Thursday, May 23, 2013
Last Updated: 8:01:10 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಟೆನಿಸ್‌ ಡಬಲ್ಸ್‌: ಬ್ರ್ಯಾನ್‌ ಸೋದರರಿಗೆ ಚಿನ್ನ
    • ಅಮೆರಿಕದ ಅವಳಿ ಸೋದರರಾದ ಬಾಬ್‌ ಬ್ರ್ಯಾನ್‌-ಮೈಕ್‌ ಬ್ರ್ಯಾನ್‌.

      • Udayavani | Aug 05, 2012

        ಲಂಡನ್‌ : ಅಮೆರಿಕದ ಅವಳಿ ಸೋದರರಾದ ಬಾಬ್‌ ಬ್ರ್ಯಾನ್‌-ಮೈಕ್‌ ಬ್ರ್ಯಾನ್‌ ಲಂಡನ್‌ ಒಲಿಂಪಿಕ್ಸ್‌ ಟೆನಿಸ್‌ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕದಿಂದ ಅಲಂಕೃತರಾಗಿದ್ದಾರೆ. ಶನಿವಾರ ತಡರಾತ್ರಿ ನಡೆದ ಪ್ರಶಸ್ತಿ ಕಾಳಗದಲ್ಲಿ ಅವರು ಫ್ರಾನ್ಸ್‌ನ ಜೋ ವಿಲ್‌ಫ್ರೆಡ್‌ ಸೋಂಗ-ಮೈಕಲ್‌ ಲೋದ್ರ ವಿರುದ್ಧ 6-4, 7-6 ಅಂಕಗಳ ಜಯ ದಾಖಲಿಸಿದರು.

        ಈವರೆಗೆ ಒಟ್ಟಾಗಿ 11 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ಬ್ರ್ಯಾನ್‌ ಬ್ರದರ್ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿದ್ದರು.

        ಇದು ಲಂಡನ್‌ ಒಲಿಂಪಿಕ್ಸ್‌ನಲ್ಲಿ ಅಮೆರಿಕಕ್ಕೆ ಒಲಿದ ಎರಡನೇ ಟೆನಿಸ್‌ ಚಿನ್ನ. ಶನಿವಾರದ ವನಿತಾ ಫೈನಲ್‌ನಲ್ಲಿ ಮರಿಯಾ ಶರಪೋವಾ ಅವರನ್ನು ಸುಲಭದಲ್ಲಿ ಮಣಿಸಿದ ಸೆರೆನಾ ವಿಲಿಯಮ್ಸ್‌ ಮೊದಲ ಚಿನ್ನ ಜಯಿಸಿದ್ದರು.

        ಹಾಗೆಯೇ ಇದು ಪುರುಷರ ಡಬಲ್ಸ್‌ನಲ್ಲಿ ಫ್ರಾನ್ಸ್‌ ಪಾಲಾದ ದ್ವಿತೀಯ ಒಲಿಂಪಿಕ್‌ ಪದಕ. ಇದಕ್ಕೂ ಮುನ್ನ ಕಂಚಿಗಾಗಿ ನಡೆದ ಕಾಳಗದಲ್ಲಿ ಜೂಲಿಯನ್‌ ಬೆನೆಟೂ-ರಿಚರ್ಡ್‌ ಗಾಸ್ಕ್ವೆಟ್‌ ಸೇರಿಕೊಂಡು ಸ್ಪೇಯ್ನನ ಡೇವಿಡ್‌ ಫೆರರ್‌-ಫೆಲಿಶಿಯಾನೊ ಲೋಪೆಜ್‌ ಅವರನ್ನು 7-6, 6-2 ಅಂತರದಿಂದ ಮಣಿಸಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus