ಪಣಂಬೂರು: ಮೀನುಗಾರಿಗೆಕೆ ತೆರೆಳಿದ್ದ ನಾಡದೋಣಿ ಮೀನು ತುಂಬಿ ಹಿಂತಿರುಗುತ್ತಿದ್ದಾಗ ಮಂಗಳೂರಿನ ಅಳಿವೆಬಾಗಿಲಿನಲ್ಲಿಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದು ಅದರಲ್ಲಿದ್ದ ನಾಲ್ವರು ಪವಾಡ ಸದೃಶರಾಗಿ ಪಾರಾದ ಘಟನೆ ರವಿವಾರ ಸಂಭವಿಸಿದೆ.ಕಸº ಬೆಂಗ್ರೆಯ ಚೆರಿಯೋನು ಅವರ ಪುತ್ರ ಮಹಮ್ಮದ್ ರಫೀಕ್, ಕುಂಜಿnಮೋನು ಅವರಪುತ್ರ ಫರಾಝ್, ಹಸೈನಾರ್ ಅವರ ಮಗನಾದ ಇಜ್ಜಾ ಹಾಗೂ ತಮಿಳುನಾಡು ಮೂಲದ ಮಾಮು ಸಾವಿನ ದವಡೆಯಿಂದ ಪಾರಾದವರು.ದೋಣಿ ಮಗುಚಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ನೆರವಿಗೆ ದಾವಿಸಿದರು. ಈಜಿ ಕೊಂಡು ದಡದತ್ತ ಬರುತ್ತಿದ್ದ ಇಬ್ಬರನ್ನು ಹಗ್ಗದ ಮೂಲಕ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.ಉಳಿದಿಬ್ಬರನ್ನು ಮೀನುಗಾರಿಗೆ ನಡೆಸಿ ಹಿಂತಿರುಗುತ್ತಿದ್ದ ದೋಣಿಯ ಸಹಾಯದಿಂದ ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು.ಘಟನೆಯ ಕುರಿತಂತೆ ಮಾಹಿತಿ ನೀಡಿದ ಮಹಮ್ಮದ್ ರಫೀಕ್ ಶನಿವಾರಮದ್ಯಾಹ್ನ ಕಸº ಬೆಂಗ್ರೆಯಿಂದ ಅಳಿವೆ ಬಾಗಿಲಿನ ಮೂಲಕ ಮೀನುಗಾರಿಕೆ ತೆರಳಿದ್ದೆವು.ರವಿವಾರ ಸುಮಾರು 11.30ರ ಸುಮಾರಿಗೆಹಿಂತಿರುಗುತ್ತಿದ್ದಾಗ ನಾಡದೋಣಿ ಅಳಿವೆ ಬಾಗಿಲಿನಲ್ಲಿ ನಿಯಂತ್ರಣ ತಪ್ಪಿ ಮಗುಚಿ ಬಿತ್ತು.ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿ ಸಮುದ್ರದಲ್ಲಿ ಬೃಹತ್ ಅಲೆಗಳು ಏಳುತ್ತಿದ್ದುದರಿಂದ ದೋಣಿಯ ನಿಯಂತ್ರಣ ಸಾಧ್ಯವಾಗಲಿಲ್ಲ ಎಂದರು.ದೋಣಿಯಲ್ಲಿದ್ದ ಎರಡು ಎಂಜಿನ್,ಸುಮಾರು ಐವತ್ತು ಸಾವಿರ ರೂಪಾಯಿ ಮೌಲ್ಯದ ಮೀನು ಸಮುದ್ರ ಪಾಲಾಗಿದೆ.ದೇವರ ದಯೆಯಿಂದ ನಾವು ಜೀವಂತವಾಗಿದ್ದವೆಎಂದು ದೇವರನ್ನು ನೆನೆಸಿಕೊಂಡರು.ಡ್ರಜ್ಜಿಂಗ್ ಅಪೂರ್ಣಕ್ಕೆ ಆಕ್ರೋಶ: ಡ್ರಜ್ಜಿಂಗ್ ಮಾಡಲು ನೂರಾರು ಬಾರಿ ಮನವಿ ಕೊಟ್ಟರೂ ಕೇವಲ ಕಣ್ಣೊರೆಸುವ ತಂತ್ರದಂತೆ ಡ್ರಜ್ಜಿಂಗ್ ಕಾಮಗಾರಿ ಮಾಡಿದ್ದಾರೆ.ಇಂದಿಗೂ ಅಳಿವೆ ಬಾಗಿನಲ್ಲಿ ಹೂಳು ತುಂಬಿಕೊಂಡಿದ್ದು ಅಧಿಕಾರಿಗಳಿಗೆ ಮೀನುಗಾರರ ಪ್ರಾಣದ ಬಗ್ಗೆ ಚಿಂತೆಯೇ ಇಲ್ಲವಾಗಿದೆಎಂದು ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತ ಪಡಿಸಿದರು.