ಪಡುಬಿದ್ರಿ : ನಿನ್ನೆ ಮಧ್ಯರಾತ್ರಿ 12.30 ರ ವೇಳೆಗೆ ಉಚ್ಚಿಲ ತುಂಬೆ ಆಡಿಟೋರಿಯಂ ಎದುರು ಮಂಗಳೂರಿನಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಕಾರೊಂದು ರಸ್ತೆಯ ತೀರ ಬಲಬದಿಗೆ ಸಾಗಿ ಮರವೊಂದಕ್ಕೆ ಢಿಕ್ಕಿಯಾಗಿ ಕುಂದಾಪುರ ವಿಜಯ ಸ್ಟೋರ್ ಮಾಲಕ ವಿಜಯ ಮೂರ್ತಿ ಕಾಮತ್ ಯಾನೆ ರಾಕೇಶ್ ಕಾಮತ್(24) ಎನ್ನುವವರು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ 4 ಮಂದಿ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.