ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಸಾಲು ಮರದ ತಿಮ್ಮಕ್ಕ ಅವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಭಾನುವಾರ ಮಧ್ಯಾಹ್ನ ದಾಖಲು ಮಾಡಲಾಗಿದೆ.ಕಳೆದ ಎರಡು ದಿನಗಳಿಂದ ಶೀತ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ತಿಮ್ಮಕ್ಕ ಭಾನುವಾರ ತೀವ್ರ ಅಸ್ವಸ್ಥರಾದರು. ಹೀಗಾಗಿ ಅವರ ಸಾಕು ಮಗ ಉಮೇಶ್ ಮಾಗಡಿ ತಾಲೂಕಿನ ಹುಲಿಕಲ್‌ನಿಂದ ಕರೆತಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಎಲ್ಲಾ ಪರೀಕ್ಷೆಗಳನ್ನು ನಡೆಸಿರುವ ವೈದ್ಯರು ವಿಶೇಷ ವಾರ್ಡ್‌ನಲ್ಲಿ ತಿಮ್ಮಕ್ಕ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಸರ್ಕಾರದ ವತಿಯಿಂದ ಯಾರೋಬ್ಬರು ಬಂದು ತಿಮ್ಮಕ್ಕನ ಆರೋಗ್ಯ ವಿಚಾರಿಸಿಲ್ಲ ಎಂದು ಉಮೇಶ್ 'ಉದಯವಾಣಿಗೆ' ತಿಳಿಸಿದ್ದಾರೆ.