Friday, May 24, 2013
Last Updated: 10:39:18 AM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಓಡುತ್ತಿದ್ದ ವಿಮಾನದಿಂದ ಧುಮುಕಿದ !
      • Udayavani | Aug 06, 2012

        ಕೌಲಾಲಂಪುರ : ಇನ್ನೇನು ವಿಮಾನ ಹಾರಾಟ ಗಗನಕ್ಕೇರಬೇಕು ಎನ್ನುವಷ್ಟರಲ್ಲಿ ರನ್‌ ವೇಯಲ್ಲಿ ಚಲಿಸುತ್ತಿದ್ದ ವಿಮಾನದಿಂದ ವ್ಯಕ್ತಿಯೊಬ್ಬ ಕೆಳಗೆ ಧುಮುಕಿದ ಘಟನೆ ಮಲೇಶ್ಯಾದ ವಿಮಾನ ನಿಲ್ದಾಣದಲ್ಲಿ ನಡೆಯಿತು. ಇದರಿಂದಾಗಿ ವಿಮಾನ ಹಾರಾಟ ಕೆಲ ಕಾಲ ವಿಳಂಬವಾಯಿತು.

        ಮಲೇಶ್ಯಾದ ಉತ್ತರ ಸರವಾಕ್‌ ರಾಜ್ಯದಿಂದ ಕೌಲಾಲಂಪುರಕ್ಕೆ ಹಾರಾಡಲು ವಿಮಾನವೊಂದು ಅಣಿಯಾಗಿ ನಿಂತಿತ್ತು. ಶುಕ್ರವಾರ 7.40ಕ್ಕೆ ವಿಮಾನ ಹಾರಾಟ ನಿಗದಿಯಾಗಿತ್ತು. ರನ್‌ವೇಯಲ್ಲಿ ವಿಮಾನ ಸಾಗುತ್ತಿದ್ದಂತೆ ವ್ಯಕ್ತಿಯೊಬ್ಬ ತುರ್ತು ನಿರ್ಗಮನ ದ್ವಾರದ ಬಾಗಿಲು ತೆರದು ಕೆಳಗೆ ಧುಮುಕಿದ. ಜನರೆಲ್ಲ ಬೊಬ್ಬಿಟ್ಟರು. ತತ್‌ಕ್ಷಣ ವಿಮಾನ ಹಾರಾಟವನ್ನು ನಿಲ್ಲಿಸಲಾಯಿತು.

        ಕೆಳಗೆ ಧುಮುಕಿದ ಪ್ರಯಾಣಿಕನಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ . ವಿಚಾರಣೆಗಾಗಿ ಆತನನ್ನು ಬಂಧಿಸಲಾಗಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus