Saturday, May 18, 2013
Last Updated: 6:40:19 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಏಳನೇ ಸ್ಥಾನಕ್ಕೆ ಕುಸಿದ ಕೃಷ್ಣಾ ಪೂನಿಯಾ
    • ಡಿಸ್ಕಸ್‌: ಪೂನಿಯಾ ಕಾಣಲಿಲ್ಲ ಸಕ್ಸಸ್‌
    • ವೈಯಕ್ತಿಕ ನಿರ್ವಹಣೆಗಿಂತಲೂ ಕಳಪೆ ಸಾಧನೆ
    • ವನಿತಾ ಡಿಸ್ಕಸ್‌ ಫೈನಲ್‌ನಲ್ಲಿ ಕೃಷ್ಣಾ ಪೂನಿಯಾ 7ನೇ ಸ್ಥಾನಕ್ಕೆ ಕುಸಿದು ಪದಕ ವಂಚಿತರಾದರು.

      • Udayavani | Aug 05, 2012

        ಲಂಡನ್‌ : ಲಂಡನ್‌ ಒಲಿಂಪಿಕ್‌ ಆ್ಯತ್ಲೆಟಿಕ್ಸ್‌ನಲ್ಲಿ ಭಾರತದ ಒಬ್ಬೊಬ್ಬರೇ ಸ್ಪರ್ಧಿಗಳು ಬರಿಗೈಯಲ್ಲಿ ಹೋರಾಟ ಮುಗಿಸುತ್ತಿದ್ದಾರೆ. ಈ ಸಾಲಿಗೆ ಡಿಸ್ಕಸ್‌ ಎಸೆತಗಾರ್ತಿ ಕೃಷ್ಣಾ ಪೂನಿಯಾ ಕೂಡ ಸೇರಿದ್ದಾರೆ. ಶನಿವಾರ ತಡರಾತ್ರಿ ನಡೆದ ವನಿತಾ ಡಿಸ್ಕಸ್‌ ಫೈನಲ್‌ನಲ್ಲಿ ಅವರು 7ನೇ ಸ್ಥಾನಕ್ಕೆ ಕುಸಿದು ಪದಕ ವಂಚಿತರಾದರು.

        ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಕೃಷ್ಣಾ ಪೂನಿಯಾ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ (64.76 ಮೀ.) ಕಳಪೆ ನಿರ್ವಹಣೆ ದಾಖಲಿಸಿ ನಿರಾಸೆ ಮೂಡಿಸಿದರು. ಪೂನಿಯಾ ಅವರಿಂದ ಎಸೆಯಲು ಸಾಧ್ಯವಾದದ್ದು 63.62 ಮೀ. ದೂರ ಮಾತ್ರ. ಆದರೆ ಭಾರತದ ಪಾಲಿನ ಸಮಾಧಾನವೆಂದರೆ, ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಅಮೆರಿಕದ ಸ್ಟಿಫಾನಿ ಬ್ರೌನ್‌ ಟ್ರಾಫ್ಟನ್‌ ಎಂಟನೇ ಸ್ಥಾನಕ್ಕೆ ಜಾರಿ (63.01 ಮೀ.) ಪೂನಿಯಾ ನಂತರದ ಸ್ಥಾನ ಪಡೆದದ್ದು!

        ಮೊದಲ ಪ್ರಯತ್ನದಲ್ಲಿ 62.42 ಮೀ. ದೂರ ಎಸೆದ ಪೂನಿಯಾ 8ನೇ ಸ್ಥಾನ ತಲುಪುವಲ್ಲಿ ಯಶಸ್ವಿಯಾದರು. ಆದರೆ ಅವರ ದ್ವಿತೀಯ ಸುತ್ತು ಫೌಲ್‌ ಆಯಿತು. ಅನಂತರ 61.61 ಮೀ. ತ್ರೋ ಮಾಡಿದರು. ಒಟ್ಟು 12 ಮಂದಿ ಫೈನಲಿಸ್ಟ್‌ಗಳಲ್ಲಿ 4 ಮಂದಿ ತೃತೀಯ ಸುತ್ತು ಮುಗಿಯುವಷ್ಟರಲ್ಲಿ ಹೊರಬಿದ್ದರು.

        ಆದರೆ ಮತ್ತೆ ಫೌಲ್‌ ಮಾಡಿದ ಪೂನಿಯಾ, ಕೊನೆಯ 2 ಸುತ್ತುಗಳಲ್ಲಿ ಕ್ರಮವಾಗಿ 63.62 ಮೀ. ಹಾಗೂ 61.31 ಮೀ. ಎಸೆದು 7ನೇ ಸ್ಥಾನಕ್ಕೆ ಸಮಾಧಾನಪಟ್ಟರು.

        69.11 ಮೀ. ಎಸೆದ ಯೂರೋಪಿಯನ್‌ ಚಾಂಪಿಯನ್‌, ಕ್ರೊವೇಶಿಯಾದ ಸಾಂಡ್ರಾ ಪರ್ಕೋವಿಕ್‌ ಚಿನ್ನ ಗೆದ್ದರೆ, ಬೆಳ್ಳಿ ರಶ್ಯದ ಡರ್ಯಾ ಪಿಶಲಿ°ಕೋವಾ (67.56 ಮೀ.) ಮತ್ತು ಕಂಚು ಚೀನದ ವಿಶ್ವ ಚಾಂಪಿಯನ್‌ ಲೀ ಯಾನ್‌ಫೆಂಗ್‌ (67.22 ಮೀ.) ಪಾಲಾಯಿತು.

        ಕೃಷ್ಣಾ ಪೂನಿಯಾ ಒಲಿಂಪಿಕ್‌ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನ ಫೈನಲ್‌ ಹಂತಕ್ಕೆ ತಲುಪಿದ ಭಾರತದ ಕೇವಲ 6ನೇ ಕ್ರೀಡಾಳು. ಉಳಿದವರೆಂದರೆ ಮಿಲಾV ಸಿಂಗ್‌, ಪಿ.ಟಿ. ಉಷಾ, ಎಸ್‌. ಶ್ರೀರಾಮ್‌, ಗುರ್ಬಚನ್‌ ಸಿಂಗ್‌ ರಾಂಧವ ಮತ್ತು ಅಂಜು ಬಾಬ್ಬಿ ಜಾರ್ಜ್‌. ಇವರೆಲ್ಲರೂ ಪದಕ ವಂಚಿತರೆಂಬುದು ಉಲ್ಲೇಖನೀಯ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಲಾಟರಿ ಹೊಡೆದೀತೆಂಬ ಕನಸು ಕಾಣುತ್ತಲೇ ಜೈಲು ಪಾಲಾದ ಎಸ್‌. ಶ್ರೀಶಾಂತ್‌ ಅವರೀಗ ಕೇರಳ ರಾಜ್ಯ ಲಾಟರಿ ಜಾಹೀರಾತಿನಿಂದಲೂ ಹೊರಬಿದ್ದಿದ್ದಾರೆ....
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus