Tuesday, May 21, 2013
Last Updated: 5:47:11 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪಕ್ಷ ತ್ಯಾಗ?
    • ಬಿಎಸ್‌ವೈ ಧಮಕಿ
    • ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ತನ್ನ ರಾಜಕೀಯ ದಾಳ ಉರು ಳಿಸಲು ಸಜ್ಜಾಗಿದ್ದಾರೆ.

      • Udayavani | Jul 27, 2012

        ವಿಧಾನ ಮಂಡಲ ಅಧಿವೇಶನ ಮುಗಿದ ಅನಂತರ ಹೋರಾಟ ಬಲಪಡಿಸಲು ನಿರ್ಧಾರ.

        ಸದಾನಂದ ಗೌಡರಿಗೆ ಪಟ್ಟ ಸಿಗದಂತೆ ತಡೆಯುವುದು ಮೊದಲ ಆದ್ಯತೆ.

        ಬೆಂಬಲಿಗರ ಮೂಲಕ ಒತ್ತಡ ಆರಂಭ.

        ಈ ಬಾರಿ ವರಿಷ್ಠರು ಬಗ್ಗುವುದು ಅನುಮಾನ.

        ಬೆಂಗಳೂರು : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ತನ್ನ ರಾಜಕೀಯ ದಾಳ ಉರು ಳಿಸಲು ಸಜ್ಜಾಗಿದ್ದಾರೆ.

        ಜಗದೀಶ್‌ ಶೆಟ್ಟರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ತನಗೆ ಅಂಟಿಕೊಂಡಿದ್ದ ಸಮುದಾಯದ "ಕಳಂಕ' ನಿವಾರಿಸಿದ ಯಡಿಯೂರಪ್ಪ ಇದೀಗ ತನ್ನ ಸ್ಥಾನಮಾನಕ್ಕಾಗಿ ಮತ್ತೂಂದು ಸುತ್ತಿನ ಹೋರಾಟ ನಡೆ ಸುವ ಉಮೇದಿನಲ್ಲಿದ್ದಾರೆ.

        ಅಂತಿಮವಾಗಿ ಇದೇ ವಿಷಯ ಮುಂದಿಟ್ಟು ಪಕ್ಷ ತ್ಯಜಿಸುವ ಸಾಧ್ಯತೆ ಬಗ್ಗೆಯೂ ಯಡಿಯೂರಪ್ಪ ಮತ್ತವರ ಆಪ್ತರು ಗಂಭೀರ ಚಿಂತನೆ ನಡೆಸಿದ್ದಾರೆ. ಪ್ರಸಕ್ತ ವಿಧಾನಮಂಡಲ ಅಧಿವೇಶನ ಮುಗಿದ ಅನಂತರ ತನ್ನ ಬೆಂಬಲಿಗ ರೊಂದಿಗೆ ಸಮಾಲೋಚನೆ ನಡೆಸಿ ಈ ದಿಕ್ಕಿನಲ್ಲಿ ಪ್ರಯತ್ನ ನಡೆಸಲಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಹಂತ ಹಂತವಾಗಿ ನಡೆಯುವ ಸಂಭವವಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

        ಸಿಬಿಐ ತನಿಖೆಯ ತೀವ್ರತೆಯಿಂದ ತಪ್ಪಿಸಿಕೊಳ್ಳಲು ಪರೋಕ್ಷವಾಗಿ ಕಾಂಗ್ರೆಸ್‌ ಬಗ್ಗೆ ಮೃದು ಧೋರಣೆ ತಳೆದಿರುವ ಯಡಿಯೂರಪ್ಪ ತುಂಬಾ ದೂರದ ಲೆಕ್ಕಾಚಾರ ಹಾಕಿಕೊಂಡೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕಾಂಗ್ರೆಸಿನ ರಾಷ್ಟ್ರೀಯ ನಾಯಕರ ಜತೆ ತೆರೆಮರೆಯಲ್ಲಿ ತೀವ್ರ ಪ್ರಯತ್ನಗಳೂ ನಡೆದಿವೆ ಎನ್ನಲಾಗಿದೆ.

        ಕಾಂಗ್ರೆಸ್‌ ಸೇರುವ ಆಸಕ್ತಿ ಯಡಿ ಯೂರಪ್ಪ ಅವರಿಗೆ ಇಲ್ಲ. ಯಡಿ ಯೂರಪ್ಪ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಒಲವು ಕಾಂಗ್ರೆಸ್‌ ನಾಯಕರಿಗೂ ಇಲ್ಲ. ಆದರೆ, ಬಿಜೆಪಿ ಯನ್ನು ದುರ್ಬಲಗೊಳಿಸಲು ಯಡಿ ಯೂರಪ್ಪ ಆ ಪಕ್ಷದಿಂದ ಹೊರಬರ ಬೇಕು. ಹೊರಬಂದ ಅನಂತರ ಪ್ರತ್ಯೇಕ ಪಕ್ಷ ಸ್ಥಾಪಿಸಿಕೊಂಡು ತಮ್ಮೊಂ ದಿಗೆ ಹೊಂದಾಣಿಕೆ ಮಾಡಿಕೊಳ್ಳಲಿ ಎಂಬ ಆಶಯವನ್ನು ಕಾಂಗ್ರೆಸಿನ ಕೆಲವು ಹಿರಿಯ ನಾಯಕರು ಯಡಿಯೂರಪ್ಪ ಅವರ ಬಳಿ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

        ತಮಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ಸಿಗುವುದು ಸಾಧ್ಯವಿಲ್ಲ ಎಂದು ಖಚಿತವಾದ ಅನಂತರವೇ ಶೆಟ್ಟರ್‌ ಅವರ ಹೆಸರು ಪ್ರಸ್ತಾವಿಸಿದ್ದ ಯಡಿಯೂರಪ್ಪ ಇದೀಗ ತಮಗೆ ರಾಜ್ಯಾಧ್ಯಕ್ಷ ಸ್ಥಾನ ಪಡೆಯಲು ತಮ್ಮ ಬೆಂಬಲಿಗರ ಮೂಲಕ ಒತ್ತಡ ತಂತ್ರ ಆರಂಭಿಸಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರೂ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ವರಿಷ್ಠರ ಎದುರು ಪ್ರಸ್ತಾವ‌ ಇಟ್ಟು ಬಂದಿದ್ದಾರೆ.

        ಹೀಗಾಗಿ ಯಡಿಯೂರಪ್ಪ ಮತ್ತು ಸದಾನಂದಗೌಡರ ಬೆಂಬಲಿಗರು ಈಗಾಗಲೇ ಅಧಿಕೃತವಾಗಿ ತಮ್ಮ ನಾಯಕನಿಗೇ ರಾಜ್ಯಾಧ್ಯಕ್ಷ ಪಟ್ಟ ನೀಡಬೇಕು ಎಂಬ ಬೇಡಿಕೆಯನ್ನು ಬಹಿರಂಗವಾಗಿಯೇ ಮಂಡಿಸಲು ಹೊರಟಿದ್ದಾರೆ. ಅಧಿ ವೇಶನದ ಅನಂತರ ಈ ಇಬ್ಬರೂ ನಾಯಕರ ಬೆಂಬಲಿಗರು ಮತ್ತಷ್ಟು ಬಹಿರಂಗವಾಗಿಯೇ ತಮ್ಮ ಪಟ್ಟನ್ನು ಪ್ರದರ್ಶಿಸುವುದು ನಿಶ್ಚಿತವಾಗಿದೆ.

        ಬುಧವಾರ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಬೇಕು ಎಂದು ಆಗ್ರಹಿಸಿದ್ದರು. ಅದರ ಬೆನ್ನಲ್ಲೇ ಶುಕ್ರವಾರ ಶಾಸಕರಾದ ಬಿ.ಪಿ.ಹರೀಶ್‌ ಹಾಗೂ ಶಿವನಗೌಡ ನಾಯಕ ಅವರು ಇದೇ ಒತ್ತಾಯ ಮುಂದಿಟ್ಟಿದ್ದಾರೆ.

        ಇನ್ನು ಶೆಟ್ಟರ್‌ ಮುಖ್ಯಮಂತ್ರಿಯಾಗುವವರೆಗೆ ಯಡಿಯೂರಪ್ಪ ಅವರೊಂದಿಗೇ ಗುರುತಿಸಿಕೊಂಡಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ, ಮಂತ್ರಿ ಸ್ಥಾನದಿಂದ ವಂಚಿತರಾದ ನಂತರ ತಮ್ಮ ನಿಷ್ಠೆ ಬದಲಿಸಿ ಸದಾನಂದಗೌಡರ ಪಾಳೆಯಕ್ಕೆ ಜಿಗಿದಿದ್ದಾರೆ. ಸದಾನಂದಗೌಡರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂದು ಬೇಳೂರು ಕೂಡ ಶುಕ್ರವಾರ ಒತ್ತಾಯಪಡಿಸಿದ್ದಾರೆ.

        ಬಿಎಸ್‌ವೈ ಬಣದತ್ತ "ಅಡ್ಡ' ಶಂಕೆ

        ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪಿ.ಎ.ಸಂಗ್ಮಾ ಅವರನ್ನು ಬಿಟ್ಟು ಯುಪಿಎ ಅಭ್ಯರ್ಥಿಯಾಗಿದ್ದ ಪ್ರಣವ್‌ ಮುಖರ್ಜಿಗೆ ಅಡ್ಡಮತದಾನ ಚಲಾಯಿಸಿದ ಬಿಜೆಪಿ ಶಾಸಕರು ಯಾರು ಎಂಬುದರ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ಇನ್ನೂ ನಡೆಯುತ್ತಲೇ ಇದೆ.

        ಪ್ರಣವ್‌ ಮುಖರ್ಜಿ ಬಗ್ಗೆ ಆರಂಭದಿಂದಲೂ ಮೃದು ಧೋರಣೆ ತಳೆದಿದ್ದ ಯಡಿಯೂರಪ್ಪ ಅವರು ವಿಧಾನಸಭೆ ಯಲ್ಲೂ  ಪ್ರಣವ್‌ ಪರ ಹಾಗೂ ಸಂಗ್ಮಾ ವಿರುದ್ಧ ಆಡಿದ ಮಾತುಗಳ ಅನಂತರ ಅಡ್ಡಮತದಾನದ ಶಂಕೆ ಅವರತ್ತಲೇ ಬಲವಾಗಿ ನೆಟ್ಟಿದೆ.

        ಕಾಂಗ್ರೆಸ್‌ ವರಿಷ್ಠರೊಂದಿಗಿನ ಒಳಒಪ್ಪಂದದ ಫ‌ಲವಾಗಿಯೇ ಯಡಿಯೂರಪ್ಪ ಮತ್ತವರ ತೀರಾ ನಂಬಿಗಸ್ತ ಶಾಸಕರು ಅಡ್ಡಮತದಾನ ಮೂಲಕ ಪ್ರಣವ್‌ಗೆ ಸಹಾಯ ಮಾಡಿರಬಹುದು ಎಂಬ ಅನುಮಾನ ಬಿಜೆಪಿ ನಾಯಕರಲ್ಲಿ ಮೂಡಿದೆ. ಆದರೆ, ಇದನ್ನು ಯಾರೊಬ್ಬರೂ ಬಹಿರಂಗವಾಗಿ ವ್ಯಕ್ತಪಡಿಸುವ ಧೈರ್ಯ ತೋರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಅಡ್ಡಮತದಾನದ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸುವುದಾಗಿ ಹೇಳಿದ್ದ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿರುವುದು ಈ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ.

        ಬಿಎಸ್‌ವೈಗೆ ಅಧ್ಯಕ್ಷ ಪಟ್ಟ; ವರಿಷ್ಠರ ಒಲವಿಲ್ಲ

        ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಜಗದೀಶ್‌ ಶೆಟ್ಟರ್‌ ಅವರನ್ನು ಮುಖ್ಯಮಂತ್ರಿ ಮಾಡಿದ ಅನಂತರ ಅದೇ ಸಮುದಾಯಕ್ಕೆ ಸೇರಿದ ಮತ್ತೂಬ್ಬರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್‌ ತಯಾರಿಲ್ಲ.

        ಆದರೆ, ತಮ್ಮನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿ ನೋಡಬಾರದು. ಜಾತಿಯನ್ನೂ ಮೀರಿದ ನಾಯಕನನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಬಿಎಸ್‌ವೈ ಈಗಾಗಲೇ ಬಿಜೆಪಿ ವರಿಷ್ಠರಿಗೆ ತಲುಪಿಸಿದ್ದಾರೆ.

        ಈ ನಡುವೆ ಸದಾನಂದಗೌಡರು ಕರಾವಳಿ ಭಾಗದಲ್ಲಿನ ಪಕ್ಷ ಸಂಘಟನೆಯ ಅಗತ್ಯವನ್ನು ಗಮನದಲ್ಲಿ ಇಟ್ಟುಕೊಂಡು ತಮಗೇ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂಬ ವಾದವನ್ನೂ ವರಿಷ್ಠರ ಬಳಿ ಮಂಡಿಸಿ ಬಂದಿದ್ದಾರೆ. ಒಟ್ಟಾರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಎಸ್‌ವೈ ಮತ್ತು ಗೌಡರ ನಡುವಿನ ಹೋರಾಟದಲ್ಲಿ ಮತ್ತೂಬ್ಬರು ಹೊರಹೊಮ್ಮುವ ಸಾಧ್ಯತೆಯೇ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಯಡಿಯೂರಪ್ಪ ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡದಿದ್ದರೆ ಅಂತಿಮ ಹಂತದಲ್ಲಿ ತಮಗೆ ಆಪ್ತರಾಗಿರುವ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರನ್ನು ಪ್ರಸ್ತಾವಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus