Thursday, June 20, 2013
Last Updated: 4:57:05 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಟಾಪ್‌ 10ನಲ್ಲಿ ಇರ್ಫಾನ್‌
    • ಇರ್ಫಾನ್‌ ಕೊಲ್ಹೊತ್ತಮ್‌ ತೋಡಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರೂ ಲಂಡನ್‌ ಒಲಿಂಪಿಕ್ಸ್‌ನ 20 ಕಿ.ಮೀ. ನಡಿಗೆ ಸ್ಪರ್ಧೆಯ

      • Udayavani | Aug 05, 2012

        ಲಂಡನ್‌: ಭಾರತದ ಇರ್ಫಾನ್‌ ಕೊಲ್ಹೊತ್ತಮ್‌ ತೋಡಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರೂ ಲಂಡನ್‌ ಒಲಿಂಪಿಕ್ಸ್‌ನ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಪದಕ ಗೆಲ್ಲುವಲ್ಲಿ ವಿಫ‌ಲರಾಗಿದ್ದಾರೆ.

        ಶನಿವಾರ ನಡೆದ ರೇಸ್‌ನಲ್ಲಿ ಇರ್ಫಾನ್‌ ಕೊಲ್ಹೊತ್ತಮ್‌ ತೋಡಿ 1:20.21 ನಿಮಿಷಗಳಲ್ಲಿ ಗುರಿ ಮುಟ್ಟಿ ಅಗ್ರ 10ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಈ ಹಿಂದೆ 1.29.09 ನಿಮಿಷಗಳಲ್ಲಿ ಗುರಿ ಮುಟ್ಟಿದ್ದು ಅವರ ಹಿಂದಿನ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿತ್ತು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮತ್ತೂಬ್ಬ ಸ್ಪರ್ಧಿ ಗುರ್ಮಿತ್‌ ಸಿಂಗ್‌ (1:23.34 ನಿ.) 33ನೇ ಸ್ಥಾನಿಯಾಗಿ ರೇಸ್‌ ಪೂರೈಸಿದರು.

        ಚೀನಾದ ಚೆಂಗ್‌ ಡಿಂಗ್‌ (1:18.46ನಿ.) ಒಲಿಂಪಿಕ್‌ ದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿದರೆ, ಗ್ವಾಟೆಮಾಲದ ಎರಿಕ್‌ ಬೆರಾಂಡೊ (1:18.57ನಿ.) ಮತ್ತು ಚೀನಾದ ಜೆಲಿನ್‌ ಕ್ಲಿ (1:19.44) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಇಂಗ್ಲಂಡ್‌ ತಂಡವು ದಕ್ಷಿಣ ಆಫ್ರಿಕಾವನ್ನು ಏಳು ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಕೂಟದ ಫೈನಲ್‌ ಹಂತಕ್ಕೇರಿತು...
      image image
      • Copyright @ 2009 Udayavani.All rights reserved.
      • Designed & Hosted By 4cplus