Udayavani | Aug 05, 2012
ಮುಂಬಯಿ: ಮುಲುಂಡ್ ಬಂಟ್ಸ್ ವತಿಯಿಂದ ಶೈಕ್ಷಣಿಕ ನೆರವು ವಿತರಣಾ ಕಾರ್ಯಕ್ರಮ ರವಿವಾರ ಮುಲುಂಡ್ ಪಶ್ಚಿಮದ ಕಾಳಿದಾಸ ಮ್ಯಾರೇಜ್ ಹಾಲ್‌ನಲ್ಲಿ ನಡೆಯಿತು. ಮುಲುಂಡ್ ಬಂಟ್ಸ್ ಅಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ| ವಸಂತ ಶೆಟ್ಟಿ ಮುಖ್ಯ ಅತಿಥಿ, ಹೊಟೇಲ್ ಉದ್ಯಮಿ ಶಾಂತಾರಾಮ್ ಶೆಟ್ಟಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಸ್ಥಾಪಕಾಧ್ಯಕ್ಷ ಮತ್ತು ಮುಖ್ಯ ಸಲಹೆಗಾರ ನಗ್ರಿಗುತ್ತು ವಿವೇಕ್ ಶೆಟ್ಟಿ, ಉಪಾಧ್ಯಕ್ಷ ಎಸ್.ಬಿ. ಶೆಟ್ಟಿ, ಕಾರ್ಯದರ್ಶಿ ಮನೋಹರ್ ಎಸ್.ಶೆಟ್ಟಿ, ಕೋಶಾಧಿಕಾರಿ ಶಾಂತಾರಾಮ್ ಬಿ.ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್‌ಚಂದ್ರ ಶೆಟ್ಟಿ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಡಾ| ಸತ್ಯಾ ಎಸ್.ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಮನಮೋಹನ್ ಟಿ. ಕೊಂಡೆ ಮತ್ತು ಕೆ.ಸುದರ್ಶನ್ ಹೆಗ್ಗೆ, ಜತೆ ಕೋಶಾಧಿಕಾರಿ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.