Saturday, May 25, 2013
Last Updated: 1:24:17 AM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನನ್ನ ಸಾವಿಗೆ ಕಂದಾ ಕಾರಣ: ಪತ್ರ ಬರೆದಿಟ್ಟ ಗೀತಿಕಾ ಶರ್ಮಾ
    • ಸಚಿವನ ಕಿರುಕುಳ: ಮಾಜಿ ಗಗನಸಖೀ ಆತ್ಮಹತ್ಯೆ
    • ಹರ್ಯಾಣ ಸಚಿವ ಗೋಪಾಲ ಕಂದಾ ವಿರುದ್ಧ ಪ್ರಕರಣ
    • ಗೀತಿಕಾ ಶರ್ಮಾ ಎಂಬಾಕೆ ಶನಿವಾರ ರಾತ್ರಿ ನವದೆಹಲಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

      • Udayavani | Aug 05, 2012

        ಸಚಿವನ ವಜಾಕ್ಕೆ ಪ್ರತಿಪಕ್ಷಗಳ ಪಟ್ಟು

        ಹರ್ಯಾಣಾ ರಾಜಕೀಯದಲ್ಲಿ ಭಾರಿ ಕೋಲಾಹಲ


        ನವದೆಹಲಿ/ಚಂಡೀಗಢ :
        ಹರ್ಯಾಣದ ಪ್ರಭಾವಿ ಸಚಿವ ಗೋಪಾಲ್‌ ಕಂದಾ ಅವರ ಮೇಲೆ ಮಾನಸಿಕ ಕಿರುಕುಳದ ಆರೋಪ ಹೊರಿಸಿ ಮಾಜಿ ಗಗನಸಖೀ ಗೀತಿಕಾ ಶರ್ಮಾ ಎಂಬಾಕೆ ಶನಿವಾರ ರಾತ್ರಿ ನವದೆಹಲಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಪ್ರಕರಣ ಈಗ ಹರ್ಯಾಣಾ ರಾಜಕೀಯದಲ್ಲಿ ಭಾರಿ ಕೋಲಾಹಲವೆಬ್ಬಿಸಿದ್ದು, ಪ್ರತಿಪಕ್ಷಗಳು ಕಂದಾ ವಜಾಕ್ಕೆ ಪಟ್ಟು ಹಿಡಿದಿವೆ.
        ಆತ್ಮಹತ್ಯೆಗೂ ಮುನ್ನ ಗೀತಿಕಾ, ತನ್ನ ಸಾವಿಗೆ ಹರ್ಯಾಣದ ಸಚಿವ ಗೋಪಾಲ್‌ ಕಂದಾ ಕಾರಣ ಎಂದು ಪತ್ರದಲ್ಲಿ ದಾಖಲಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಸಚಿವ ಕಂದಾ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

        ಘಟನೆ ಹಿನ್ನೆಲೆ:

        ಗೀತಿಕಾ ಈ ಹಿಂದೆ ಗೋಪಾಲ್‌ ಕಂದಾ ನಡೆಸುತ್ತಿದ್ದ ಎಂಡಿಎಲ್‌ಆರ್‌ ವಿಮಾನಯಾನ ಕಂಪನಿಯಲ್ಲಿ ಗಗನಸಖೀಯಾಗಿದ್ದಳು. ವಿಮಾನಯಾನ ಕಂಪನಿ ಮುಚ್ಚಿಹೋದ ಮೇಲೆ ಆಕೆ ದುಬೈ ಮೂಲದ ಎಮಿರೇಟ್ಸ್‌ ಕಂಪನಿಯಲ್ಲಿ ಕೆಲಸ ಸೇರಿಕೊಂಡಿದ್ದಳು.

        ಆದರೆ ಗೀತಿಕಾ ವಿರುದ್ಧ ಎಮಿರೇಟ್ಸ್‌ ಕಂಪನಿಗೆ ಸುಳ್ಳು ಮಾಹಿತಿ ರವಾನಿಸಿದ್ದ ಕಂದಾ, ಆಕೆಯು ಅಲ್ಲಿಯೂ ಕೆಲಸದಿಂದ ವಜಾ ಆಗುವಂತೆ ಮಾಡಿದ್ದ. ಅಲ್ಲದೆ ತನ್ನ ಕಂಪನಿ ಬಿಟ್ಟು ಬೇರೆಲ್ಲೂ ಕೆಲಸ ಮಾಡದಂತೆ ಬೆದರಿಕೆ ಹಾಕುತ್ತಿದ್ದ. ಆ ಬಳಿಕ ಕಂದಾ, ತನ್ನದೇ ಒಡೆತನದ ಮತ್ತೂಂದು ಕಂಪನಿಯಲ್ಲಿ ಗೀತಿಕಾಗೆ ನಿರ್ದೇಶಕ ಹುದ್ದೆ ನೀಡಿದ್ದ.

        'ಆದರೆ ಕಂದಾ ಮತ್ತು ತಾನು ನಿರ್ದೇಶಕಿಯಾಗಿದ್ದ ಕಂಪನಿಯ ಮ್ಯಾನೇಜರ್‌ ಅರುಣಾ ಛಡ್ಡಾ ಇಬ್ಬರೂ ನಂಬಿಕೆಗೆ ಅನರ್ಹರು. ಅವರು ನನಗೆ ಮೋಸ ಮಾಡಿದ್ದಾರೆ' ಎಂದು ಆರೋಪಿಸಿರುವ ಗೀತಿಕಾ ಶನಿವಾರ ರಾತ್ರಿ ದೆಹಲಿಯಲ್ಲಿನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

        ಈ ನಡುವೆ ಘಟನೆ ಕುರಿತು ಪೂರ್ಣ ಮಾಹಿತಿ ಪಡೆದ ಬಳಿಕ ಸಚಿವನ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಹೇಳಿದ್ದಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus