Thursday, June 20, 2013
Last Updated: 12:50:22 AM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಆತ್ಮಾಹುತಿ ಬಾಂಬ್‌ ದಾಳಿಗೆ 42 ಬಲಿ
      • Udayavani | Aug 06, 2012

        ಏಡನ್‌ : ಯೆಮೆನ್‌ನ ದಕ್ಷಿಣ ಭಾಗದ ಪಟ್ಟಣವೊಂದರಲ್ಲಿ ಅಲ್‌ ಕಾಯಿದಾ ಆತ್ಮಾಹುತಿ ಬಾಂಬ್‌ ದಾಳಿಗೆ 42 ಮಂದಿ ಬಲಿಯಾಗಿದ್ದಾರೆ ಎಂದು ಯೆಮೆನ್‌ ಅಧಿಕಾರಿಗಳು ಹೇಳಿದ್ದಾರೆ.

        ದೇಶದ ಪೂರ್ವ ಭಾಗದಲ್ಲಿ ಅಮೆರಿಕದ ಡ್ರೋನ್‌ ದಾಳಿಗೆ ಶನಿವಾರ ಕನಿಷ್ಠ ಐವರು ಅಲ್‌ ಕಾಯಿದಾ ಉಗ್ರರು ಕೂಡ ಬಲಿಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

        ಸರಕಾರ ಉಗ್ರರ ಕೈಯಿಂದ ಮರಳಿ ವಶಪಡಿಸಿಕೊಂಡಿದ್ದ ಪ್ರದೇಶದಲ್ಲೇ ಈ ಬಾಂಬ್‌ ಸ್ಫೋಟ ಸಂಭವಿಸಿದೆ. ಮೃತರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಪಾಪ್ಯುಲರ್‌ ರೆಸಿಸ್ಟೆನ್ಸ್‌ ಕಮಿಟಿ ವತಿಯಿಂದ ಸಮಾರಂಭವೊಂದನ್ನು ವ್ಯವಸ್ಥೆಗೊಳಿಸಲಾಗಿತ್ತು. ಈ ಸಮಾರಂಭದ ವೇಳೆ ಆತ್ಮಾಹುತಿ ಬಾಂಬ್‌ ದಾಳಿ ನಡೆಯಿತು.

        ರಜಿ ಆಸ್ಪತ್ರೆಯಲ್ಲಿ ಬಾಂಬ್‌ ಸ್ಫೋಟದಿಂದ ಮಡಿದವರ 24 ಶವಗಳನ್ನಿರಿಸಲಾಗಿದೆ. ಇತರ 12 ಮಂದಿ ಏಡನ್‌ನ ವಿವಿಧ ಆಸ್ಪತ್ರೆಗಳಲ್ಲಿ ಭೀಕರ ಗಾಯಗಳಿಂದ ಸಾವಿಗೀಡಾಗಿದ್ದಾರೆ. ಆರು ಮಂದಿಯ ಶವಗಳನ್ನು ಸಂಬಂಧಿಕರು ದುರಂತ ಸ್ಥಳದಿಂದ ನೇರಾಗಿ ಮನೆಗೆ ಒಯ್ದಿದ್ದಾರೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image image
      • Copyright @ 2009 Udayavani.All rights reserved.
      • Designed & Hosted By 4cplus