Monday, May 20, 2013
Last Updated: 1:45:18 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವಿಲಿಯಮ್ಸ್‌ ಸೋದರಿಯರ ಬಂಗಾರ ದಾಖಲೆ
    • ವೀನಸ್‌-ಸೆರೆನಾ ಒಲಿಂಪಿಕ್ಸ್‌ನಲ್ಲಿ 4 ಚಿನ್ನ ಗೆದ್ದ ಮೊದಲ ಟೆನಿಸ್‌ ಸಾಧಕರೆನಿಸಿದರು.

      • Udayavani | Aug 05, 2012

        ಲಂಡನ್‌ : ವಿಲಿಯಮ್ಸ್‌ ಸಹೋದರಿಯರಾದ ವೀನಸ್‌ ಮತ್ತು ಸೆರೆನಾ ಲಂಡನ್‌ ಒಲಿಂಪಿಕ್ಸ್‌ ವನಿತಾ ಟೆನಿಸ್‌ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಮೆರೆದಿದ್ದಾರೆ. ರವಿವಾರದ ಫೈನಲ್‌ನಲ್ಲಿ ಆವರು ಜೆಕ್‌ ಗಣರಾಜ್ಯದ ಆಂಡ್ರಿಯಾ ಲವಕೋವಾ-ಲೂಸಿ ರಡೇಕಾ ವಿರುದ್ಧ 6-4, 6-4 ಅಂಕಗಳ ಜಯ ಸಾಧಿಸಿದರು.

        ಇದರೊಂದಿಗೆ ವೀನಸ್‌-ಸೆರೆನಾ ಒಲಿಂಪಿಕ್ಸ್‌ನಲ್ಲಿ 4 ಚಿನ್ನ ಗೆದ್ದ ಮೊದಲ ಟೆನಿಸ್‌ ಸಾಧಕರೆನಿಸಿ ಹೊಸ ಇತಿಹಾಸ ಬರೆದರು. ಇವರು ಸಿಡ್ನಿ ಹಾಗೂ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲೂ ವನಿತಾ ಡಬಲ್ಸ್‌ ಚಿನ್ನ ಜಯಿಸಿದ್ದರು. ಸಿಡ್ನಿಯಲ್ಲಿ ವೀನಸ್‌, ಶನಿವಾರವಷ್ಟೇ ಲಂಡನ್‌ನಲ್ಲಿ ಸೆರೆನಾ ಸಿಂಗಲ್ಸ್‌ ವಿಭಾಗದ ಚಾಂಪಿಯನ್‌ ಆಗಿ ಮೂಡಿಬಂದಿದ್ದರು.

        ರವಿವಾರದ ಡಬಲ್ಸ್‌ ಸಾಧನೆಯೊಂದಿಗೆ ವೀನಸ್‌ ಮತ್ತು ಸೆರೆನಾ 3 ಒಲಿಂಪಿಕ್ಸ್‌ಗಳಲ್ಲಿ ಪದಕ ಜಯಿಸಿದ ಸ್ಪೇಯ್ನನ ಕಾಂಚಿಟಾ ಮಾರ್ಟಿನೆಸ್‌ ದಾಖಲೆಯನ್ನೂ ಸರಿದೂಗಿಸಿದರು. ಮಾರ್ಟಿನೆಸ್‌ 1992 ಮತ್ತು 2004ರಲ್ಲಿ ಬೆಳ್ಳಿ, 1996ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕೀನ್ಯಾದ ಅಲೆಕ್ಸ್‌ ಒಲೈಟಿಪ್‌ ಮತ್ತು ಗ್ಲೆಡ್ಸ್‌ ಚೆರೊನೊ ಪ್ರತಿಷ್ಠಿತ ವಿಶ್ವ 10ಕೆ ಮ್ಯಾರಥಾನ್‌ ಓಟದ ಪುರುಷ ಮತ್ತು ವನಿತೆಯರ ವಿಭಾಗಗಳಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ....
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus