Tuesday, May 21, 2013
Last Updated: 4:33:01 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಣಿಪಾಲಕ್ಕೊಂದು ಗ್ಯಾಲರಿ
    • ವೈವಿಧ್ಯ ಮಯ ಕಲೆ-ಕಲಾಕೃತಿಗಳಿಂದ ವಿಶೇಷವಾಗಿ ವಿನ್ಯಾಸಗೊಂಡಿದೆ.

      • Udayavani | Aug 10, 2012

        ದೇಶ ವಿದೇಶಗಳಲ್ಲಿ ಪ್ರಸಿದ್ಧಿಗೊಂಡಿರುವ ಮಣಿಪಾಲ ಸಮಗ್ರವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಇಲ್ಲಿಗೊಂದು ಕಲಾತ್ಮಕ ಆರ್ಟ್‌ ಗ್ಯಾಲರಿ ಅಗತ್ಯವೆಂದು ಮನಗಂಡ ಸ್ಥಳೀಯ ಯುವಕಲಾವಿದರ ಬಳಗ ಇಲ್ಲೊಂದು ಗ್ಯಾಲರಿಯನ್ನು ಆರಂಭಿಸಿಯೇ ಬಿಟ್ಟಿದ್ದಾರೆ. ಇದು "ದಿ ಗ್ಯಾಲರಿ'  ಎಂದು ನಾಮಾಂಕಿತಗೊಂಡಿದೆ, ವೈವಿಧ್ಯ ಮಯ ಕಲೆ-ಕಲಾಕೃತಿಗಳಿಂದ ವಿಶೇಷವಾಗಿ ವಿನ್ಯಾಸಗೊಂಡಿದೆ.

        ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳುವ ಮಾರ್ಗದಲ್ಲಿ ದಿ ಗ್ಯಾಲರಿ ಇದೆ. ಇಲ್ಲಿ ಬರೇ ಚಿತ್ರಕಲಾಕೃತಿಗಳು ಮಾತ್ರ ಇರುವುದಲ್ಲ. ಶಿಲ್ಪಗಳು, ಉಬ್ಬುಶಿಲ್ಪಗಳು, ಟೆರ್ರಾಕೋಟಾ ಕಲಾಕೃತಿಗಳು, ಕುಬj ವೃಕ್ಷಗಳು ಇತ್ಯಾದಿ... ವೈವಿಧ್ಯಮಯವಾಗಿವೆ. "ದಿ ಗ್ಯಾಲರಿ'ಯ ಚೊಚ್ಚಲ ಕಲಾಪ್ರದರ್ಶನದಲ್ಲಿ ಖ್ಯಾತ ಕಲಾವಿದರಾದ ಕೆ.ಎಲ್‌. ಭಟ್‌, ಗಂಜೀಫಾ ರಘುಪತಿ ಭಟ್‌, ವೆಂಕಿ ಪಲಿಮಾರ್‌, ಶ್ರೀನಾಥ್‌ ಮಣಿಪಾಲ, ರವಿ ಹಿರೇಬೆಟ್ಟು, ವಿದ್ಯಾ ಭಟ್‌ ಮೊದಲಾದವರ ಕಲಾಕೃತಿಗಳಿದ್ದವು. ಇಲ್ಲಿ ಪ್ರತಿಷ್ಠಾಪಿಸಿರುವ ಕುಬj ವೃಕ್ಷಗಳನ್ನು ನೋಡುವುದೇ ಒಂದು ಖುಶಿ. ಖ್ಯಾತ ಉರಗತಜ್ಞ ಗುರುರಾಜ ಸನಿಲ್‌ ಅವರ ಸಂಗ್ರಹದಲ್ಲಿರುವ 5ರಿಂದ 40 ವರ್ಷಗಳಷ್ಟು ಪ್ರಾಯದ ಕುಬjವೃಕ್ಷಗಳು ಇಲ್ಲಿವೆ.

        ಕಲಾವಿದರಿಗಾಗಿ ಹಾಗೂ ಕಲಾಭಿಮಾನಿಗಳಿಗಾಗಿ ಈ ಗ್ಯಾಲರಿ ಸದಾ ತೆರೆದಿರುತ್ತದೆ ಎನ್ನುತ್ತಾರೆ ಇದರ ಮಾಲಕ ನರೇಂದ್ರ ಪಿ. ನಾಯಕ್‌ ಹಾಗೂ ಮಿತ್ರ ಬಲರಾಮ ಭಟ್‌.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus