ವಾಷಿಂಗ್ಟನ್: ಚೀನಾ ಸುದ್ದಿಗಳನ್ನು ಕಟ್ಟುನಿಟ್ಟಿನ ಸೆನ್ಸಾರ್‌ಗೊಳಪಡಿಸುತ್ತಿರುವುದರಿಂದ ಮತ್ತು ಸುದ್ದಿಗಳು ಹೊರ ಹೋಗುವುದಕ್ಕೆ ನಿರ್ಬಂಧಗಳನ್ನು ವಿಧಿಸಿರುವುದರಿಂದ ಅಂತರ್‌ಜಾಲ ಕ್ರಾಂತಿಯ ಈ ಕಾಲದಲ್ಲೂ ಟಿಬೆಟಿಯನ್ನರು ಸುದ್ದಿಗಳಿಗಾಗಿ 'ಬಾಯಿಂದ ಬಾಯಿಗೆ ಸುದ್ದಿ ಹರಡುವ ಪುರಾತನ ಪದ್ಧತಿ'ಯನ್ನು ಅವಲಂಬಿಸಿದ್ದಾರೆ.ಟಿಬೆಟಿಯನ್ನರು ರೇಡಿಯೊ ಫ್ರೀ ಏಶ್ಯಾ ಮತ್ತು ವಾಯ್ಸ ಆಫ್ ಅಮೆರಿಕದಿಂದ ತಾವು ಕೇಳಿದ ಸುದ್ದಿಯನ್ನು ಇತರರಿಗೆ ಬಾಯಿಯ ಮೂಲಕ ನಿಯಮಿತವಾಗಿ ತಲುಪಿಸುತ್ತಿದ್ದಾರೆಂದು ಅಮೆರಿಕದಲ್ಲಿ ಗುರುವಾರ ಬಿಡುಗಡೆಗೊಳಿಸಲಾದ ಸಮೀಕ್ಷಾ ವರದಿಯೊಂದು ತಿಳಿಸಿದೆ.ತಮ್ಮ ನಂಬಿಕಸ್ಥ ಸಾಮಾಜಿಕ ವಲಯದ ನಡುವೆ ಸುದ್ದಿಯನ್ನು ಹಂಚಿಕೊಳ್ಳುವುದು ಒಂದು ಹೆಮ್ಮೆಯ ಸಂಗತಿ ಎಂದು ಟಿಬೆಟಿಯನ್ನರು ಭಾವಿಸಿದ್ದಾರೆಂದು ಬ್ರಾಡ್‌ಕಾಸ್ಟಿಂಗ್ ಬೋರ್ಡ್ ಆಫ್ ಗವರ್ನರ್ ಮತ್ತು ಗ್ಯಾಲಪ್ ನಡೆಸಿರುವ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.ಶೇ. 89 ಟಿಬೆಟಿಯನ್ನರ ಮನೆಗಳಲ್ಲಿ ಟಿವಿ ಇದ್ದರೂ ಚೀನಾ ಸರಕಾರಿ ಸ್ವಾಮ್ಯದ ಯಾವುದೇ ವಾಹಿನಿಯನ್ನು ವಿಶ್ವಾಸಾರ್ಹ ಸುದ್ದಿ ಮೂಲವೆಂದು ಅವರು ಅವಲಂಬಿಸಿಲ್ಲ. ಶೇ. 76 ಮಂದಿ ಇತರ ವ್ಯಕ್ತಿಗಳು ತಮ್ಮ ಸುದ್ದಿ ಮೂಲವೆಂದು ಹೇಳಿದ್ದಾರೆ.ಮೂರು ವಿಶ್ವಾಸಾರ್ಹ ಸುದ್ದಿ ಮೂಲವನ್ನು ಹೆಸರಿಸಿ ಎಂದು ಹೇಳಿದಾಗ ಶೇ. 94 ಮಂದಿ ಬಾಯಿಂದ ಬಾಯಿಗೆ ಹರಡುವ ಸುದ್ದಿಯೇ ತಮ್ಮ ಮೂಲ ಎಂದು ಹೇಳಿದ್ದಾರೆ.ದಲೈಲಾಮಾ 2011ರ ಡಿಸೆಂಬರ್ 25ರಿಂದ 2012ರ ಜನವರಿ 25ರ ತನಕ ಬಿಹಾರದ ಬೋಧ್‌ಗಯಾದಲ್ಲಿ ನೀಡಿದ ಕಾಲಚಕ್ರ ಬೋಧನೆಯ ಸಂದರ್ಭದಲ್ಲಿ ಗ್ಯಾಲಪ್ 117 ವಿಷಯಗಳ ಮೇಲೆ ಜನರನ್ನು ಮುಖಾಮುಖೀ ಸಂದರ್ಶಿಸಿ ಈ ಸಮೀಕ್ಷೆಯನ್ನು ಸಿದ್ಧಪಡಿಸಿದೆ. ಟಿಬೆಟ್‌ನ ಅಮೊª, ಖಾಮ್ ಮತ್ತು ಉತ್ಸಂಗ್‌ನಿಂದ ಬಂದ ಯಾತ್ರಿಕರನ್ನು ಸಮೀಕ್ಷೆಗಾಗಿ ಮಾತನಾಡಿಸಲಾಗಿದೆ.