Udayavani | Aug 05, 2012
ಮೂಲ್ಕಿ ಬಂಟರ ಸಂಘದಿಂದ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ,
ಕಿನ್ನಿಗೋಳಿ: ಬಂಟ ಸಮುದಾಯ ಇತರ ಸಮುದಾಯದವರಿಗೆ ಮಾದರಿಯಾಗಬೇಕು. ಶೈಕ್ಷಣಿಕ, ಅರ್ಥಿಕವಾಗಿ ಇನ್ನೂ ಮುಂದೆ ಬರಬೇಕು. ನಮ್ಮ ಸಮುದಾಯದ ಮಕ್ಕಳು ಐಟಿ, ಬಿಟಿ ಹಿಂದೆ ಹೋಗದೆ ಐಎಎಸ್, ಐಪಿಎಸ್‌ನ ಕಡೆಗೂ ಗಮನ ಹರಿಸಬೇಕು ಎಂದು ಮಾಜಿ ಸಚಿವ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಹೇಳಿದರು.
ಅವರು ಆ. 5 ರಂದು ಪುನರೂರು ನಾಗವೀಣಾ ಸಭಾಗೃಹದಲ್ಲಿ ಮೂಲ್ಕಿ ಬಂಟರ ಸಂಘದ ಆಶ್ರಯದಲ್ಲಿ 2012-13 ನೇ ಸಾಲಿನ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಮತ್ತು ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತುಗಳನ್ನಾಡಿದರು.

156 ವಿದ್ಯಾರ್ಥಿಗಳಿಗೆ 2 ಲಕ್ಷ ರೂ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಯು.ಎ.ಇ. ಉದ್ಯಮಿ ಕಳತ್ತೂರು ಶೇಖರ ಬಾಬು ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಯನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ವಿಧಾನಸಭಾ ಸದಸ್ಯ ಡಾ| ಸಂಜೀವನಾಥ ಐಕಳ ಅವರ ಪರವಾಗಿ ಅವರ ಪುತ್ರ ವಿನೋಭನಾಥ ಐಕಳ ಅವರಿಗೆ ನೀಡಲಾಯಿತು.
ಸಾಧಕರಿಗೆ ಸಮ್ಮಾನ
ಹಿರಿಯ ಯಕ್ಷಗಾನ ಕಲಾವಿದ ಮುಂಡ್ಕೂರು ಜಯರಾಮ ಶೆಟ್ಟಿ, ಅಂತಾರಾಷ್ಟ್ರೀಯ ಪೈಲೆಟ್ ಅನೂಪ ಶೆಟ್ಟಿ , ರಾಜ್ಯ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿ ಅಕ್ಷಯ್‌ರಾಜ್ ಶೆಟ್ಟಿ, ಕಬ್ಬಡಿ ಕ್ರೀಡಾಪಟು ಇಂಚರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಮುಂಬಯಿಯ ವಿರಾರ್ ಉದ್ಯಮಿ ಶಂಕರ ಶೆಟ್ಟಿ ಬಳುRಂಜೆ, ಮೂಲ್ಕಿ ಸುಂದರರಾಮ ಶೆಟ್ಟಿ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಮನೋಹರ್ ಶೆಟ್ಟಿ, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಕಾರ್ಯದರ್ಶಿ ರವಿರಾಜ ಶೆಟ್ಟಿ , ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕೋಶಾಧಿಕಾರಿ ಕೆ. ಸುಂದರ ಶೆಟ್ಟಿ, ಕುಶಲ ಶೇಖರ ಶೆಟ್ಟಿ , ಚಾಂದನಿ, ರೋಶನಿ, ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಶಮೀನ ಆಳ್ವ, ಯುವ ವಿಭಾಗದ ಅಧ್ಯಕ್ಷ ರಾಜೇಶ್ ಶೆಟ್ಟಿ ಮಾನಂಪಾಡಿ, ಜಯಪಾಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ರವಿರಾಜ ಶೆಟ್ಟಿ ಪ್ರಸ್ತಾವನೆಗೈದರು. ಶಿಕ್ಷಕ ಸಾಯಿನಾಥ ಶೆಟ್ಟಿ ಹಾಗೂ ನವೀನ್ ಕುಮಾರ್ ಶೆಟ್ಟಿ ಎಡೆ¾ಮಾರ್ ಕಾರ್ಯಕ್ರಮ ನಿರೂಪಿಸಿದರು. ಮುರಳೀಧರ ಭಂಡಾರಿ, ಗಂಗಾಧರ ಶೆಟ್ಟಿ, ಶರತ್ ಶೆಟ್ಟಿ ಸಾಧಕರ ಅಭಿನಂದನಾ ಭಾಷಣ ಮಾಡಿದರು. ಜೊತೆ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು.