ಡಾ| ಶಿವಾನಂದ ಪೈ,ನರರೋಗ ತಜ್ಞರು, ನರರೋಗಗಳ ಚಿಕಿತ್ಸಾ ವಿಭಾಗ. | Jul 29, 2012
ಗಿಲ್ಲೈನ್ ಬಾರ್ ಸಿಂಡ್ರೋಮ್ ಎಂದರೇನು?
(GBS)ಗಿಲ್ಲೈನ್ ಬಾರ್ ಸಿಂಡ್ರೋಮ್ ಎಂಬುದು ನರವ್ಯೂಹಕ್ಕೆ ಸಂಬಂಧಿಸಿದ ಕಾಯಿಲೆ. ಈ ಕಾಯಿಲೆಯಿಂದಾಗಿ ನರಗಳಲ್ಲಿ ನಿಶ್ಶಕ್ತಿ, ಅನೈಚ್ಛಿಕ ಪ್ರತಿಕ್ರಿಯೆಯ ನ್ಯೂನತೆ, ಕೈ - ಕಾಲು, ಪಾದ, ಮುಖ ಹಾಗೂ ದೇಹದ ಇನ್ನಿತರ ಅಂಗಗಳು ಜಡವಾಗುವುದು ಅಥವಾ ಅಲ್ಲಿ ಇರುವೆ ಹರಿದಾಡಿದಂತೆ ಅನ್ನಿಸುವುದು... ಇತ್ಯಾದಿ ಲಕ್ಷಣಗಳು ಕಂಡು ಬರುತ್ತವೆ.
ಗಿಲ್ಲೈನ್ ಬಾರ್ ಸಿಂಡ್ರೋಮ್ ಕಾರಣದಿಂದಾಗಿ ಪಾರ್ಶ್ವವಾತ ಅಥವಾ ಲಕ್ವಾ ಉಂಟಾಗಿ, ವ್ಯಕ್ತಿಯು ಮರಣ ಹೊಂದಲೂ ಬಹುದು. ಆದರೆ ಈ ಕಾಯಿಲೆ ಇರುವ ಕೆಲವರು ಚಿಕಿತ್ಸೆಯ ಮೂಲಕ ಮತ್ತೆ ಮೊದಲಿನಂತಾಗುವ ಸಾಧ್ಯತೆಗಳೂ ಇವೆ.
ಗಿಲ್ಲೈನ್ ಬಾರ್ ಸಿಂಡ್ರೋಮ್ ಉಂಟಾಗಲು ಕಾರಣಗಳೇನು ?
ಈ ಕಾಯಿಲೆ ಉಂಟಾಗಲು ನಿಖರ ಕಾರಣವೇನು ಎಂಬುದು ತಜ್ಞರಿಗೆ ಇನ್ನಷ್ಟೇ ತಿಳಿಯಬೇಕಿದೆ. ದೇಹದ ಪ್ರತಿರೋಧಕ ವ್ಯವಸ್ಥೆಯು ಸ್ವತಃ ತನ್ನದೇ ನರವ್ಯೂಹದ ಮೇಲೆ ದಾಳಿ ಮಾಡುವುದರಿಂದಾಗಿ ಈ ಕಾಯಿಲೆ ಬರುತ್ತದೆ ಎಂಬುದು ಇವರ ಅನಿಸಿಕೆ. ಇದನ್ನು ಅನೈಚ್ಛಿಕ ಪ್ರತಿರೋಧಕ ಕಾಯಿಲೆ (ಅಟೋ ಇಮ್ಯೂನ್ ಡಿಸೀಸ್) ಎಂದೂ ಸಹ ಕರೆಯುತ್ತಾರೆ. ಈ ಗಿಲ್ಲೈನ್ ಬಾರ್ ಸಿಂಡ್ರೋಮ್ ಕಾಯಿಲೆಯಲ್ಲಿ ದೇಹದ ಪ್ರತಿರೋಧಕ ವ್ಯವಸ್ಥೆಯು ಕೆಲವು ನರಗಳ ಮೇಲಿರುವ ಪೊರೆಗೆ ಹಾನಿ ಉಂಟು ಮಾಡುತ್ತದೆೆ. ಈ ಕಾರಣದಿಂದಾಗಿ ನರಗಳಿಗೆ ಹಾನಿ ಉಂಟಾಗುತ್ತದೆ.
ಗಿಲ್ಲೈನ್ ಬಾರ್ ಸಿಂಡ್ರೋಮ್‌ನ ಕೆರಳುವಿಕೆಗೆ ಕಾರಣವಾಗುವಂತಹ ಸೋಂಕುಗಳು:
ಸಾಮಾನ್ಯವಾಗಿ ನಿಮಗೆ ವೈರಲ್ ಅಥವಾ ಬ್ಯಾಕ್ಟೀರಿಯಲ್ ಸೋಂಕು ತಗಲಿದ ನಂತರ, ನರಗಳಿಗೆ ಹಾನಿ ಉಂಟಾಗುತ್ತದೆ. ಹೆಚ್ಚಾಗಿ ಶ್ವಾಸಕೋಶ, ಹೊಟ್ಟೆ ಹಾಗೂ ಕರುಳಿನ ಸೋಂಕು ಕಾಣಿಸಿಕೊಂಡ ಬಳಿಕ ಈ ಕಾಯಿಲೆ ಕೆರಳುವ ಸಾಧ್ಯತೆಗಳು ಹೆಚ್ಚು.
ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ =ಇದು ಒಂದು ರೀತಿಯ ಆಹಾರದ ಕಲುಷಿತತೆಗೆ ಕಾರಣವಾಗಿರುವ ರೋಗಾಣು.
ಮೈಕೋಪ್ಲಾಸ್ಮಾ , ಇದು ನ್ಯುಮೋನಿಯಾ ಉಂಟು ಮಾಡುವಂತಹ ರೋಗಾಣು.
ಸೈಟೋಮೆಗಲೋ ವೈರಸ್ ಇದು ಚಳಿ, ಜ್ವರ, ಗಂಟಲು ನೋವು, ದುಗ್ಧ ಗ್ರಂಥಿಗಳ ಬಾವು, ವಾಕರಿಕೆ ಹಾಗೂ ಶರೀರದ ನೋವನ್ನು ಉಂಟು ಮಾಡುವಂತಹ ರೋಗಾಣು.
ಎಪಸ್ಟೀನ್ ವೈರಸ್ ಇದು ಮೊನೋ ನ್ಯುಕ್ಲಿಯೋಸಿಸ್ ಉಂಟು ಮಾಡುತ್ತದೆ.
ವೆರಿಸೆಲ್ಲಾ ಝೋಸ್ಟರ್‌ಎಂಬ ವೈರಸ್ ಸಿಡುಬು ಅಥವಾ ಸರ್ಪಸುತ್ತು ಕಾಯಿಲೆಯನ್ನು ಉಂಟು ಮಾಡುತ್ತದೆ.
ಲಕ್ಷಣಗಳು ಯಾವುವು ?
ಗಿಲ್ಲೈನ್ ಬಾರ್ ಸಿಂಡ್ರೋಮ್‌ನ ಲಕ್ಷಣಗಳು ಅಂದರೆ,
ಕೈ-ಕಾಲುಗಳು ಜಡವಾಗುವುದು ಅಥವಾ ಇರುವೆ ಹರಿದಾಡಿದಂತಾಗುವುದು, ಕೆಲವು ಸಲ ಬಾಯಿ ಹಾಗೂ ತುಟಿಯ ಸುತ್ತಲೂ ಇದೇ ರೀತಿ ಆಗುವುದು.
ಕೈ-ಕಾಲು ಹಾಗೂ ಮುಖದ ಬದಿಗಳಲ್ಲಿ ಸ್ನಾಯು ದುರ್ಬಲಗೊಳ್ಳುವುದು.
ಮಾತನಾಡಲು, ಜಗಿಯಲು ಹಾಗೂ ಆಹಾರ ನುಂಗಲು ಕಷ್ಟವಾಗುವುದು.
ಕಣ್ಣುಗಳನ್ನು ಅತ್ತಿತ್ತ ಚಲಾಯಿಸಲು ಅಸಾಧ್ಯವಾಗುವುದು.
ಬೆನ್ನುನೋವು, ಸಾಮಾನ್ಯವಾಗಿ ಕೈ-ಕಾಲಿನ ಬೆರಳುಗಳು ಮರಗಟ್ಟುವುದು ಅಥವಾ ಜಡವಾಗುವುದು, ಇರುವೆ ಹರಿದಾಡುವಂತಾಗುವುದು... ಇತ್ಯಾದಿ ಲಕ್ಷಣಗಳೊಂದಿಗೆ ಈ ಕಾಯಿಲೆಯು ಕಾಣಿಸಿಕೊಳ್ಳುತ್ತದೆ. ಕೆಲವು ದಿನಗಳಾದ ಬಳಿಕ, ಕೈ-ಕಾಲುಗಳಲ್ಲಿ ಸ್ನಾಯು ದುರ್ಬಲತೆ ಕಾಣಿಸಿಕೊಳ್ಳುತ್ತದೆ. ನಾಲ್ಕಾರು ವಾರಗಳಾದ ಬಳಿಕ, ಕೆಲವು ಜನರಿಗೆ ಇದು ಸರಿ ಹೋಗಬಹುದು. ಈ ಲಕ್ಷಣಗಳಿದ್ದಾಗ ಮೊದಲ ಕೆಲವು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಒಳ್ಳೆಯದು. ಯಾಕೆಂದರೆ, ಉಸಿರಾಟ, ಹೃದಯಬಡಿತ ಹಾಗೂ ರಕ್ತಪರಿಚಲನೆಯನ್ನು ನಿಯಂತ್ರಿಸುವ ಸ್ನಾಯುಗಳಿಗೆ ನಿಶ್ಶಕ್ತಿಯು ಹರಡಿದರೆ, ಕಾಯಿಲೆಯಿಂದ ಮರಣ ಉಂಟಾಗುವ ಸಾಧ್ಯತೆಗಳೇ ಹೆಚ್ಚು. ನಿಮಗೆ ಗಿಲ್ಲೈನ್ ಬಾರ್ ಸಿಂಡ್ರೋಮ್ ಕಾಯಿಲೆ ಇರಬಹುದು ಎಂಬ ಅನುಮಾನಗಳಿದ್ದಾಗ, ನಿಮ್ಮ ವೈದ್ಯರಿಗೆ ಕರೆ ಮಾಡಿ ಅಥವಾ ಅವರ ಸಹಾಯವನ್ನು ಪಡೆಯಿರಿ.
ಗಿಲ್ಲೈನ್ ಬಾರ್ ಸಿಂಡ್ರೋಮ್‌ನ ತಪಾಸಣೆ ಹೇಗೆ ?
ನಿಮ್ಮಲ್ಲಿನ ಲಕ್ಷಣಗಳ ಆರಂಭ, ಬೆಳವಣಿಗೆ ಹಾಗೂ ಬದಲಾವಣೆಗಳ ಬಗ್ಗೆ ವೈದ್ಯರು ವಿವರಗಳನ್ನು ಪಡೆಯುತ್ತಾರೆ. ನಿಮಗೆ ಇತ್ತೀಚೆಗೆ ಯಾವುದೇ ರೀತಿಯ ಸೋಂಕುಗಳಾಗಿದ್ದವೇ ಎಂಬ ವಿವರವನ್ನೂ ಸಹ ವೈದ್ಯರು ಪಡೆಯುತ್ತಾರೆ. ನಿಮಗೆ ಗಿಲ್ಲೆ$çನ್ ಬಾರ್ ಸಿಂಡ್ರೋಮ್ ಇದೆ ಎಂಬುದನ್ನು ನಿರ್ಧರಿಸಲು ಎರಡು ಪ್ರಮುಖ ಲಕ್ಷಣಗಳು ವೈದ್ಯರಿಗೆ ಸಹಾಯ ಮಾಡುತ್ತವೆ.
ನಿಮ್ಮ ಕೈ-ಕಾಲುಗಳು ದುರ್ಬಲಗೊಳ್ಳುವಿಕೆ
ದೇಹದ ಅನೈಚ್ಛಿಕ ಚಲನೆಯ ನಿಯಂತ್ರಣದ ವೈಫಲ್ಯ.
ನಿಮ್ಮ ವೈದ್ಯರು ಲಂಬಾರ್ ಪಂಕ್ಚರ್ ಹಾಗೂ ನರ್ವ್ ಕಂಡಕ್ಷನ್ ಸ್ಟಡಿ ಇತ್ಯಾದಿ ಪರೀಕ್ಷೆಗಳನ್ನೂ ಸಹ ಮಾಡಬಹುದು.ತಪಾಸಣೆಯಿಂದ ಗಿಲ್ಲೆ$çನ್ ಬಾರ್ ಸಿಂಡ್ರೋಮ್ ಕಾಯಿಲೆಯ ಇರುವಿಕೆಯು ನಿಖರವಾಗಿ ಗೊತ್ತಾಗದಿದ್ದರೆ, ಆಗ ವೈದ್ಯರು ನರತಜ್ಞರ ಬಳಿಗೆ ಹೆಚ್ಚಿನ ತಪಾಸಣೆಗಾಗಿ ಕಳುಹಿಸಬಹುದು.
ಇದರ ಚಿಕಿತ್ಸೆ ಹೇಗೆ ?
ಈ ಕಾಯಿಲೆಗೆ ಸಾಮಾನ್ಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಾರೆ. ರೋಗಿಯ ಕಾಯಿಲೆ ಹೆಚ್ಚಾಗದಂತೆ, ಹಾಗೂ ಇತರ ಸೋಂಕುಗಳಾಗದಂತೆ ಆಸ್ಪತ್ರೆಯ ವೈದ್ಯರು ರೋಗಿಯ ಕಾಳಜಿ ವಹಿಸುತ್ತಾರೆ. ರೋಗಿಯ ಉಸಿರಾಟ, ಹೃದಯದ ಬಡಿತ ಹಾಗೂ ರಕ್ತ ಪರಿಚಲನೆಯು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. ಕೆಲವು ಜನರಿಗೆ ಉಸಿರಾಟದ ಆವಶ್ಯಕತೆಗಾಗಿ ವೆಂಟಿಲೇಟರ್ ಅನಿವಾರ್ಯವಾಗಬಹುದು.ಆಸ್ಪತ್ರೆಯಲ್ಲಿ ಪ್ಲಾಸ್ಮಾ ಎಕ್ಸ್‌ಚೇಂಜ್ ಅಥವಾ ಇಂಜೆಕ್ಷನ್ ಮೂಲಕ ಇಂಟ್ರಾವೀನಸ್ ಇಮ್ಯೂನ್ ಗ್ಲೋಬ್ಯುಲಿನ್ ಕೊಡುತ್ತಾರೆ.
ಪ್ಲಾಸ್ಮಾ ಎಕ್ಸ್ ಚೇಂಜ್ ಅಂದರೆ, ರೋಗಿಯ ದೇಹದ ರಕ್ತವನ್ನು ಹೊರತೆಗೆದು, ಅದರಲ್ಲಿರುವ ಹಾನಿಕಾರಕ ಪ್ರತಿಕಾಯಗಳನ್ನು ತೆಗೆದು ಹಾಕಿ, ಮತ್ತೆ ರಕ್ತವನ್ನು ದೇಹಕ್ಕೆ ಪೂರೈಸುವುದು.
ಮೂಲಕ ದೇಹಕ್ಕೆ ಅನುಕೂಲಕರವಾದ ಪ್ರತಿಕಾಯಗಳನ್ನು ರೋಗಿಯ ದೇಹದ ರಕ್ತಕ್ಕೆ ಸೇರಿಸುತ್ತಾರೆ.ಗಿಲ್ಲೆ$çನ್ ಬಾರ್ ಸಿಂಡ್ರೋಮ್ ಕಾಣಿಸಿಕೊಂಡ ಮೊದಲನೆಯ ಸಲವೇ ಈ ಚಿಕಿತ್ಸೆಗಳನ್ನು ತೆಗೆದುಕೊಳ್ಳುವುದರಿಂದ, ರೋಗದ ವಿರುದ್ಧ ಹೋರಾಡಲು ಹಾಗೂ ಕ್ಷಿಪ್ರ ಚೇತರಿಕೆಗೆ ದೇಹಕ್ಕೆ ಸಹಾಯವಾಗುತ್ತದೆ. ರೋಗಿಯು ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಸಮಯ ಅಥವಾ ಕಾಯಿಲೆಯ ಲಕ್ಷಣಗಳು ಮರೆಯಾಗುವವರೆಗೆ ಆಸ್ಪತ್ರೆಯಲ್ಲಿ ನಿಲ್ಲಬಹುದು.ಕೆಲವು ಸಲ ಗಿಲ್ಲೆ$çನ್ ಬಾರ್ ಸಿಂಡ್ರೋಮ್ ಮತ್ತೆ ಮರುಕಳಿಸುವುದಿದೆ. ಮರುಕಳಿಕೆಯ ತೀವ್ರತೆಯನ್ನು ಕಡಿಮೆಗೊಳಿಸಲು ಹಾಗೂ ಮತ್ತೆ ಮರುಕಳಿಸದಂತೆ ರಕ್ಷಣೆ ಪಡೆಯಲು ಪ್ಲಾಸ್ಮಾ ಎಕ್ಸ್ ಚೇಂಜ್ ಹಾಗೂ ಐVಐಎ ಚಿಕಿತ್ಸೆ ಇವೆರಡನ್ನೂ ಪಡೆಯುವುದು ಅತ್ಯವಶ್ಯಕ.
ಕಾಯಿಲೆಯಿಂದ ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ?
ಗಿಲ್ಲೈನ್ ಬಾರ್ ಸಿಂಡ್ರೋಮ್‌ನಿಂದ ಚೇತರಿಸಿಕೊಳ್ಳಲು ರೋಗಿಗೆ 3 ರಿಂದ 6 ವಾರ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಹಿಡಿಯಬಹುದು. ನಿಮ್ಮ ಮಾಮೂಲಿ ಚಟುವಟಿಕೆಗಳನ್ನು ಮತ್ತೆ ಆರಂಭಿಸಲು ನೀವು ಮತ್ತೆ ಕೆಲವು ತಿಂಗಳುಗಳ ಕಾಲ ಕಾಯಬೇಕಾಗಬಹುದು.ಕೆಲವು ಜನರಿಗೆ ಗಿಲ್ಲೈನ್ ಬಾರ್ ಸಿಂಡ್ರೋಮ್‌ನ ದೀರ್ಘಕಾಲಿಕ ಪರಿಣಾಮಗಳು ಬಾಧಿಸಬಹುದು. ಅಂದರೆ, ಕೈ-ಕಾಲಿನ ಬೆರಳುಗಳು ಮರಗಟ್ಟುವುದು... ಇತ್ಯಾದಿ.