ಬೆಂಗಳೂರು: ಪ್ರಜಾಪ್ರಭುತ್ವದ ಸಬಲೀಕರಣಕ್ಕೆ ಶಿಕ್ಷಣ ಮತ್ತು ಕಾನೂನು ಎರಡು ಪ್ರಬಲ ಅಸ್ತ್ರಗಳು ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ರಾಜ್ಯ ಸಚಿವೆ ಜಯಂತಿ ನಟರಾಜ್ ಅಭಿಪ್ರಾಯಟ್ಟಿದ್ದಾರೆ.ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ಶಾಲೆಯ 20ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮೂಲ ಶಿಕ್ಷಣ ಮತ್ತು ಕಾನೂನು ಹಕ್ಕುಗಳ ಅರಿವು ಇಲ್ಲದೇ ಪ್ರಜಾಪ್ರಭುತ್ವ ಅರ್ಥಹೀನವಾಗುತ್ತದೆ. ಸಮಾಜದಲ್ಲಿ ನಾಗರಿಕರು ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಅಸಹಾಯಕರಾದರೆ ಅದು ಪ್ರಜಾಪ್ರಭುತ್ವದ ವಿಡಂಬನೆ. ಜನರ ಜೀವನಕ್ಕೊಂದು ಅರ್ಥವಿಲ್ಲದಂತಾಗುತ್ತದೆ. ಕೆಲವು ಶಕ್ತಿಗಳು ಪ್ರಜಾಪ್ರಭುತ್ವವನ್ನು ನಿಷ#ಲಗೊಳಿಸಲು ಕಾನೂನನ್ನು ಬಳಿಸಿಕೊಳ್ಳುತ್ತಾರೆ. ನಮ್ಮ ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಇದಕ್ಕೆ ಅವಕಾಶ ನೀಡಬಾರದು. ಜ್ಞಾನ ಮತ್ತು ಶಕ್ತಿಯನ್ನು ಬಳಸಿಕೊಂಡು ಕಾನೂನು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ನಿಮ್ಮ ಆದ್ಯ ಕರ್ತವ್ಯ ಎಂದು ಅವರು ಯುವ ವಕೀಲರಿಗೆ ಹೇಳಿದರು.ವ್ಯಕ್ತಿ, ಕುಟುಂಬ ಮತ್ತು ಸಮಾಜದ ಜೀವನ ಮಟ್ಟ ಸುಧಾರಣೆಗೆ ವಕೀಲ ಸಮುದಾಯ ವಿಸ್ತೃತ ಪ್ರಭಾವ ಬೀರುತ್ತದೆ. ಕೆಲವು ವಕೀಲರು ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ವ್ಯಾಜ್ಯಗಳ ವಾದ ಮಂಡನೆಗೆ ವಿಳಂಬ ಧೋರಣೆ ಅನುಸರಿಸುತ್ತಾರೆ. ವ್ಯಾಜ್ಯಗಳನ್ನು ಮುಂದೂಡಿಸಿಕೊಳ್ಳುತ್ತಾರೆ ಎಂಬ ಅಪಾದನೆ ಇದೆ. ಕೆಲ ಸಂದರ್ಭದಲ್ಲಿ ಅದು ಸತ್ಯ ಅನಿಸುತ್ತದೆ. ಇದರಿಂದ ನ್ಯಾಯಾಂಗ ಮತ್ತು ಕಾನೂನಿನ ನಡುವಿನ ಸೂಕ್ಷ್ಮ ಸಂಬಂಧ ಕಳೆದು ಹೋಗುವ ಆತಂಕವಿದೆ. ನ್ಯಾಯಾಂಗವೇ ಅಂತಿಮ ಅಲ್ಲ. ಅದರಿಂದ ನ್ಯಾಯ ಸಿಗುವುದು ಮುಖ್ಯ ಎಂದು ಅವರು ಪ್ರತಿಪಾದಿಸಿದರು.ಹಿಂದಿನ ತಲೆಮಾರಿಗೆ ಹೋಲಿಸಿದರೆ ಈಗಿನ ವಕೀಲ ವೃತ್ತಿಯ ಕ್ಷೇತ್ರ ವ್ಯಾಪಕವಾಗಿದೆ. ದೇಶದ ಅನೇಕ ಕುಟುಂಬಗಳು ಇಂದಿಗೂ ಆಸ್ತಿ ವ್ಯಾಜ್ಯಗಳನ್ನು ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನೀವೆ ಈ ವ್ಯಾಜ್ಯಗಳಿಗೆ ವಾದ ಮಂಡಿಸಬೇಕಾಗಿದೆ. ಆ ದೃಷ್ಟಿಯಿಂದ ತಮ್ಮನ್ನು ಸಿದ್ಧಗೊಳಿಸಿಕೊಳ್ಳುವ ಅಗತ್ಯವಿದೆ. ಇದು ಪರಿಣಿತಿಯ ಕಾಲ. ಕಾನೂನು ಅಲ್ಲದೇ ವಿವಿಧ ಸಾಮಾಜಿಕ ಮತ್ತು ಕೌಟುಂಬಿಕ ವಿಷಯಗಳ ಬಗ್ಗೆ ಪರಿಣಿತಿ ಪಡೆದುಕೊಳ್ಳಬೇಕು. ಪರಿಸ್ಥಿತಿಗೆ ತಕ್ಕಂತೆ ತರಲಾಗಿರುವ ಕಾನೂನು ಬದಲಾವಣೆಗಳನ್ನು ವೃತ್ತಿಗೆ ಪೂರಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಜಯಂತಿ ನಟರಾಜನ್ ಯುವ ವಕೀಲರಿಗೆ ಕರೆ ನೀಡಿದರು.ರಾಜಕೀಯ ಬಡವರಿಂದ ಮತ ಗಳಿಸುವ ಮತ್ತು ಶ್ರೀಮಂತರಿಂದ ಹಣ ಸಂಗ್ರಹಿಸುವ ಚಾಣಾಕ್ಷ ಕಲೆ ಎಂದು ಹೇಳಲಾಗುತ್ತದೆ. ಈ ಧೋರಣೆಯಿಂದ ಯುವ ಜನಾಂಗ ಆಚೆ ಬರಲು ಇದು ಸಕಾಲ. ಅಭಿವೃದ್ಧಿಯ ಮಾನದಂಡವನ್ನು ಬದಲಾಯಿಸಬೇಕಾಗಿದೆ. ಅಭಿವೃದ್ದಿಯ ಸುತ್ತ ವ್ಯಕ್ತಿ ಸುತ್ತುವುದರ ಬದಲು ವ್ಯಕ್ತಿಯ ಸುತ್ತ ಅಭಿವೃದ್ಧಿ ಸುತ್ತುವಂತೆ ಮಾಡಬೇಕಾಗಿದೆ. ಕಾನೂನು ವೃತ್ತಿ ಆರಂಭಸುತ್ತಿರುವ ಯುವ ವಕೀಲರಿಗಾಗಿ ದೇಶ ಬಹಳ ಕಾತರದಿಂದ ಕಾಯುತ್ತಿದೆ. ವೃತ್ತಿ ಕೌಶಲ್ಯತೆ, ಪ್ರಾಮಾಣಿಕತೆ, ಬದ್ಧತೆ ಮತ್ತು ಅಪ್ಪಟ ದೇಶ ಪ್ರಮಿಗಳಾಗಿ ಸಮಾಜದ ಮುಂದೆ ನಿವೆಲ್ಲ ಬರಬೇಕಾಗಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ 2012ನೇ ಶೈಕ್ಷಣಿಕ ವರ್ಷದ ಕಾನೂನು ಪದವಿಧರಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಫ್ತಾಬ್ ಆಲಂ, ಕುಲಪತಿ ಪ್ರೊ. ಆರ್. ವೆಂಕಟರಾವ್, ಕುಲಸಚಿವ ವಿ. ನಾಗರಾಜ್ ಮತ್ತಿತರರು ಇದ್ದರು.