Friday, May 24, 2013
Last Updated: 1:47:42 PM IST
  • ನಾನೆಲ್ಲಿರುವೆ:
  • ಮುಖಪುಟ ಹೊರನಾಡು ಕನ್ನಡಿಗ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಲೈಕಾ ಬ್ಯಾಪ್ಟಿಸ್ಟ್‌
    • ಮೀರಾರೋಡ್‌ ಹಸಿರು ಕ್ರಾಂತಿಗೆ ಆದ್ಯತೆ
    • ಮೀರಾ ಭಾಯಂದರ್‌ ವಾರ್ಡ್‌ ಕ್ರಮಾಂಕ 42 ಬಿ ಅಭ್ಯರ್ಥಿ ಮಲೈಕಾ ಗಿಲ½ರ್ಟ್‌ ಬ್ಯಾಪ್ಟಿಸ್ಟ್‌

      • Udayavani | Aug 05, 2012

        ಮುಂಬಯಿ: ಅಭಿವೃದ್ಧಿ ಪಥದಲ್ಲಿರುವ ಮೀರಾರೋಡ್‌ ವೇಗದಲ್ಲಿ ಬೆಳೆದು ನಿಂತ ನಗರ. ಅಭಿವೃದ್ಧಿಗೆ ತಕ್ಕಂತೆ ಸ್ಪಂದಿಸಲು ಮೊದಲು ಮೂಲಭೂತ ಸೌಕರ್ಯಗಳ ಸುಧಾರಣೆಯಾಗಬೇಕಾಗಿದೆ. ಸುಧಾರಿತ ಮಾದರಿಯ ಒಳಚರಂಡಿ ಯೋಜನೆ, ಕುಡಿಯುವ ನೀರು ಪೂರೈಕೆ, ಮೀರಾರೋಡ್‌ ರೈಲು ನಿಲ್ದಾಣದಿಂದ ಎಲ್ಲ ಕಡೆಗಳಿಗೂ ಬಸ್ಸುಗಳ ವ್ಯವಸ್ಥೆ, ಮಹಿಳಾ ಮತ್ತು ಹಿರಿಯ ನಾಗರಿಕರಿಗೆ ಪ್ರಾಮುಖ್ಯತೆ ನೀಡಿ ಅವರ ಭದ್ರತೆ ಕಾಪಾಡುವುದು, ಹಸಿರು ಕ್ರಾಂತಿಯೊಂದಿಗೆ ಮೀರಾರೋಡ್‌ ಹಸಿರು ನಗರವನ್ನಾಗಿ ಮಾಡಲಾಗುವುದು ಎಂದು ಮಲೈಕಾ ಜಿ.ಬ್ಯಾಪ್ಟಿಸ್ಟ್‌ ಹೇಳಿದರು.

        ಅವರು ಮೀರಾ ಭಾಯಂದರ್‌ ಮಹಾನಗರ ಪಾಲಿಕೆಯ ಶಾಂತಿಪಾರ್ಕ್‌ ಶೀತಲ್‌ನಗರದ ಗೋಕುಲ್‌ ವಿಲೇಜ್‌ನ ಆರ್‌.ಎನ್‌.ಎ. ಕಾಲನಿ ವಾರ್ಡ್‌ ಕ್ರಮಾಂಕ 42(ಬಿ)ದಿಂದ ಮೀರಾ-ಭಾಯಂದರ್‌ ನಗರಪಾಲಿಕೆ ಚುನಾವಣೆಯಲ್ಲಿ ಎನ್‌ಸಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅವರು ಗೋಕುಲ್‌ ವಿಲೇಜ್‌ನಲ್ಲಿ ದಕ್ಷಿಣ ಭಾರತೀಯರು ಮತ್ತು ಬೆಂಬಲಿಗರು ಆಯೋಜಿಸಿದ ಬೃಹತ್‌ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

        ತುಳು-ಕನ್ನಡಿಗರ ಶ್ರೇಯೋಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತೇನೆ. ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ)ವನ್ನು ಮೀರಾಭಾಯಂದರ್‌ ನಗರಪಾಲಿಕೆ ಚುನಾವಣೆ ಅತ್ಯಧಿಕ ಬಹುಮತಗಳಿಂದ ಚುನಾಯಿಸಬೇಕು ಎಂದು ವಿನಂತಿಸಿದರು.

        ವಾರ್ಡ್‌ ಕ್ರಮಾಂಕ 42(ಎ)ಯಿಂದ ಸ್ಪರ್ಧಿಸುವ ಇನ್ನೋರ್ವ ಎನ್‌ಸಿಪಿ ಅಭ್ಯರ್ಥಿ ವನ್‌ಟ್ಯೂರ್‌ ಗಿಲ½ರ್ಟ್‌ ಮೆಂಡೋನ್ಸಾ ಅವರು ನಾಗರಿಕರ ರಕ್ಷಣೆಗಾಗಿ ವಸತಿ ಸಮುಚ್ಚಯಗಳಲ್ಲಿ ಸಿಸಿಟಿವಿ ಜೋಡಣೆ, ತ್ಯಾಜ್ಯವಸ್ತುಗಳ ವಿಲೇವಾರಿ, ದೂರು ಸ್ವೀಕಾರ ಕೇಂದ್ರ ತೆರೆಯಲಾಗುವುದು ಎಂದರು. ಮೀರಾಭಾಯಂದರ್‌ ಮಹಾನಗರ ಪಾಲಿಕೆಯ ಪ್ರಥಮ ಅಧ್ಯಕ್ಷ ನನ್ನ ತಂದೆ ಗಿಲ½ರ್ಟ್‌ ಮೆಂಡೋನ್ಸಾ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತೇನೆ ಎಂದರು.

        ಮೀರಾ ಭಾಯಂದರ್‌ ಎನ್‌ಸಿಪಿ ಶಾಸಕ ಗಿಲ½ರ್ಟ್‌ ಮೆಂಡೋನ್ಸಾ ರ್ಯಾಲಿಗೆ ಚಾಲನೆ ನೀಡಿ ಎನ್‌ಸಿಪಿ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ ಎಂದರು.
        ಮಲೈಕಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಗಿಲ½ರ್ಟ್‌ ಬ್ಯಾಪ್ಟಿಸ್ಟ್‌, ನಿರ್ದೇಶಕಿ ಮಾರ್ಸೆಲಿನ್‌ ಬ್ಯಾಪ್ಟಿಸ್ಟ್‌, ಎನ್‌ಸಿಪಿ ಅಭ್ಯರ್ಥಿಗಳನ್ನು ಮೀರಾಭಾಯಂದರ್‌ ನಗರಪಾಲಿಕೆಗೆ ಅಧಿಕ ಮತಗಳಿಂದ ಆಯ್ಕೆ ಮಾಡಬೇಕು ಎಂದು ವಿನಂತಿಸಿದರು. ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಎನ್‌ಸಿಪಿ ಜಿಲ್ಲಾ ಕಾರ್ಯದರ್ಶಿ ಅಜಯ್‌ ಎಲ್‌.ದುಬೆ, ಆರ್‌.ಎನ್‌.ಎ. ಫೆಡರೇಶನ್‌ ಕೋಶಾಧಿಕಾರಿ ರಶೀದ್‌ ಅನ್ವರ್‌, ಎನ್‌ಸಿಪಿ ಮೀರಾಭಾಯಂದರ್‌ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ರೇಜಿನಾ ಎಸ್‌. ಫಿಲ್ಡ್‌ ಉಪಸ್ಥಿತರಿದ್ದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus