Friday, May 24, 2013
Last Updated: 5:45:33 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬಾಲ್ಯದ ಕನಸು: ಮಿಶೆಲ್‌ ಒಬಾಮ
    • ಒಲಿಂಪಿಕ್‌ನಲ್ಲಿ ಅಮೆರಿಕ ನಿಯೋಗದ ನೇತೃತ್ವ ವಹಿಸುವುದು ನನ್ನ ಬಾಲ್ಯದ ಕನಸಾಗಿತ್ತು ಎಂದಿದ್ದಾರೆ ಮಿಶೆಲ್‌ ಒಬಾಮ.

      • Udayavani | Jul 27, 2012

        ಲಂಡನ್‌ : ಒಲಿಂಪಿಕ್‌ನಲ್ಲಿ ಅಮೆರಿಕ ನಿಯೋಗದ ನೇತೃತ್ವ ವಹಿಸುವುದು ನನ್ನ ಬಾಲ್ಯದ ಕನಸಾಗಿತ್ತು. ಅದೀಗ ನಿಜವಾಗುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ ಎಂದಿದ್ದಾರೆ ಮಿಶೆಲ್‌ ಒಬಾಮ. ಅವರೀಗ ಅಮೆರಿಕದ ಆತ್ಲೀಟ್‌ಗಳೊಂದಿಗೆ ಬೆರೆತು ಕ್ರೀಡೆಯ ಒಂದು ಭಾಗವೇ ಆಗಿದ್ದಾರೆ.



        ಕಠಿನ ಪರಿಶ್ರಮದಿಂದ ಒಂದಲ್ಲ ಒಂದು ದಿನ ಇಂಥ ಸಾಧನೆಗಳನ್ನು ಮಾಡಲು ಸಾಧ್ಯವಿದೆ ಎಂಬುದರ ಕುರಿತು ನಾನು ಹಾಗೂ ನನ್ನ ತಮ್ಮ ಕನಸು ಕಾಣುತ್ತಿದ್ದೆವು ಎಂದು ಹೇಳಿದ ಮಿಶೆಲ್‌, ಶಿಕಾಗೋದ ದಕ್ಷಿಣ ಪ್ರಾಂತ್ಯದ ಚಿಕ್ಕ ಚಿಕ್ಕ ಮನೆಗಳ ಮೇಲೆ ಈ ಕ್ರೀಡಾಕೂಟ ಭಾರೀ ದೊಡ್ಡ ಪರಿಣಾಮ ಬೀರುತ್ತಿದೆ ಎಂದು ಸಂಭ್ರಮಿಸಿದರು.



        'ದೇಶವನ್ನು ಪ್ರತಿನಿಧಿಸುವ ನಿಮ್ಮಲ್ಲಿ ಅದೆಷ್ಟು ಹೆಮ್ಮೆ, ರೋಮಾಂಚನ ಮನೆ ಮಾಡಿಕೊಂಡಿದೆಯೋ ನಮ್ಮಲ್ಲೂ ಅಷ್ಟೇ ಕುತೂಹಲ ತುಂಬಿಕೊಂಡಿದೆ. ನಿಮ್ಮಿಂದ ನಾನೂ ಸ್ಫೂರ್ತಿ ಪಡೆದಿದ್ದೇನೆ...' ಎನ್ನುತ್ತ ಅಮೆರಿಕದ ಆತ್ಲೀಟ್‌ಗಳನ್ನು ಹುರಿದುಂಬಿಸಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus