Udayavani | Aug 05, 2012
ಮುಂಬಯಿ: ಬಂಟರ ಸಂಘದ ನವಿಮುಂಬಯಿ ಪ್ರಾದೇಶಿಕ ಸಮಿತಿಯ 6ನೇ ವಾರ್ಷಿಕೋತ್ಸವ ಆ.15ರಂದು ನಡೆಯಲಿದೆ.ನವಿಮುಂಬಯಿಯ ಜುಯೀ ನಗರದ ಸೆಕ್ಟರ್ -24ರಲ್ಲಿರುವ ಬಂಟರ್ ಸೆಂಟರ್‌ನ ಶ್ರೀಮತಿ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಸಾಯಂಕಾಲ 4 ಗಂಟೆಗೆ ಸಮಾರಂಭ ಜರಗಲಿದೆ.
ಈ ಸಂದರ್ಭದಲ್ಲಿ ಎಸ್.ಎಸ್.ಸಿ. ಪರೀಕ್ಷೆಯಲ್ಲಿ ಶೇ. 85 ಮತ್ತು ಎಚ್‌ಎಸ್‌ಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ಪರಿಸರದ ವಿದ್ಯಾರ್ಥಿಗಳನ್ನು ಮತ್ತು ರಾಷ್ಟ್ರೀಯ-ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಜಯಗಳಿಸಿದ ಪರಿಸರದ ಕ್ರೀಡಾಳುಗಳನ್ನು ನಗದು ಪುರಸ್ಕಾರ, ಪ್ರಮಾಣಪತ್ರ ನೀಡಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅರ್ಹ ವಿದ್ಯಾರ್ಥಿಗಳು ತಮ್ಮ ತೇರ್ಗಡೆಯ ಶೈಕ್ಷಣಿಕ ಪ್ರಮಾಣಪತ್ರ ಮತ್ತು ಕ್ರೀಡಾಗಳು ಬಹುಮಾನ ಪ್ರಮಾಣಪತ್ರ, ಭಾವಚಿತ್ರ, ಹೆತ್ತವರ ಹೆಸರು ಮತ್ತು ವಿಳಾಸವನ್ನು ಒಳಗೊಂಡ ಅರ್ಜಿಯನ್ನು ಆ.12ರೊಳಗೆ ನವಿಮುಂಬಯಿ ಪ್ರಾದೇಶಿಕ ಸಮಿತಿಗೆ ಸಲ್ಲಿಸಬೇಕಾಗಿದೆ.
ಹೆಚ್ಚಿನ ವಿವರಗಳಿಗಾಗಿ ಹರೀಶ್ ಪಡುಬಿದ್ರಿ -9320129094, ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ-9320129094, ವೀಣಾ ಶೆಟ್ಟಿ -9323214327,ರವೀಶ್ ಶೆಟ್ಟಿ-9870123450 ಇವರನ್ನು ಸಂಪರ್ಕಿಸಬಹುದು ಎಂದು ಸಮಿತಿಯ ಕಾರ್ಯಾಧ್ಯಕ್ಷ ತಾಳಿಪಾಡಿಗುತ್ತು ಭಾಸ್ಕರ ಎಂ.ಶೆಟ್ಟಿ ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.