Thursday, May 23, 2013
Last Updated: 5:22:14 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಯಾರೂ ಕೇಳ(ದ) ನಾರಿಕೇಳ
    • ಉಭಯ ಜಿಲ್ಲೆಗಳಲ್ಲಿ ತೆಂಗಿನಕಾಯಿ ಪರಿಸ್ಥಿತಿ "ನಾರಿಕೇಳ ಯಾರೂ ಕೇಳ'' ಎಂಬಂತಾಗಿದೆ

      • ಸುಭಾಶ್ಚಂದ್ರ ಕೆದೂರು | Aug 08, 2012

        ಉಡುಪಿ: ಮಾರಾಟಗಾರರು ಇತರ ರಾಜ್ಯ, ಜಿಲ್ಲೆಗಳಿಂದ ಬರುವ ತೆಂಗಿನಕಾಯಿಗಳನ್ನು ನೆಚ್ಚಿಕೊಂಡಿರುವುದರಿಂದ ಉಭಯ ಜಿಲ್ಲೆಗಳಲ್ಲಿ ತೆಂಗಿನಕಾಯಿ ಪರಿಸ್ಥಿತಿ "ನಾರಿಕೇಳ ಯಾರೂ ಕೇಳ' ಎಂಬಂತಾಗಿದೆ. ಈ ಬಾರಿ ರೈತರಿಗೆ ಅಡಿಕೆ, ಕಾಳು ಮೆಣಸು, ಗೇರು ಖುಷಿ ನೀಡಿದ್ದರೆ ಕಾಯಿ ಮಾತ್ರ ಕೈ ಕಚ್ಚಿ ಬಿಟ್ಟದೆ.

        ಜಿಲ್ಲೆಗಳಲ್ಲಿ ಫೆಬ್ರವರಿ ಅಂತ್ಯಧಿದಲ್ಲಿಯೆ ತೆಂಗಿನಕಾಯಿಗಳ ಬೆಲೆ ಬಹುಧಿತೇಕ ಇಳಿಮುಖವಾಗಿತ್ತು. ಮೇ ಮಧ್ಯಾಂತರದಲ್ಲಿ ಬೆಳೆಗಾರರ ಸ್ಥಿತಿ ಶೋಚಧಿನೀಯಧಿವಾಯಿತು. 8 ರೂ. ರಿಂದ 9 ರೂ.ಗಳಿಗೆ ಬಿಕರಿಯಾಗುತ್ತಿದ್ದ ತೆಂಗಿನಕಾಯಿಗಳನ್ನು ಈಗ 4 ರೂ.ಗೂ ಕೇಳುಧಿವವರಿಲ್ಲ. ಅದರೆ ಚಿಲ್ಲರೆ ಮಾರಾಟದ ಅಂಗಡಿಗಳ ಕತ್ತು ಕೊಯ್ಯವ ದರ ಯಥಾಸ್ಥಿತಿಯಲ್ಲಿದೆ. ಹಿಂದೆ ಮಾರಾಟಗಾರರು ಪೈಪೋಟಿ ನಡೆಸಿ ಮುಂಗಡ ಕೊಟ್ಟು ಕಾಯಿ ಖರೀದಿ ಮಾಡುತ್ತಿದ್ದರು. ಅದರೆ ಈಗ ರೈತನತ್ತ ತಿರುಗಿ ಸಹ ನೋಡುತ್ತಿಲ್ಲ.

        ನುಸಿರೋಗ, ಕಾಯಿ ಕೀಳುವವರ ಅಭಾವ, ಕಾಡು ಪ್ರಾಣಿಗಳ ಹಾವಳಿ, ಇನ್ನೊಂದೆಡೆ ದರ ಕುಸಿತದಿಂದ ರೈತರಿಗೆ ತೆಂಗು ಬೆಳೆಯ ಬಗ್ಗೆ ಹೇವರಿಕೆ ಬಂದು ಹೋಗಿದೆ. ಬಹುತೇಕ ಬೆಳೆಗಾರರು ಸಣ್ಣ ಹಿಡುವಳಿ ಹೊಂದಿರುವುದರಿಂದ ಸೂಕ್ತ ಕ್ರಮದಲ್ಲಿ ದಾಸ್ತಾನು ಮಾಡುವ ಸ್ಥಿತಿಯಲ್ಲಿ ಇವರಿಲ್ಲ. ಇಟ್ಟರೆ ಅದು ಮೊಳಕೆಯಾಗುವ ಸಂಭವವಿದೆ. ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ತೆಂಗು ಈಗೀಗ ರೈತರೊಂದಿಗೆ ಜೂಜಿಗೆ ನಿಂತಂತಿದೆ. ಈ ಭಾಗದಲ್ಲಿ ತೆಂಗಿನ ವಿವಿಧ ಉತ್ಪನ್ನಗಳನ್ನು ತಯಾರಿಸುವ ಬೃಹತ್‌ ಕಂಪೆನಿಗಳು ಈ ವರೆಗೂ ಹುಟ್ಟಿಕೊಂಡಿಲ್ಲ. ಕೈಗಾರಿಕೆ ಇಲಾಖೆಯು ಆಗಾಗ ಟೆಕ್ನಾಲಜಿ ಪಾರ್ಕ್‌ ಸ್ಥಾಪನೆಯಾಗಲಿದೆ ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಉಚ್ಚರಿಸುತ್ತಲೆ ಇದೆ. ಫ‌ಲಿತಾಂಶ ಮಾತ್ರ "ಂ'

        ಕೊಬ್ಬರಿ ಕಂಡರೆ ಅಷ್ಟಕಷ್ಟೆ

        ಅವಿಭಜಿತ ಜಿಲ್ಲೆಗಳ ರೈತರು ಕೊಬ್ಬರಿಗೆ ಹೆಚ್ಚಿನ ಆದ್ಯತೆ ನೀಡಧಿದಿರುವುದು ತೆಂಗಿನಿಂದ ಲಾಭ ಪಡೆಧಿಯಲು ಹಿನ್ನಡೆಯಾಗುತ್ತಿದೆ. ಏಕೆಂದರೆ ಕೊಬ್ಬರಿಗೆ ಸರಕಾರವು ಬೆಂಬಲ ಬೆಲೆ ಘೋಷಿಸಿದೆ. ತೆಂಗಿನ ಕಾಯಿಗಳಿಗೆ ಬೆಂಬಲ ಬೆಲೆ ಇಲ್ಲ. ಬೆಂಬಲ ಬೆಲೆ ಘೋಷಿಸುವಂತೆ ರೈತರು ಹಕ್ಕೊತ್ತಾಯ ಮಂಡಿಸಿಲ್ಲ. ಕಳೆದ ಬಾರಿ ಸರಕಾರ ಕ್ವಿಂ. ಕೊಬ್ಬರಿಗೆ 1,500 ರೂ. ಬೆಂಬಲ ಬೆಲೆ ನೀಡಿತ್ತು. ಇದರಿಂದ ಲಾಭವಾಗಿದ್ದು ಮಳೆ ಕಡಿಮೆ ಬೀಳುವ ಜಿಲ್ಲೆಗಳ ರೈತರಿಗೆ. ಕರಾವಳಿಯ ರೈತರು ಮಳೆಗಾಲದಲ್ಲಿ ಕಾಯಿ ಒಣಗಿಸುವುದು ಕಷ್ಟ ಅಲ್ಲದೆ ಕಾಯಿ ಸುಲಿಯಲು ಕೂಲಿಯವರು ಸಿಗುವುದಿಲ್ಲ ಒಂದು ವೇಳೆ ಸಿಕ್ಕಿದರೆ ಅವರ ಸಂಬಳ ದುಬಾರಿ.

        ಹೋಂಡಾಕ್ಕಿಂತ "ಬೊಂಡ' ಬಿರುಸು

        ಸುಲಿದ ಅಥವಾ ಸುಲಿಯದ ಕಾಯಿಯನ್ನು ಕೇಳುವರಿಲ್ಲ ಅದರೆ ಬೊಂಡಕ್ಕೆ (ಸೀಯಾಳ) ಬೇಡಿಕೆಯಿದೆ. ಪೇಟೆಗಳಲ್ಲಿ ಬೊಂಡವೊಂದು 15ರಿಂದ 18 ರೂ. ವರೆಗೆ ಬಿಕರಿಧಿಯಾಗುಧಿತ್ತಿವೆ. ಇದರಿಂದ ರೈತರಿಧಿಗೇನೂ ಲಾಭವಿಲ್ಲ.

        ತೆಂಗಿನ ಮೇಲೆ ತಗ್ಗದ ವ್ಯಾಮೋಹ

        ತೆಂಗು ಬೆಳೆಗೆ ಉತ್ತಮ ದಿನಗಳು ಬರಬಹುದು ಎಂಬ ನಿರೀಕ್ಷೆ, ಇಲ್ಲಿನ ಹವಾಮಾನ, ಮರುಳು ಮಿಶ್ರಿತ ಮಣ್ಣು ಈ ಬೆಳಗೆ ಪೂರಕವಾಗಿರುವುದರಿಂದ ರೈತರು ಇತರ ವಾಣಿಜ್ಯ ಬೆಳೆಗಳತ್ತ ಗಮನ ಹರಿಸದೆ ತೆಂಗನ್ನು ಹೆಚ್ಚಾಗಿ ಅಲಂಬಿಸಿದ್ದು ಇಂದಿನ ದಿನಗಳಲ್ಲಿ ಮಾರಕವಾಗುತ್ತಿದೆ. ಗ್ರಾಮೀಣ ಭಾಗಧಿದಲ್ಲಿ ಈಗಲೂ ಕೆಲವರು ತೆಂಗಿನ ತೋಟ ಮಾಡುವುದಕ್ಕೆ ಮುಂದಾಗುಧಿತ್ತಿದ್ದಾರೆ. ತೆಂಗಿನ ಕಾಯಿಗೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಇಲ್ಲ ಎಂಬ ಅರಿವು ಅವರಿಗೆ ಇನ್ನೂ ಬಂದಂತಿಲ್ಲ.

        ಅಡಿಕೆ ಬೆಳೆಗೆ ಸಹಕಾರ ಸಂಸ್ಥೆ ಕ್ಯಾಂಪ್ಕೋ ಇರುವಂತೆ ತೆಂಗಿಗೂ ಒಂದು ನೆಲೆಯಾಗಬೇಕಿದೆ.

        ಮರ ಮುಟ್ಟಿದ ಮೇಲೆ ಮಾತಿಲ್ಲ

        ರೋಗ, ಕೋತಿಗಳ ಕಾಟದಿಂದ ಉಳಿದ ಕಾಯಿಗಳನ್ನು ಕೀಳಿಸುವುದಕ್ಕೆ ಕೂಲಿಯವರನ್ನು ಹುಡುಕಲೇ ಬೇಕು. ಒಬ್ಬ ಸಾಮಾನ್ಯ ಕೂಲಿ ಮಾಡುವವ ತೆಂಗಿನ ಮರ ಹತ್ತುವ ಕೆಲಸಕ್ಕೆ ಬರಲಾರ. ಆದಕ್ಕೆ ಬೇರೆಯೇ ಆದ ವ್ಯಕ್ತಿಗಳಿರುತ್ತಾರೆ. ಅವರಿಗೆ ಗ್ರಾಮೀಣ ಭಾಗದಲ್ಲಿ ಮರವೊಂದಕ್ಕೆ ಕನಿಷ್ಠ 10, ಗರಿಷ್ಠ 25 ರೂ. ನಗರ ಪ್ರದೇಶಧಿದಲ್ಲಿ ಬರೋಬ್ಬರಿ 40 ರೂ. ಇದು ಉಡುಪಿ ಇಂದ್ರಾಳಿ, ಕುಂಜಿಬೆಟ್ಟು, ಆದಿ ಉಡುಪಿ, ಮಲ್ಪೆ, ಕಿನ್ನಿಮೂಲ್ಕಿ ಮೊದಲಾದ ಕಡೆಗಳಲ್ಲಿ ಸಾಮಾನ್ಯಧಿವಾಗಿದೆ. ಇನ್ನು ಕಾಯಿ ಸಂಖ್ಯೆಯ ಆಧಾರದಲ್ಲಿ 100 ಕ್ಕೆ  100 ರೂ., ಇಲ್ಲಿ ಮರದ ಎತ್ತರ, ಬೀಳಿಸುವ ಕಾಯಿಧಿಗಳು ಮಾನದಂಡವಲ್ಲ. ಮುಟ್ಟಿಧಿದರೆ ಮುಗಿಯಿತು ಮತ್ತೆ ಮಾತಿಲ್ಲ. ಇಷ್ಟು ದುಬಾರಿ ಹಣ ತೆತ್ತರು ಕೊಳ್ಳುವವರ್ಯಾರು ಎಂಬ ಪ್ರಶ್ನೆ ರೈತರ ಎದುರಾಗುತ್ತದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus