Friday, May 24, 2013
Last Updated: 12:05:37 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಫಿಫಾ ರಾಂಕಿಂಗ್‌: ಭಾರತಕ್ಕೆ 168ನೇ ಸ್ಥಾನ
    • ಭಾರತ ಫ‌ುಟ್ಬಾಲ್‌ ತಂಡ ಇತಿಹಾಸದಲ್ಲಿ ಮೊದಲ ಬಾರಿಗೆ ಫೀಫಾ ರಾಂಕಿಂಗ್‌ನಲ್ಲಿ ಕನಿಷ್ಠ 168ನೇ ಸ್ಥಾನಕ್ಕೆ ಕುಸಿದಿದೆ.

      • Udayavani | Aug 08, 2012

        ನವದೆಹಲಿ: ಭಾರತ ಫ‌ುಟ್ಬಾಲ್‌ ತಂಡ ಇತಿಹಾಸದಲ್ಲಿ ಮೊದಲ ಬಾರಿಗೆ ಫೀಫಾ ರಾಂಕಿಂಗ್‌ನಲ್ಲಿ ಕನಿಷ್ಠ 168ನೇ ಸ್ಥಾನಕ್ಕೆ ಕುಸಿದಿದೆ.

        ಬುಧವಾರ ಬಿಡುಗಡೆಯಾದ ರಾಂಕಿಂಗ್‌ನಲ್ಲಿ ಭಾರತ ಫ‌ುಟ್ಬಾಲ್‌ ತಂಡ 5 ಸ್ಥಾನಗಳ ಕುಸಿತ ಅನುಭವಿಸಿ 168ನೇ ಸ್ಥಾನ ಪಡೆದಿದೆ. ಇದು ಭಾರತ ತಂಡದ ಅತೀ ಕಡಿಮೇಯ ಶ್ರೇಯಾಂಕವಾಗಿದೆ.

        ಕಳೆದ ಒಂದು ತಿಂಗಳಿನಿಂದ ಭಾರತ ಒಂದೂ ಪಂದ್ಯ ಆಡಿಲ್ಲ. 1991ರ ನಂತರ ಇದೇ ಮೊದಲ ಬಾರಿಗೆ ಭಾರತ ಕನಿಷ್ಠ 168ನೇ ಸ್ಥಾನಕ್ಕೆ ಕುಸಿದಿದೆ. 1996ರಲ್ಲಿ ಭಾರತ ಮೊದಲ ಬಾರಿಗೆ ಗರಿಷ್ಠ 96ನೇ ಸ್ಥಾನ ಪಡೆದಿತ್ತು.

        ಅಗಸ್ಟ್‌ 22 ರಿಂದ ದೆಹಲಿಯಲ್ಲಿ ನೆಹರು ಕಪ್‌ ಟೂರ್ನಿ ಪ್ರಾರಂಭವಾಗಲಿದ್ದು, ಹಾಲಿ ಚಾಂಪಿಯನ್‌ ಭಾರತ ತಂಡಕ್ಕೆ ಇದು ಭಾರೀ ಹಿನ್ನಡೆಯಾಗಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ತಂಡಗಳಲ್ಲಿ ಸಿರಿಯಾ 15 ಸ್ಥಾನ ಕುಸಿತ ಅನುಭವಿಸಿದರೂ ಅತ್ಯಧಿಕ 147ನೇ ಸ್ಥಾನ ಪಡೆದಿದೆ.

        ಈ ಮೊದಲು ಭಾರತ ತಂಡ 1995ರಲ್ಲಿ 165 ಸ್ಥಾನ ಪಡೆದಿತ್ತು. ಆನಂತರ ಕಳೆದು ಏಫ್ರಿಲ್‌ನಲ್ಲಿ ಭಾರತ ತಂಡ ಕುಸಿತ ಅನುಭವಿಸಿತ್ತು. ಸ್ಪೇನ್‌ ನಂ.1 ಸ್ಥಾನ ಪಡೆದರೆ, ಜರ್ಮನಿ, ಇಂಗ್ಲೆಂಡ್‌ ನಂತರದ ಸ್ಥಾನ ಪಡೆದಿವೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus