ರಾಜೇಶ್ ಶೆಟ್ಟಿ | Aug 04, 2012
ಸೀನ್ ಒಂದು
ಅಯ್ಯೋ ಅಯ್ಯೋ ಅಯ್ಯೋ ಅನ್ನುತ್ತಾ ಯಾರೋ ಒಬ್ಬ ವೇದಿಕೆಯ ಮಧ್ಯಭಾಗಕ್ಕೆ ಓಡುತ್ತಾ ಬಂದಿದ್ದಾನೆ. ಎಲ್ಲರೂ ಅಚ್ಚರಿಯಿಂದ ನೋಡುತ್ತಿರುವಂತೆಯೇ ವೇದಿಕೆಯ ಎಡಭಾಗದಲ್ಲಿದ್ದ ಉಪಮುಖ್ಯಮಂತ್ರಿ ಆರ್.ಅಶೋಕ್ ಯಾರೋ ನೀನು ಅಂತ ಕೇಳಿದ್ದಾರೆ. ಅವನು ಉತ್ತರ ಹೇಳದೆ ನಾನು ನಾನು ಅಂತ ತಡಬಡಾಯಿಸಿದ್ದಾನೆ. ಅಷ್ಟು ಹೊತ್ತಿಗೆ ಅವನನ್ನು ಹಿಂಬಾಲಿಸಿಕೊಂಡು ಮತ್ತೆ ನಾಲ್ಕು ಜನ ಹುಡುಗರು ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ.ಅವರನ್ನು ನೋಡಿ ಮೊದಲು ಬಂದವ ಓಡಿಹೋಗಿದ್ದಾನೆ. ಉಪಮುಖ್ಯಮಂತ್ರಿ ಅಶೋಕ್ ನೋಡುತ್ತಲೇ ಬಾಕಿಯಾಗಿದ್ದಾರೆ.
ಫ್ಲ್ಯಾಶ್ ಬ್ಯಾಕ್
ಹಾಸ್ಯ ಚಕ್ರವರ್ತಿ ನರಸಿಂಹರಾಜು 89ನೇ ಹುಟ್ಟುಹಬ್ಬ ಸಮಾರಂಭ ಇತ್ತೀಚೆಗೆ ಟೌನ್‌ಹಾಲ್‌ನಲ್ಲಿ ನಡೆದಿತ್ತು. ಆ ಸಮಾರಂಭದಲ್ಲೇ ನರಸಿಂಹರಾಜು ಮೊಮ್ಮಕ್ಕಳ ಸಂಸ್ಥೆ "ಗೋಲ್ಸ್ ಆಯಂಡ್ ಡ್ರೀಮ್ಸ್' ತನ್ನ ಹೊಸ ಸಿನಿಮಾ "ಎವರೆಡಿ ಬಾಯ್ಸ'ನ ಮುಹೂರ್ತ ನಡೆಸುವ ಯೋಜನೆ ಹಾಕಿಕೊಂಡಿತ್ತು. ಮುಹೂರ್ತ ಡಿಫರೆಂಟಾಗಿರಬೇಕು ಅನ್ನೋದು ನಿರ್ದೇಶಕ ಅರವಿಂದ್ ತಲೆಯಲ್ಲಿತ್ತು. ಹಾಗಾಗಿ ನೋ ಕ್ಲಾéಪ್‌ಬೋರ್ಡ್, ನೋ ಕ್ಯಾಮೆರಾ, ನೋ ಪೂಜೆ. ಉಪಮುಖ್ಯಮಂತ್ರಿ ಅಶೋಕ್ ಲೈಟ್ಸ್- ಕ್ಯಾಮೆರಾ- ರೋಲ್- ಆಯಕ್ಷನ್ ಅಂದಿದ್ದೇ ತಡ ಸೀನ್ ಒಂದು ಆರಂಭವಾಯಿತು.
ಉಪಸಂಹಾರ
ಡಿಜಿಟಲ್ ಯುಗವಾದ್ದರಿಂದ ಡಿಜಿಟಲ್ ಮುಹೂರ್ತ ಎಂದು ಮೊದಲೇ ಹೇಳಿಕೊಂಡಿದ್ದರು ಚಿತ್ರದ ನಿರ್ದೇಶಕ ಅರವಿಂದ್. ಅಂದಹಾಗೆ ಇದು ಯೂಥ್‌ಫುಲ್ ಸ್ಟೋರಿ. ನಾಲ್ಕು ಯುವಕರ ಬದುಕಿನ ಕಥೆ. ಆ ನಾಲ್ವರು ಎವರೆಡಿ ಬಾಯ್ಸ ಹೆಸರು- ಅವಿನಾಶ್, ಪ್ರವೀಣ್, ಆರ್‌ಜೆ ಪ್ರದೀಪ್, ದುಬೈ ದೀಪಕ್. ಇನ್ನುಳಿದಂತೆ ಆಸಿಫ್, ಸಿಹಿಕಹಿ ಚಂದ್ರು, ರವಿಶಂಕರ್ ಮುಂತಾದವರ ನಟನೆ, ಹಂಸಲೇಖ ಸಂಗೀತವಿದೆ.