Wednesday, May 22, 2013
Last Updated: 2:58:11 PM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸಿರಿಯಾ : ಅಂತಿಮ ಹೋರಾಟಕ್ಕೆ ಬಂಡುಕೋರರ ಸಿದ್ಧತೆ
    • ಅಧ್ಯಕ್ಷ ಬಾಶರ್‌ ಅಲ್‌ ಅಸ್ಸಾದ್‌ ಪತನ ಸನ್ನಿಹಿತವಾಗಿದೆ ಎಂದು ವಿಶ್ವಸಂಸ್ಥೆಯ ವೀಕ್ಷಕ ಹೇಳಿದ್ದಾರೆ.

      • Udayavani | Jul 27, 2012

        ಅಲೆಪ್ಪೊ: ಸಿರಿಯಾದ ಬಂಡುಕೋರರು ಅಲೆಪ್ಪೊದಲ್ಲಿ ಅಂತಿಮ ಹೋರಾಟಕ್ಕೆ ಸಿದ್ಧವಾಗುತ್ತಿರುವುದರಿಂದ ಅಧ್ಯಕ್ಷ ಬಾಶರ್‌ ಅಲ್‌ ಅಸ್ಸಾದ್‌ ಪತನ ಸನ್ನಿಹಿತವಾಗಿದೆ ಎಂದು ವಿಶ್ವಸಂಸ್ಥೆಯ ವೀಕ್ಷಕ ಹೇಳಿದ್ದಾರೆ.

        ಸಿರಿಯಾದ ಎರಡನೇ ಅತಿ ದೊಡ್ಡ ನಗರವಾಗಿರುವ ಅಲೆಪ್ಪೊದಲ್ಲಿ ಬಂಡುಕೋರರು ಜಮೆಯಾಗಲು ತೊಡಗಿರುವಂತೆ ಸರಕಾರ ಪಡೆಯನ್ನು ರವಾನಿಸುತ್ತಿದೆ. ಆದರೆ ಸೇನೆಗಿಂತ ಮೊದಲೇ ಬಂಡುಕೋರರು ದಾಳಿ ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ವೀಕ್ಷಕರು ಹೇಳಿದ್ದಾರೆ.

        ಬುಧವಾರ ಮತ್ತು ಗುರುವಾರ ಸರಕಾರ ಅಲೆಪ್ಪೊಗೆ ವಿಶೇಷ ಪಡೆಗಳನ್ನು ರವಾನಿಸಿತ್ತು ಹಾಗೂ ಶುಕ್ರವಾರ ಹೆಚ್ಚುವರಿ ಪಡೆಗಳು ಬಂದಿಳಿದಿವೆ. ಶನಿವಾರವೇ ನಿರ್ಣಾಯಕ ಕಾಳಗ ಪ್ರಾರಂಭವಾಗುವ ನಿರೀಕ್ಷೆಯಿದೆ ಎನ್ನುವ ಆತಂಕವನ್ನು ವೀಕ್ಷಕರು ವ್ಯಕ್ತಪಡಿಸಿದ್ದಾರೆ.

        ಬಂಡುಕೋರರ ನಗರದ ವಾಯವ್ಯ ಭಾಗದಲ್ಲಿಂದು ಸೇನಾ ಹೆಲಿಕಾಪ್ಟರ್‌ಗಳು ಹಾರ ತೊಡಗಿವೆ. ಅಲೆಪ್ಪೊದ ಐತಿಹಾಸಿಕ ಓಲ್ಡ್‌ ಕ್ವಾರ್ಟರ್‌ ಪಕ್ಕದಲ್ಲಿರುವ ಅಲ್‌-ಜಮಾಲಿಯ ನಗರದಲ್ಲಿ ಕಾಳಗ ಪ್ರಾರಂಭವಾಗಿದೆ.

        ಫ‌ರ್ದೋಸ್‌ನ ದಕ್ಷಿಣದಲ್ಲಿ ಶೆಲ್‌ ದಾಳಿಗೆ ಮೂವರು ಬಲಿಯಾಗಿದ್ದಾರೆ ಹಾಗೂ ನೆರೆಯ ಮಯಸಲೂನ್‌ನಲ್ಲಿ ಓರ್ವ ಸತ್ತಿದ್ದಾನೆ. ಸಲಾಹುದ್ದೀನ್‌ ನಗರದಲ್ಲಿ ನೂರಾರು ಬಂಡುಕೋರರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಮಾರ್ಗದುದ್ದಕ್ಕೂ ಮರಳು ಚೀಲದ ತಡೆಗೋಡೆಗಳನ್ನು ಕಟ್ಟಿಗೊಂಡಿರುವ ದೃಶ್ಯಗಳನ್ನು ಎಎಫ್ಪಿ ವರದಿಗಾರರು ನೋಡಿದ್ದಾರೆ. ಶಾಲೆಗಳು ಮತ್ತು ಮಸೀದಿಗಳ ಒಳಗೆ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ.

        ನಗರ ಕೇಂದ್ರ ಮತ್ತು ವಿಮಾನ ನಿಲ್ದಾಣವನ್ನು ಐದು ರಸ್ತೆಗಳ ಪೈಕಿ ನಾಲ್ಕು ಬಂಡುಕೋರರ ವಶದಲ್ಲಿವೆ.

        ಅಲೆಪ್ಪೊಗೆ ಸೇನಾ ತುಕಡಿಗಳು ಬಂದಿವೆ ಹಾಗೂ ಯಾವುದೇ ಕ್ಷಣದಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆ ಪ್ರಾರಂಭವಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಸಿರಿಯಾ ಸೇನೆಯ ವಕ್ತಾರ ಕರ್ನಲ್‌ ಅಬ್ದುಲ್‌ ಜಬ್ಟಾರ್‌ ಅಲ್‌ ಒಕೈದಿ ಹೇಳಿದ್ದಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus