Thursday, May 23, 2013
Last Updated: 1:07:09 PM IST
  • ನಾನೆಲ್ಲಿರುವೆ:
  • ಮುಖಪುಟ ಹೊರನಾಡು ಕನ್ನಡಿಗ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಆ. 29: ಡೊಂಬಿವಲಿಯಲ್ಲಿ ಯಕ್ಷಗಾನ ಬಯಲಾಟ
      • Udayavani | Aug 05, 2012

        ಮುಂಬಯಿ: ಕುಂದ ಕನ್ನಡ ಬಳಗ ಮುಂಬಯಿ ಹಾಗೂ ಕುಂದಾಪುರ ಬೋರ್ಡ್‌ ಹೈಸ್ಕೂಲ್‌ ಹಳೆ ವಿದ್ಯಾರ್ಥಿಗಳ ಸಂಘ, ಮುಂಬಯಿ ಇದರ ಜಂಟಿ ಆಶ್ರಯದಲ್ಲಿ ಆ. 29 ರಂದು ಸಂಜೆ 5 ಗಂಟೆಗೆ ಡೊಂಬಿವಲಿ ಪೂರ್ವದ ಠಾಕೂರ್‌ ಸಭಾಗೃಹದಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ಹಾಗೂ ಯಕ್ಷಗಾನ ಬಯಲಾಟವನ್ನು ಹಮ್ಮಿಕೊಳ್ಳಲಾಗಿದೆ.

        ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮೇಳ ಹಾಗೂ ಅತಿಥಿ ಕಲಾವಿದರಿಂದ ದ್ರೌಪದಿ ಪ್ರತಾಪ ಪೌರಣಿಕ ಕನ್ನಡ ಯಕ್ಷಗಾನ ಬಯಲಾಟ ಜರಗಲಿದೆ.

        ಸಂಜೆ 5 ಗಂಟೆಯಿಂದ 6 ಗಂಟೆಯವರೆಗೆ ಭಾಗವತ ಹೇರಂಜಾಲು ಗೋಪಾಲ ಗಾಣಿಗ ಮತ್ತು ತಂಡದವರಿಂದ ಜರಗಲಿರುವ ಪ್ರಾತ್ಯಕ್ಷಿಕೆಯಲ್ಲಿ ಅಬ್ಬರ ಬಿಡ್ತಿಗೆ, ಕೋಡಂಗಿ, ಬಾಲಗೋಪಾಲ, ಪೀಠಿಕಾ, ಸ್ತಿÅàವೇಷ, ಒಡ್ಡೋಲಗ, ಪ್ರಯಾಣ ಕುಣಿತ, ಯುದ್ದ ಕುಣಿತ, ಹಾಸ್ಯಗಾರರ ಕುಣಿತ ಇತ್ಯಾದಿಗಳ ಪ್ರದರ್ಶನ ಜರಗಲಿದೆ. ಸಂಜೆ 7 ಗಂಟೆಯಿಂದ 10 ಗಂಟೆಯವರೆಗೆ ಯಕ್ಷಗಾನ ಬಯಲಾಟ ಜರಗಲಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಹೇರಂಜಾಲು ಗೋಪಾಲ ಗಾಣಿಗ, ಆನಂದ ಅಂಕೋಲಾ, ಸುಧಾಕರ ಕೊಠಾರಿ, ದಿನೇಶ ಶೆಟ್ಟಿ, ಮದ್ದಳೆಯಲ್ಲಿ ಸುನೀಲ್‌ ಭಂಡಾರಿ, ಬಾಲಕೃಷ್ಣ ಗಾಣಿಗ, ಚೆಂಡೆಯಲ್ಲಿ ರಾಕೇಶ್‌ ಮಲ್ಯ ಅವರು ಸಹಕರಿಸಲಿದ್ದಾರೆ. ಸ್ತಿÅà ಪಾತ್ರದಲ್ಲಿ ಶ್ರೀನಿವಾಸ ಭಟ್‌ ನಾಗರಕೂಡಿಗೆ , ಸಂಜೀವ ಶೆಟ್ಟಿ ಹೆನ್ನಾಬೈಲು, ಚಂದ್ರ ಶೆಟ್ಟಿ , ಬಿಜೂರು ಹಾಸ್ಯದಲ್ಲಿ ಕಡಬ ಪೂವಪ್ಪ, ಶೇಖರ ಶೆಟ್ಟಿ ಯಳಬೇರು ಅವರು ಪಾಲ್ಗೊಳ್ಳಲಿದ್ದಾರೆ. ಪಾತ್ರಧಾರಿಗಳಾಗಿ ಆನಂದ ಶೆಟ್ಟಿ ಐರಬೈಲು, ಆರೊYàಡು ಮೋಹನ್‌ದಾಸ್‌ ಶೆಣೈ, ಕೋಟಿ ಸುರೇಶ, ಕೊಳಲಿ ಕೃಷ್ಣ, ಶ್ರೀನಿವಾಸ ದೇವಾಡಿಗ, ಮಂಕಿ ಈಶ್ವರ ನಾಯ್ಕ, ಪ್ರಭಾಕರ ಶೆಟ್ಟಿ ಮಡಾಮಕ್ಕಿ, ನಾಗೇಶ ಬಿಜೂರು, ದಾಮೋದರ ಗೌಡ, ಪ್ರಸನ್ನ ಕುಮಾರ್‌ ಮೊದಲಾದವರು ಕಾಣಿಸಿಕೊಳ್ಳಲಿದ್ದಾರೆ. ಸಂಜೆ 5 ಗಂಟೆಯಿಂದ 6 ಗಂಟೆಯವರೆಗೆ ಹಾಸ್ಯವೇದಿಕೆ ಹಾಗೂ ಪುಸ್ತಕ ಬಿಡುಗಡೆ ವಿಶೇಷ ಕಾರ್ಯಕ್ರಮ ಜರಗಲಿದ್ದು, ಮುಖ್ಯ ಅತಿಥಿಗಳಾಗಿ ಬ್ಯಾಂಕ್‌ ಜನಾರ್ದನ( ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದ) ಹಾಗೂ ಗೌರವ ಅತಿಥಿಯಾಗಿ ಮೂಗು ಸುರೇಶ್‌, ಮೈಸೂರು ರಮಾನಂದ ಬಿರಾದರ್‌, ಡಿಂಗ್ರಿ ನಾಗರಾಜ್‌, ಮಿಮಿಕ್ರಿ ರಾಜಗೋಪಾಲ, ಶಿವಕುಮಾರ ಆರಾಧ್ಯ, ಹೊನ್ನವಳ್ಳಿ ಕೃಷ್ಣ ಮೊದಲಾದ ಚಲನಚಿತ್ರ ಹಾಸ್ಯ ಕಲಾವಿದರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭರತ್‌ ಕುಮಾರ್‌ ಪೋಲಿಪ್‌ ಅವರು ವಹಿಸಲಿದ್ದಾರೆ.

        ಕನ್ನಡ ಪುಸ್ತಕ, ಸಿಡಿ ಮಾರಾಟ ಮಳಿಗೆಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಹೆಚ್ಚಿನ ವಿವರಗಳಿಗೆ ಪ್ರೊ| ವೆಂಕಟೇಶ ಪೈ 9224102053 ಅಥವಾ ಪಂಡಿತ ದಿಕ್ಷೀತ-9594275234 ಇವರನ್ನು ಸಂಪರ್ಕಿಸಬಹುದು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus