Friday, May 24, 2013
Last Updated: 2:27:14 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಉತ್ತಮ ಬ್ಯಾಟಿಂಗ್‌ನಿಂದ ಹೆಚ್ಚಿನ ಆತ್ಮವಿಶ್ವಾಸ
      • Udayavani | Aug 05, 2012

        ಪಲ್ಲೆಕೆಲೆ : ಶ್ರೀಲಂಕಾ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಇರ್ಫಾನ್‌ ಪಠಾಣ್‌ ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇದಕ್ಕೆ ಕಾರಣವೇನೆಂದರೆ ಭಾರತೀಯ ಇನ್ನಿಂಗ್ಸ್‌ನ ಅಂತ್ಯದ ವೇಳೆ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದರಿಂದ ಅವರ ಆತ್ಮವಿಶ್ವಾಸ ಹೆಚ್ಚುವಂತಾಯಿತು. ಇದರಿಂದಾಗಿ ಮಾರಕ ದಾಳಿ ಸಂಘಟಿಸಲು ಅವರಿಂದ ಸಾಧ್ಯವಾಯಿತು. ಶ್ರೀಲಂಕಾದ ಐದು ವಿಕೆಟ್‌ ಕಿತ್ತು ಅವರು ಮಿಂಚಿದರು.

        ಅಜೇಯ 29 ರನ್‌ ಗಳಿಸಿದ್ದ ಪಠಾಣ್‌ ಅವರು ನಾಯಕ ಧೋನಿ ಜತೆ ಉಪಯುಕ್ತ 77 ರನ್ನುಗಳ ಜತೆಯಾಟದಲ್ಲಿ ಭಾಗಿಯಾಗಿದ್ದರು.

        'ದೇವರು ಒಲಿದಿದ್ದಾರೆ. ಈ ಸರಣಿಯುದ್ದಕ್ಕೂ ನಾನು ಚೆನ್ನಾಗಿ ಬೌಲಿಂಗ್‌ ಮಾಡಿದ್ದೇನೆ. ಹಲವು ಕೆಟ್ಟ ಎಸೆತಗಳಿದ್ದರೂ ಐದು ವಿಕೆಟ್‌ ಪಡೆದೆ. ಉತ್ತಮ ಬ್ಯಾಟಿಂಗ್‌ ಮಾಡಿದ್ದರಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಯಿತು ಎಂದು ಪಠಾಣ್‌ ತಿಳಿಸಿದರು.

        ಇಲ್ಲಿನ ಪಿಚ್‌ ನನ್ನ ಶೈಲಿಯ ಬೌಲಿಂಗ್‌ಗೆ ಬಹಳಷ್ಟು ನೆರವಾಗಿತ್ತು. ಇದರಿಂದ ನನಗೆ ತುಂಬಾ ಲಾಭವಾಯಿತು ಎಂದವರು ಹೇಳಿದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus