡೇ ಒನ್‌ನಿಂದಲೂ ಕಾನ್ಫಿಡೆಂಟ್ ಇದೆ. ನಾನು ಪ್ರತಿಭೆಯನ್ನು ನಂಬಿದವಳು. ಅದಕ್ಕಿಂತಲೂ ಹೆಚ್ಚಾಗಿ ನನ್ನ ಮೇಲೆ ನನಗೆ ನಂಬಿಕೆ ಜಾಸ್ತಿ. ಇಲ್ಲಿ ಸ್ಪರ್ಧೆ ಇದೆ ಅನ್ನೋ ಅರಿವಿದೆ. ಇಷ್ಟಕ್ಕೂ ನಾನು ಲುಕ್ ಮತ್ತು ಲಕ್ ನಂಬಿ ಇಲ್ಲಿಗೆ ಬಂದಿಲ್ಲ. ನನ್ನ ಹಾರ್ಡ್‌ವರ್ಕ್ ನಂಬಿ ಇಲ್ಲಿಗೆ ಕಾಲಿಟ್ಟಿದ್ದೇನೆ. ಆದರೂ ಇದು ಗ್ಲಾಮರ್ ಫೀಲ್ಡ್ ಸುಲಭವಾಗಿ ಗೆಲುವು ಸಿಗೋದಿಲ್ಲ ಎಂಬುದೂ ನಂಗೊತ್ತು.
ಫಸ್ಟ್ ಫಿಲ್ಮ್ನಲ್ಲಿ ಯಾರ ಜೊತೆ ಸ್ಟೆಪ್ ಹಾಕಬೇಕು ಅಂದುಕೊಂಡಿದ್ರಿ?
ನಿಜ ಹೇಳಾ. ನಾನು ಮಾಡಿರುವ ಫಸ್ಟ್ ಸಿನ್ಮಾದಲ್ಲಿ ಎಲ್ಲವೂ ಪಫೆìಕ್ಟ್ ಆಗಿದೆ. ಸೂಪರ್‌ಸ್ಟಾರ್ ಜತೆ ಸ್ಟೆಪ್ಸ್ ಹಾಕಿದ್ದೇನೆ. ನನಗಿಷ್ಟವಾದಂತಹ ಕಾಸ್ಟೂéಮ್ ಹಾಕಿದ್ದೇನೆ. ನನ್ನಿಷ್ಟದಂತೆಯೇ ಡಾನ್ಸೂ ಮಾಡಿದ್ದೇನೆ. ಮೊದಲ ಚಿತ್ರ ಹೇಗಿರಬೇಕು ಅಂದುಕೊಂಡಿದೊ°à ಎಲ್ಲವೂ ಹಾಗೇ ಇದೆ.
ಅಮ್ಮ ಕಲಿಸಿದ ನಟನೆ ಪಾಠದ ಬಗ್ಗೆ...
ಕ್ಯಾಮೆರಾ ಮುಂದೆ ಹೋದಾಗ ಯಾವ ಯೋಚನೆಯೂ ಮಾಡಬೇಡ. ಸಾಕಷ್ಟು ಟೈಮ್ ತಗೊಂಡು ಪಾತ್ರಕ್ಕೆ ಜೀವ ತುಂಬಬೇಕು. ನಿರ್ಮಾಪಕರಿಗೆ ಕಷ್ಟ ಕೊಡಬಾರದು. ಟೈಮ್‌ಗೆ ಸರಿಯಾಗಿ ಸೆಟ್‌ಗೆ ಹೋಗಬೇಕು. ಯಾವುದೇ ಪಾತ್ರ ಸಿಕ್ಕರೂ ಆ ಪಾತ್ರವೇ ನೀನಾಗಬೇಕು. ಸಿನಿಮಾ ಸಂಖ್ಯೆ ಮುಖ್ಯವಲ್ಲ. ಎಂಥಾ ಚಿತ್ರ ಕೊಡುತ್ತೇನೆ ಅನ್ನೋದರ ಕಡೆ ಗಮನಕೊಡಬೇಕು.ಗಾಸಿಪ್‌ಗ್ಳಿಗೆ ಕಿವಿಗೊಡ ಬಾರದು. ಹೀಗೆ ಇನ್ನೂ ಅನೇಕ ವಿಷಯಗಳ ಬಗ್ಗೆ ಹೇಳಿದ್ದಾರೆ.
ನಿಮ್ಮ ವಾಯ್ಸ ಚೆನ್ನಾಗಿದೆ. ಏಕೆ ಡಬ್ ಮಾಡ್ಲಿಲ್ಲ?
ನಿರ್ದೇಶಕರಲ್ಲೇ ಕೇಳಿ.
ಕೊನೇ ಮಾತು...
ನಾನಿಲ್ಲೇ ಉಳಿದು ಬೆಳೆಯು ವಾಸೆ. ಅಮ್ಮನಂತೆ ನನ್ನನ್ನೂ ಆಶೀರ್ವದಿಸಿ, ಪ್ರೀತಿಯಿಂದ ಬೆಳೆಸಿ.