Sunday, May 19, 2013
Last Updated: 9:55:43 PM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವ್ಯಭಿಚಾರ ಆರೋಪ
    • ಪಾಕ್‌ ಪೊಲೀಸರಿಂದ ಬಂಧಿತರ ಬೆತ್ತಲೆ ಮೆರವಣಿಗೆ
      • Udayavani | Aug 06, 2012

        ಇಸ್ಲಾಮಾಬಾದ್‌ : ವ್ಯಭಿಚಾರ ಆರೋಪದ ಮೇಲೆ ಬಂಧಿತರಾದ ಓರ್ವ ಮಹಿಳೆ ಮತ್ತು ಪುರುಷನನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಅಮಾನುಷ ಘಟನೆ ದಕ್ಷಿಣ ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದಿಂದ ವರದಿಯಾಗಿದೆ.

        ಜುಲೈ 27ರಂದು ಮುಮ್ತಾಜ್‌ ಮಿರ್‌ಬಹಾರ್‌ ಎನ್ನುವ ವರ್ತಕನನ್ನು ಮತ್ತು ಇನ್ನೋರ್ವ ಮಹಿಳೆಯನ್ನು ಪೊಲೀಸರು ವ್ಯಭಿಚಾರ ಆರೋಪದ ಮೇಲೆ ಬಂಧಿಸಿದ್ದರು. ಅವರನ್ನು ಬಲವಂತವಾಗಿ ವಿವಸ್ತ್ರಗೊಳಿಸಿ ಬೀದಿಯ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಪೊಲೀಸ್‌ ಠಾಣೆಗೆ ಕೊಂಡೊಯ್ಯಲಾಯಿತು ಎನ್ನಲಾಗಿದೆ. ಅವರಿಬ್ಬರು ಬೆತ್ತಲೆಯಾಗಿ ನಡೆದು ಬರುತ್ತಿದ್ದ ದೃಶ್ಯವನ್ನು ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ಚಿತ್ರೀಕರಿಸಿದರೆಂದು ಬಿಬಿಸಿ ಉರ್ದು ವಾಹಿನಿ ವರದಿ ಮಾಡಿದೆ. ಪ್ರಸಾರವಾದ ಚಿತ್ರಗಳಲ್ಲಿ ಬಟ್ಟೆ ಕಳಚಲು ಪೊಲೀಸರು ಅವರನ್ನು ಬಲವಂತ ಮಾಡುತ್ತಿದ್ದುದು ಸ್ಪಷ್ಟವಾಗಿತ್ತು.

        'ಇದು ಪೊಲೀಸರ ಹೂಟ. ಆ ಮಹಿಳೆಯ ಪರಿಚಯ ನನಗಿಲ್ಲ. ಆಕೆಯನ್ನು ಪೊಲೀಸರೇ ಕರೆದುಕೊಂಡು ಬಂದರು. ಬಲವಂತವಾಗಿ ನಮ್ಮಿಬ್ಬರ ಬಟ್ಟೆಗಳನ್ನು ಕಳಚಿ ಬೀದಿಯ ರಸ್ತೆಗಳಲ್ಲಿ ಸುಮಾರು ಅರ್ಧ ಕಿ.ಮೀ. ಮೆರವಣಿಗೆ ನಡೆಸಿದರು. ಆ ವೇಳೆ ಪೊಲೀಸರ ಸಹಿತ ಅನೇಕರು ಆ ಸನ್ನಿವೇಶವನ್ನು ಚಿತ್ರೀಕರಿಸಿಕೊಂಡರು. ನಮ್ಮೊಂದಿಗೆ ಇನ್ನೊಬ್ಬ ಮಹಿಳೆಯನ್ನು ಬಂಧಿಸಲಾಗಿದ್ದರೂ ಆಕೆಯನ್ನು ನಮ್ಮಂತೆ ಬೆತ್ತಲೆಗೊಳಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಿಲ್ಲ' ಎಂದು ಮಿರ್‌ಬಹಾರ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

        ಆ ಮಹಿಳೆ ಇನ್ನೂ ಸೆರೆಮನೆಯಲ್ಲಿದ್ದಾಳೆ. ಮಿರ್‌ಬಹಾರ್‌ಗೆ ಜಾಮೀನು ದೊರೆತಿದೆ ಎನ್ನಲಾಗಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus