ಕಾಪು: ವಿದೇಶದಲ್ಲಿನ ಉದ್ಯೋಗದ ಆಮಿಷ ತೋರಿ ವಿದೇಶಕ್ಕೆ ಕಳುಹಿಸುವುದಾಗಿ ಹೇಳೆ ಹಣ ಪಡೆದು ವಂಚಿಸಿರುವ ಮಂಗಳೂರಿನ ವ್ಯಕ್ತಿಯೋರ್ವರ ವಿರುದ್ಧ ಕಟಪಾಡಿ ಏಣಗುಡ್ಡೆ ಗ್ರಾಮದ ಸಿಪ್ರಿಯಾನ್ ಕೆಸ್ತಲಿನೋ ಕಾಪು ಪೊಲೀಸರುಗೆ ದೂರು ನೀಡಿದ್ದಾರೆ.ಎಲಿಜಾಬೆತ್ ಲೋಬೋ ನಡೆಸುತ್ತಿರುವ ಮಂಗಳೂರಿನ ಸ್ಟಾರ್ ಎಸೋಸಿಯೇಟ್ ಸಂಸ್ಥೆಯು ಜನರಿಗೆ ವಿದೇಶಿ ಉದ್ಯೋಗದ ಆಮಿಷ ತೋರುವ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ಮೂಲಕ ಕಟಪಾಡಿ ಏಣಗುಡ್ಡೆ ಗ್ರಾಮದ ಸಿಪ್ರಿಯಾನ್ ಕೆಸ್ತಲಿನೋ ಉದ್ಯೋಗ ನಿಮಿತ್ತ ವಿದೇಶಕ್ಕೆ ಉದ್ಯೋಗಕ್ಕೆ ತೆರಳುವ ಸಿದ್ಧತೆ ನಡೆಸಿದ್ದರು.ದೂರುದಾರ ಸಿಪ್ರಿಯಾನ್ ಕೆಸ್ತಲಿನೋ ವಿದೇಶಕ್ಕೆ ತೆರಳುವ ಆಸೆಯಿಂದ ಎಲಿಜಾಬೆತ್ ಲೋಬೋ ಅವರಿಗೆ ಮೊದಲು ಮೂವತ್ತೆ$çದು ಸಾವಿರ ರೂ. ನೀಡಿದ್ದರು. ಆ ನಂತರ ಎರಡು ಬಾರಿ ಮತ್ತೆ ತಲಾ ನಲ್ವತ್ತು ಸಾವಿರ ರೂಪಾಯಿ ಹಣವನ್ನು ನೀಡಿದ್ದರು. ಒಟ್ಟು 1.15ಲಕ್ಷ ರೂ. ಹಣವನ್ನು ನೀಡಿದ್ದರೂ ವೀಸಾವನ್ನು ನೀಡದೇ ವಂಚಿಸಿದ್ದಾರೆಂದು ಎಂಟು ವರ್ಷಗಳ ಬಳಿಕ ದೂರು ನೀಡಿದ್ದಾರೆ.ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.