ಪುಣೆ : ಪ್ರಬಲ ಲೋಕಪಾಲ್‌ಗೆ ಮತ್ತು ಭ್ರಷ್ಟಾಚಾರ ಆರೋಪವಿರುವ ಕೇಂದ್ರ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿ ಪ್ರಸ್ತುತ ನಡೆಯುವ ಚಳವಳಿಯನ್ನು ಒಳಸಂಚಿನಿಂದ ಕೆಡಿಸಲು ಯುಪಿಎ ಸರ್ಕಾರ ಮಾಧ್ಯಮಗಳಿಗೆ ಸೂಚನೆ ನೀಡಿದೆ ಎಂದು ಅಣ್ಣಾ ತಂಡದ ಪ್ರಮುಖ ಸದಸ್ಯೆ ಕಿರಣ್ ಬೇಡಿ ಶುಕ್ರವಾರ ಇಲ್ಲಿ ಆರೋಪಿಸಿದ್ದಾರೆ.ಜಂತರ್-ಮಂತರ್‌ನಲ್ಲಿ ನಡೆಯುವ ನಮ್ಮ ಚಳವಳಿ ಸರಕಾರದ ಉಳಿವಿಗೆ ಬೆದರಿಕೆ ಇದ್ದ ಕಾರಣ ಒಳಸಂಚಿನಿಂದ ಕೆಡಿಸಲು ಮಾಧ್ಯಮಕ್ಕೆ ಸರಕಾರ ಬರೆದ ಪತ್ರವಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಲೋಕಪಾಲ್‌ನಿಂದ ಸಚಿವರ ಭ್ರಷ್ಟಾಚಾರದತ್ತ ಬೆಳಕು ಚೆಲ್ಲುತ್ತಿದ್ದರಿಂದ ಅಣ್ಣಾ ಹಜಾರೆ ಚಳವಳಿ ಹಾದಿ ತಪ್ಪುತ್ತಿದೆ ಎಂಬ ಸಲಹೆಗಳನ್ನು ತಳ್ಳಿ ಹಾಕಿದ ಅವರು ಇವೆರಡೂ ಪ್ರತ್ಯೇಕ ವಿಷಯಗಳಾಗಿವೆ ಎಂದರು.ಜನಲೋಕಪಾಲ್ ಮಸೂದೆ ರೂಪಿಸಿದರೆ ಕ್ಯಾಬಿನೆಟ್ ಸಚಿವರು ತನಿಖೆಗೊಳಗಾಗಿ ಅವರ ಉಳಿವಿಗೆ ಭೀತಿಯಿರುವ ಕಾರಣ ಸರಕಾರ ಮಸೂದೆಯನ್ನು ವಿರೋಧಿಸುತ್ತಿದೆ. ನಾವೇ ಸಚಿವರ ವಿರುದ್ಧ ಪುರಾವೆಗಳನ್ನು ಸೃಷ್ಟಿಸಿಲ್ಲ. ಅವುಗಳು ಸಿಎಜಿ ಅಂಥ ಶಾಸನಬದ್ಧ ಮಂಡಳಿಗಳಿಂದ ಬೆಳಕಿಗೆ ಬಂದಿವೆ ಎಂದರು.ಕಳೆದ ತಿಂಗಳಲ್ಲಿ ಪುಣೆ ಸಮೀಪ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಜತೆ ಹಜಾರೆ ವಿವಾದಿತ ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸುತ್ತಾ, ಚರ್ಚೆಗಾಗಿ ಅಣ್ಣಾ ಅವರನ್ನು ಭೇಟಿಯಾಗಲು ಖುರ್ಷಿದ್ ಅವರೇ ಬಂದಿದ್ದರು ಎಂದರು.ಈ ಸಭೆ ಕುರಿತಾಗಿ ಟೀಂ ಅಣ್ಣಾ ಸದಸ್ಯರಿಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಕೇಳಿದಾಗ ಅಣ್ಣಾ 'ಉಪಯುಕ್ತ ನಾಯಕ'ಅಲ್ಲ ಎಂದರು. ಅಣ್ಣಾ ಚಳವಳಿ ರಾಜಕೀಯೇತರವಾಗಿದೆ. ತಂಡದ ಸದಸ್ಯರು ಅಧಿಕಾರಕ್ಕಾಗಿ ಆಸೆಪಡುತ್ತಿಲ್ಲ ಎಂದೂ ಹೇಳಿದರು.ಸಂಸತ್ತು ಸದಸ್ಯನಾಗಲು ಕೇವಲ ಒಂದು ಮತ ಹಾಕುವುದಕ್ಕಿಂತ ಭ್ರಷ್ಟಾಚಾರದ ವಿರುದ್ಧ ಜನಸಮುದಾಯದಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರ ಮಟ್ಟದಲ್ಲಿ ಚಳವಳಿ ನಡೆಸುತ್ತಿದೆ. ಜಂತರ್ ಮಂತರ್‌ನಲ್ಲಿ ಸಾಕಷ್ಟು ಜನದಟ್ಟನೆಯಿದೆ. ಜಂತರ್ ಮಂತರ್ ರಾಮ್‌ಲೀಲಾ ಮೈದಾನವಲ್ಲಿ. ಅಲ್ಲಿ ಖುದ್ದಾಗಿ ಉಪಸ್ಥಿತಿ ಇಲ್ಲದವರ ಹೃದಯ ಅಣ್ಣಾ ಅವರ ಚಳವಳಿಯೊಂದಿಗಿದೆ ಎಂದು ಹೇಳಿದರು.ದಿಲ್ಲಿಯಲ್ಲಿ ಚಳವಳಿ ನಡೆಯುವಾಗ ಪುಣೆಗೆ ಯಾಕೆ ಬಂದಿದ್ದೀರಿ ಎಂದು ಕೇಳಿದಾಗ ನಗರದಲ್ಲಿ ಪೂರ್ವ ನಿಗದಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿರುವೆ ಎಂದು ಉತ್ತರಿಸಿದರು.