ಲಂಡನ್ : ಮಲೇಶ್ಯದ ಶೂಟರ್ ನುರ್ ಸುರ್ಯಾನಿ ಮೊಹ್ ತೈಬಿ ಹುಟ್ಟದಿರುವ ಮಗುವಿನ ಸ್ಫೂರ್ತಿಯಲ್ಲಿ ಶನಿವಾರ 10 ಮೀ. ಏರ್ ರೈಫಲ್ ಶೂಟಿಂಗ್ ಸ್ಪರ್ಧೆಗಿಳಿಯಲಿದ್ದಾರೆ.'ನಾನು ಪದಕ ಜಯಿಸಿದ್ದೇ ಆದರೆ ಅದು ನಿನ್ನದೇ. ಏಕೆಂದರೆ, ನನ್ನ ಈ ಸಾಧನೆಗೆ ನೀನು ನೀಡಿದ ನೆರವು ಅಪಾರ. ನೀನು ನನಗೆ ಹೆಚ್ಚಿನ ತಾಕತ್ತು, ಹೆಚ್ಚಿನ ಸ್ಥಿರತೆ ಹಾಗೂ ಹೆಚ್ಚಿನ ವಿಶ್ವಾಸ ತುಂಬಿದ್ದಿ...' ಎಂದು 8 ತಿಂಗಳ ಗರ್ಭಿಣಿ ಸುರ್ಯಾನಿ ತನ್ನ ಹೊಟ್ಟೆಯನ್ನು ಸವರುತ್ತ ಹೇಳಿದ್ದಾರೆ.ನಾನು ರೈಫಲ್ ಹಿಡಿದು ಸ್ಪರ್ಧೆಗೆ ಅಣಿಯಾಗಿರುವಾಗ ದಯವಿಟ್ಟು ನೀನು ಹೊಟ್ಟೆಗೆ ತುಳಿಯುವುದನ್ನು ನಿಲ್ಲಿಸು 29ರ ಹರೆಯದ ಸುರ್ಯಾನಿ ಮಗುವಿನಲ್ಲಿ ಕೇಳಿಕೊಂಡಿದ್ದಾರಂತೆ!'ಮಗು ಹೊಟ್ಟೆಯೊಳಗೆ ತುಳಿದಾಗ ನಾನು ಉಸಿರೆಳೆದುಕೊಳ್ಳುತ್ತ ಸಮಾಧಾನಚಿತ್ತ ಕಾಯ್ದುಕೊಳ್ಳಲು ಪ್ರಯತ್ನಿಸುತ್ತೇನೆ ಮತ್ತು ಮಗುವಿನಲ್ಲಿ, ಮಮ್ಮಿಗೆ ಸಹಾಯ ಮಾಡು ಎಂದು ಕೇಳಿಕೊಳ್ಳುತ್ತೇನೆ' ಎಂದರು.