Saturday, May 25, 2013
Last Updated: 7:59:17 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮೇರಿಗೆ ಸೂಪರ್‌ ಸಂಡೆ
    • ವನಿತೆಯರ ಬಾಕ್ಸಿಂಗ್‌ನಲ್ಲಿ ಮೇರಿಕೋಮ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಮೂಲಕ ಇತಿಹಾಸ ಬರೆದಿದ್ದಾರೆ.

      • Udayavani | Aug 05, 2012

        ಲಂಡನ್‌ : ಭಾರತದ ಪದಕ ಭರವಸೆ ಮೂಡಿಸಿರುವ ಎಂ.ಸಿ. ಮೇರಿಕೋಮ್‌ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ ವನಿತೆಯರ ಬಾಕ್ಸಿಂಗ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಮೂಲಕ ಇತಿಹಾಸ ಬರೆದಿದ್ದಾರೆ.

        ಎಕ್ಸೆಲ್‌ ಅರೆನಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ವನಿತೆಯರ 51 ಕೆಜಿ ವಿಭಾಗದ ಫ್ಲೈವೇಟ್‌ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಮೇರಿಕೋಮ್‌ ಜಿದ್ದಾಜಿದ್ದಿನ ಹಣಾಹಣಿಯಲ್ಲಿ 19-14 ಅಂಕಗಳಿಂದ 5ನೇ ಶ್ರೇಯಾಂಕಿತೆ ಪೋಲೆಂಡ್‌ನ‌ ಕೆರೊಲಿನಾ ಮೈಕಲ್‌ಚುಕ್‌ ಅವರನ್ನು ಸದೆಬಡಿದರು. ಈ ಮೂಲಕ ಬಹುನಿರೀಕ್ಷಿತ ಪದಕದ ಬೇಟೆಯನ್ನು ಮೇರಿಕೋಮ್‌ ಭರ್ಜರಿಯಾಗಿ ಆರಂಭಿಸಿದರು.


        ಮೇರಿ ಕೋಮ್‌ ಕ್ವಾರ್ಟರ್‌ಫೈನಲ್‌ನಲ್ಲಿ ತುನೇಶಿಯಾದ ಮರೌಲಾ ರಹಾಲಿ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಈ ಪಂದ್ಯದಲ್ಲೂ ಜಯ ಸಾಧಿಸಿದರೆ ಮೇರಿಕೋಮ್‌ಗೆ ಪದಕ ಖಚಿತವಾಗಲಿದೆ.


        ಐದು ಬಾರಿಯ ವಿಶ್ವ ಚಾಂಪಿಯನ್‌ ಮೆಗ್ನಿಫಿಸೆಂಟ್‌ ಮೇರಿ ತಲಾ 2 ನಿಮಿಷಗಳ 4 ಸುತ್ತಿನ ಪಂದ್ಯದಲ್ಲಿ ಪೂರ್ಣ ಪ್ರಾಬಲ್ಯ ಮೆರೆದರು. ಅದ್ಭುತ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದ ಮೇರಿ, ಎದುರಾಳಿಗೆ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ.


        ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಇಳಿದ ಪೋಲೆಂಡ್‌ ಸ್ಪರ್ಧಿ ಮೇರಿ ಅಬ್ಬರದ ಮುಂದೆ ಮಂಕಾಗಿ ಹಂತ ಹಂತವಾಗಿ ರಕ್ಷಣಾ ಆಟಕ್ಕೆ ಇಳಿದರು. 29 ವರ್ಷದ ಮೇರಿಗೆ ಭಾರತದ ಅಭಿಮಾನಿಗಳು ಹಷೊìದ್ಗಾರದ ಸ್ವಾಗತ ಕೋರಿದರು. ಅಭಿಮಾನಿಗಳನ್ನು ನಿರಾಸೆಗೊಳಿಸದ ಮೇರಿ ತನಗಿಂತ 3 ವರ್ಷ ಹಿರಿಯಳಾದ ಹಾಗೂ ಅಮೆಚೂರ್‌ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ ಆದ ಕೆರೊಲಿನಾ ಅವರನ್ನು ಸದೆಬಡಿದರು.

        ಮೊದಲ ಸುತ್ತಿನಲ್ಲಿ 3-3ರಿಂದ ಸಮಬಲ ಸಾಧಿಸಿದ ಮೇರಿ, ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರೂ ಲಯ ತಪ್ಪಿ ನೆಲಕ್ಕೆ ಬಿದ್ದರು. ಆದರೆ ಎರಡನೇ ಸುತ್ತಿನಲ್ಲಿ ಆಕ್ರಮಣವನ್ನು ಚುರುಕುಗೊಳಿಸಿದ ಮೇರಿ (5-4) ಒಂದು ಅಂಕದಿಂದ ಮುನ್ನಡೆ ಪಡೆದರು. ಅಚ್ಚರಿ ಎಂಬಂತೆ ಈ ಬಾರಿಯೂ ನೆಲಕ್ಕೆ ಬಿದ್ದರು. ಆದರೆ ಮೂರನೇ ಸುತ್ತಿನಲ್ಲಿ ಮೇರಿ ಎದುರಾಳಿಯ ಮೇಲೆ ಮುಗಿಬಿದ್ದು 7-3ರಿಂದ ಭಾರೀ ಮುನ್ನಡೆ ಪಡೆದರು. ಅಂತಿಮ ಸುತ್ತಿನಲ್ಲಿ ಎದುರಾಳಿ ಹೋರಾಟ ನಡೆಸಿದರೂ 4-4ರಿಂದ ಸಮಬಲದಲ್ಲಿ ಅಂತ್ಯಗೊಂಡಿದ್ದರಿಂದ ಮೇರಿ ನಿರಾಯಸವಾಗಿ ಗೆಲುವಿನ ಹಾರ ಹಾಕಿಕೊಂಡರು.

        ಪಂದ್ಯದ ನಂತರ ಪ್ರತಿಕ್ರಿಯಿಸಿದ ಮೇರಿ, ಒಲಿಂಪಿಕ್ಸ್‌ನಲ್ಲಿ ಮೊದಲ ಸುತ್ತು ಹಾಗೂ ಅಲ್ಲದೇ ಒಲಿಂಪಿಕ್ಸ್‌ನಲ್ಲಿ ನನ್ನ ಮೊದಲ ಪಂದ್ಯವೂ ಆಗಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದೆ. ಆದರೆ ಪಂದ್ಯ ಸಾಗಿದಂತೆ ಎಲ್ಲವೂ ಸರಿ ಹೋಯಿತು ಎಂದರು.

        ಇಡೀ ದೇಶವೇ ನನ್ನ ಗೆಲುವಿಗೆ ಹಾರೈಸುತ್ತಿದೆ. ದೇಶದ ಎಲ್ಲಾ ಸಮುದಾಯದ ಜನರು ನನ್ನ ಬೆಂಬಲಕ್ಕಿದ್ದಾರೆ. ಅವರಿಗೆ ನಿರಾಸೆಯಾಗದಂತೆ ಮೊದಲ ಪಂದ್ಯ ಗೆದ್ದಿರುವುದು ಸಂತಸ ನೀಡಿದೆ ಎಂದು ಮೇರಿ ಹೇಳಿದರು.

        ಕೆರೊಲಿನ್‌ ಮೈಕಲ್‌ ಚೌಕ್‌

        ಅಂಕ (19-14)

        ಮೇರಿ ಕೆರೊಲಿನ್‌
        1 3 3

        2 5 4

        3 7 3

        4 4 4

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus